भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12Next >

ಕನ್ನಡ ವರ್ಣಮಾಲೆಯ ನಲವತ್ತೆರಡ ನೆಯ ಅಕ್ಷರ.

ಱ(ಱೆ)ಕ್ಕೆ

(ಪಕ್ಷಿಗಳ) ರೆಕ್ಕೆ.

ಱಂ(ಱೆಂ)ಚೆ

ಆನೆ, ಕುದುರೆಗಳ ಪಕ್ಕರಕ್ಕೆ.

ಱಕಾರ

`ಱ’ ಎಂಬ ಅಕ್ಷರ.

ಱಂಚಿ(ಜಿ)ಕೆ

1. ಸವಾರಿಗಾಗಿ ಆನೆಯ ಮೇಲೆ ರಚಿಸಿದ ಪೀಠ.

2. ಒಂದು ಬಗೆಯ ಸಸ್ಯ.

ಱಚ್ಚೆ

1. ಕೆಸರು.

2. ಮಾತ್ಸರ್ಯ.

3. ದೂಷಣೆ.

4. ರಗಳೆ.

5. ಛಲ.

ಱಚ್ಚೆಮಾಡು

ರಗಳೆಮಾಡು.

ಱಟ್ಟಡಿ

ಬಯ್ಗುಳು.

ಱಟ್ಟೆ

1. ಪಕ್ಷಿಯ ರೆಕ್ಕೆ,- ಪಕ್ಕ.

2. ಮೊಳಕೈಯಿಂದ ಭುಜದವರೆಗಿನ ಕೈಯ ಭಾಗ.

ಱವ(ವಿ)ಕೆ

ಹೆಂಗಸರು ತೊಡುವ ಕುಪ್ಪಸ.

ಱೞ

`ೞ’ ಎಂಬ ಅಕ್ಷರವನ್ನು ಗುರುತಿಸಲು ಉಪಯೋಗಿಸುವ ಸಂಜ್ಞೆ.

ಱಾಟಣ(ಳ)

ಬಾವಿಯಿಂದ ನೀರೆತ್ತುವ ಗಾಲಿಯ ಯಂತ್ರ.

ಱಾಟಾಳ

1. ಱಾಟಣ.

2. ಮರದ ಕುದುರೆಗಳೂ ತೊಟ್ಟಿಲುಗಳೂ ಇದ್ದು ಚಕ್ರಾಕಾರವಾಗಿ ತಿರುಗುವ ಆಟದ ಯಂತ್ರ.

ಱುಂಜೆ

ಒಂದು ಬಗೆಯ ಚರ್ಮವಾದ್ಯ.

ಱೆಂಕೆ

ಱಕ್ಕೆ.

ಱೆಕ್ಕಟ

1. ಬರಿದಾದುದು.

2. ಮೌನ.

ಱೆಕ್ಕಟ

ನಿಷ್ಕಾರಣವಾಗಿ.

ಱೆಪ್ಪು

ಹೊಡೆ.

ಱೆಪ್ಪೆ

ಕಣ್ಣಿನ ಎವೆ,- ಎಮೆ.

ಱೊಂಪೆ

ಕೆಸರು.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App