भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಹೊರಗೆ

1. ಹೊರಗಡೆಗೆ.

2. ಬಹಿರಂಗದಲ್ಲಿ.

ಹೊರಗೆಡವು

ಹೊರಬೀಳುವಂತೆ ಮಾಡು.

ಹೊರಚಾಳಿ

1. ಹೊರಗಿನ ನಡವಳಿಕೆ.

2. ವ್ಯಭಿಚಾರ.

ಹೊರಚೆಲ್ಲು

1. ಹೊರಗೆ ಸುರಿ,- ಎರೆ.

2. ಹೊರಸೂಸು.

ಹೊರಚ್ಚು

1. ಬೇರೆ.

2. ದೂರ.

ಹೊರಜಿ(ಜೆ)

ದಪ್ಪವಾದ ಹಗ್ಗ, ಸರಪಣಿ ಮುಂತಾದುವು.

ಹೊರಡು

1. ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸು,- ಸಾಗು.

2. (ಮಾತು) ಹೊರಬರು.

3. ಗೋಚರವಾಗು.

4. (ಕಾರ್ಯಕ್ಕೆ) ಪ್ರಾರಂಭಿಸು.

ಹೊರತರು

ಪ್ರಕಾಶಕ್ಕೆ ಬರುವಂತೆ ಮಾಡು.

ಹೊರತು

1. ಅಲ್ಲದೆ.

2. ಬಿಟ್ಟು.

ಹೊರನೋಟ

ಹೊರಗಿನ ನೋಟ.

ಹೊರಪಡು

ಪ್ರಕಟಗೊಳ್ಳು.

ಹೊರಪು

1. ಮಳೆಯ ಮೋಡಗಳಿಲ್ಲದೆ ಆಕಾಶವು ನಿರ್ಮಲವಾಗಿ ಕಾಂತಿಯುಕ್ತವಾಗಿರುವುದು.

2. ಪದರ.

ಹೊರಬೀಳು

1. ಆಚೆ ನಡೆ.

2. ಹೊರಹೊಮ್ಮು.

ಹೊರವಲ(ಳ)ಯ

ಹೊರಗಿನ ಪ್ರದೇಶ.

ಹೊರವು

ಸೊಂಪು.

ಹೊರಸಂಚಾರ

ಹೊರಗಿನ ತಿರುಗಾಟ.

ಹೊರಸಲು

1. ಹಗ್ಗದ ಮಂಚ.

2. ಬಿದಿರಿನ ಬುಟ್ಟಿ.

ಹೊರಸು

1. ಒಂದು ಬಗೆಯ ಪಾರಿವಾಳ.

2. ಹಗ್ಗದ ಮಂಚ.

ಹೊರಸು

ಲೇಪಿಸು.

ಹೊರಹೊಮ್ಮು

1. ಹೊರಗೆ ಹರಿ.

2. ಪ್ರಕಟವಾಗು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App