भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234567894142Next >

1. ಕನ್ನಡ ವರ್ಣಮಾಲೆಯ ನಲವತ್ತೈದನೆಯ ಅಕ್ಷರ.

2. ಐದು ಎಂಬಸಂಖ್ಯೆಯ ಸಂಕೇತ.

ಶಕ

1. ನಿರ್ದಿಷ್ಟವಾದ ಕಾಲದಿಂದ ಆರಂಭಿಸುವ ಕಾಲಗಣನೆ.

2. ಪರಿವರ್ತನೆಯ ಕಾಲ.

3. ಒಂದು ದೇಶದ ಹೆಸರು.

4. ಒಂದು ಜನಾಂಗದ ಹೆಸರು.

ಶಕಟ

1. ರಥ.

2. ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ.

3. ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು.

ಶಕಟರೇಫ

ದ್ರಾವಿಡಭಾಷೆಯ ವರ್ಣ ಮಾಲೆಯ ಒಂದು ವಿಶೇಷಾಕ್ಷರ.

ಶಕಟವ್ಯೂಹ

ಒಂದು ಬಗೆಯ ಸೇನಾವ್ಯೂಹ.

ಶಕಪುರುಷ

1. ಶಕೆಯನ್ನು ಪ್ರಾರಂಭಿಸಲು ಕಾರಣನಾದ ವ್ಯಕ್ತಿ.

2. ಒಂದು ಕಾಲದ ಅತ್ಯಂತ ಸತ್ತ್ವಶಾಲಿಯಾದ ವ್ಯಕ್ತಿ.

ಶಂಕರ

1. ಮಂಗಳವನ್ನುಂಟುಮಾಡುವವನು.

2. (ಅದ್ವೈತ) ಮತಪ್ರವರ್ತಕರಾದ ಆದಿಶಂಕರಾಚಾರ್ಯ.

ಶಂಕರ

ಸಂತೋಷವನ್ನುಂಟುಮಾಡುವ.

ಶಂಕರಗಂಡ

ಒಂದು ಬಗೆಯ ಧಾನ್ಯ.

ಶಂಕರಪಾ(ಪೋ)ಳಿ

ಒಂದು ಬಗೆಯ ಕರಿದ ತಿಂಡಿ.

ಶಂಕರಾರಿ

ಶಿವನ ಶತ್ರು.

ಶಂಕರಿ

1. ಶಿವನ ಹೆಚಿಡತಿ.

2. ಶಮೀವೃಕ್ಷ.

3. ಮಂಗಳವನ್ನುಂಟು ಮಾಡುವವಳು.

4. ಒಂದು ಬಗೆಯ ಪಾತ್ರೆ.

ಶಕಲ

1. ತುಂಡು.

2. ಅರ್ಧ ಭಾಗ.

3. ತಲೆಬುರುಡೆ.

4. ತೊಗಲು.

ಶಕವರ್ಷ

ಶಾಲಿವಾಹನ ಶಕಗಣನೆಯ ವರ್ಷ.

ಶಕಳ

ತುಂಡು.

ಶಂಕಿತ

ಸಂಶಯಾಸ್ಪದವಾದ.

ಶಂಕಿತ

1. ಸಂದೇಹ.

2. ಅನುಮಾನ ಹೊಂದಿದ ವ್ಯಕ್ತಿ.

3. ಹೆದರಿದ ವ್ಯಕ್ತಿ.

ಶಂಕಿಸು

1. ಅನುಮಾನಿಸು.

2. ಆತಂಕಪಡು.

ಶಂಕು

1. ಪಂಚಮಹಾವಾದ್ಯಗಳಲ್ಲಿ ಒಂದು.

2. ಗೂಟ.

3. ವೃತ್ತಾಕಾರದ (ಅಥವಾ ಇತರ ವಕ್ರಾಕಾರದ) ಸಮತಳ ಅಡಿ, ಅಲ್ಲಿಂದ ಅಗ್ರಕ್ಕೆ ಕ್ರಮೇಣ ಚೂಪಾಗಿ, ಅಗ್ರದಲ್ಲಿ ಬಿಂದುವಾಗಿರುವ ಘನರೂಪ.

4. ಮರದ ಕೊರಡು.

5. ನೆರಳಿನಿಂದ ಕಾಲವನ್ನು ಕಂಡುಹಿಡಿಯುವ ಯಂತ್ರದ ಮುಳ್ಳು.

6. (ಭೂಮಿಂ

ಶಕುಂತ

1. ಹಕ್ಕಿ.

2. ಶಕುನದ ಹಕ್ಕಿ.

< previous1234567894142Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App