logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಒಕ್ಕಲುತನ
ರೈತಾಪಿ ಕೆಲಸ,

ಒಕ್ಕಲುತನ
ಕುಟುಂಬ ಜೀವನ.

ಒಕ್ಕಲೆಬ್ಬಿಸು
ಊರು ಬಿಡಿಸು, ಊರಲ್ಲಿ ವಾಸವಿರದಂತೆ ಮಾಡಿಸು, ಜಾಗ ಖಾಲಿ ಮಾಡಿಸು.

ಒಕ್ಕಲೋಗು
ಸಂಸಾರಸಮೇತ ಊರು ಬಿಟ್ಟು ಹೋಗು.

ಒಕ್ಕು
ಒಕ್ಕುವಿಕೆ, ಕಣದ ಕೆಲಸ, ಪೈರಿನಿಂದ ಕಾಳನ್ನು ಬೇರ್ಪಡಿಸುವ ಕೋಲಸ.

ಒಗಟು
ಗಾದೆ ಮಾತು, ಅರ್ಥವತ್ತಾದ ಮಾತುಗಳನ್ನು ಬಳಸಿ ಹೇಳುವುದು, ಒಡಗತೆ.

ಒಗಡಿಕೆ
ವಾಕರಿಕೆ, ವಾಂತಿ ಬಂದಂತಾಗು.

ಒಗಡು
ವಾಕರಿಸು, ವಾಂತಿ ಮಾಡು.

ಒಗರಡಕೆ
ಚೊಗರು ಹಾಕದೇ ಇರುವ ಹಸಿಯಡಕೆ.

ಒಗರು
ಹುಳೀ ಮತ್ತು ಕಹಿಯ ಬೆರಕೆ, ಆರು ವಿಧದ ರಸಗಳಲ್ಲಿ ಒಂದು (ಹುಳಿ, ಉಪ್ಪು, ಖಾರ, ಸಿಹಿ, ಕಹಿ, ಒಗರು)


logo