Sankshipta Kannada Nighantu (Kannada Sahitya Parishattu)
Kannada Sahitya Parishattu
ಅಂಗಹೀನ
ಅಂಗವಿಕಲ.
ಅಂಗಳ
ಅಂಗಣ.
ಅಂಗಾತ
ಬೆನ್ನು ಕೆಳಗಾಗಿ.
ಅಂಗಾರ
1. ಕೆಂಡ.
2. ಇದ್ದಲು.
3. ದೇವರ ಧೂಪಾರತಿಯ ಕೆಂಡವನ್ನು ನೀರಿನಲ್ಲಿ ಆರಿಸಿ ಅದರಿಂದ ಮಾಧ್ವರು ಹಣೆಯಲ್ಲಿ ಧರಿಸುವ ಊಧ್ರ್ವರೇಖೆ.
4. ಮಂಗಳ ಗ್ರಹ.
ಅಂಗಾರ ಹೋಳಿಗೆ
ಕೆಂಡದ ಮೇಲೆ ಸುಟ್ಟ ರೊಟ್ಟಿ.
ಅಂಗಾರಕ
ಮಂಗಳ ಗ್ರಹ.
ಅಂಗಾಲ್(ಲು)
ಕಾಲ ಅಡಿ.
ಅಂಗಿ
1. ಅಂಗಗಳುಳ್ಳ.
2. ಮುಖ್ಯವಾದ.
ಅಂಗಿ
(ಗಂಡಸರು) ಮೈಗೆ ತೊಡುವ ಉಡುಪು.
ಅಂಗಿಕೆ
ಅಂಗಿ.
ಅಂಗೀಕರಣ
ಒಪ್ಪಿಗೆ.
ಅಂಗೀಕರಿಸು
1. ಸ್ವೀಕರಿಸು.
2. ತಾಳು.
3. ಒಪ್ಪು.
ಅಂಗೀಕಾರ
ಅಂಗೀಕರಣ.
ಅಂಗುಟ
ಪಾದದ ಹೆಬ್ಬೆರಳು.
ಅಂಗುಲ(ಳ)
1. ಬೆರಳು.
2. ಒಂದು ಇಂಚು.
ಅಂಗುಲಿ(ಳಿ)
1. ಬೆರಳು.
2. ಗಜ ಕರ್ಣಿಕೆಯ ಗಿಡ.
3. ಅರಿದಾಳ.
ಅಂಗುಲಿತ್ರಾಣ
ಬೆರಳುಕಾಪು.
ಅಂಗುಲೀಯಕ
ಬೆರಳಿಗೆ ತೊಡುವ ಉಂಗುರ.
ಅಂಗುಷ್ಠ
1. ಪಾದದ ಹೆಬ್ಬೆರಳು.
2. ಹೆಬ್ಬೆರಳಿನ ಅಗಲದ ಅಳತೆ.
ಅಂಗುಳ್(ಳು)