भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಅಂಕುಡೊಂಕು

ವಕ್ರತೆ.

ಅಂಕುರ

1. ಮೊಳಕೆ.

2. ಕೂದಲು.

3. ರಕ್ತ.

4. ನೀರು.

5. ಊತ.

ಅಂಕುರವಡೆ

ಮೊಳಕೆಯಾಗು.

ಅಂಕುರವೇ¾ು

ರೋಮಾಂಚನವಾಗು.

ಅಂಕುರಾರ್ಪಣ

1. ಉತ್ಸವಾಂಗವಾಗಿ ಮೊತ್ತಮೊದಲು ಧಾನ್ಯಗಳನ್ನು ಮೊಳೆಯಲು ಹಾಕುವ ಶುಭಕರ್ಮ.

2. ಪ್ರಾರಂಭ.

ಅಂಕುರಿಸು

1. ಮೊಳಕೆಯಾಗು.

2. ಚಿಗುರು.

3. ನವಿರೇಳು.

4. ಏಳಿಗೆ ಹೊಂದು.

ಅಂಕುಶ

1. ಆನೆಯನ್ನು ನಡೆಸುವಾಗಲೂ ಹದ್ದಿನಲ್ಲಿಡಲೂ ಶಿಕ್ಷಿಸುವಾಗಲೂ ಉಪಯೋಗಿಸುವ ಒಂದು ಲೋಹದ ಸಾಧನ.

2. ಒಂದು ಆಯುಧ.

3. ಹಿಡಿತ.

ಅಂಕೆ

1. ಬಳಿಯುವಿಕೆ.

2. ಆಜ್ಞೆ.

3. ಹತೋಟಿ.

4. ದರ್ಪ.

5. ಸಂಖ್ಯೆಯನ್ನು ಬರೆಹದಲ್ಲಿ ತೋರಿಸುವ ಚಿಹ್ನೆ.

6. ಎಣಿಕೆ.

7. ಗುರುತು.

ಅಂಗ

1. ರೀತಿ.

2. ದೇಹ.

3. ಭಾಗ.

4. ಅವಯವ.

5. ಒಂದು ದೇಶ.

ಅಂಗಚಿತ್ತ

ಪಾರಿತೋಷಕವಾಗಿ ತನ್ನ ಮೈಮೇಲಿನಿಂದ ತೆಗೆದುಕೊಡುವ ವಸ್ತ್ರ ಆಭರಣ ಇತ್ಯಾದಿ.

ಅಂಗಚೇಷ್ಟೆ

ದೇಹದ ಚಲನೆ.

ಅಂಗಜ

ಮನ್ಮಥ.

ಅಂಗಜಾವ

ದೇಹ ರಕ್ಷಣೆಗಾಗಿ ಏರ್ಪಡಿಸಿದ ಸರದಿಯ ಕಾವಲು.

ಅಂಗಡಿ

1. ಪದಾರ್ಥಗಳನ್ನು ಮಾರುವ ಸ್ಥಳ.

2. ಆಡಂಬರ.

3. ಒರಳಿನ ಕುಳಿಯ ಸುತ್ತಲೂ ಇರುವ ಜಾಗ.

ಅಂಗಡಿಗೇರಿ

ಅಂಗಡಿಗಳು ಇರುವ ಬೀದಿ.

ಅಂಗಣ

ಮನೆಗೆ ಸೇರಿರುವ ಆವರಣದ ಬಯಲು – ಮುಂಭಾಗ.

ಅಂಗದ

1. ತೋಳಿನ ಬಳೆ.

2. ವಾಲಿಯ ಮಗ.

ಅಂಗನವಾಡಿ

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಯಡಿಯಲ್ಲಿ ನಡೆಸಲಾಗುವ ಶಿಶು ಸಂರಕ್ಷಣಾ ಕೇಂದ್ರ.

ಅಂಗನೆ

ಹೆಂಗಸು.

ಅಂಗಪ್ರದಕ್ಷಿಣ

ಉರುಳು ಸೇವೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App