Sankshipta Kannada Nighantu (Kannada Sahitya Parishattu)
Kannada Sahitya Parishattu
ರಂಗಕಾಱ
ಬಟ್ಟೆಗಳನ್ನು ಶುಭ್ರಮಾಡುವವನು.
ರಣಗೞ್ತಲೆ
ಯುದ್ಧಭೂಮಿಯಲ್ಲಿ ಧೂಳು, ಬಾಣಸಮುದಾಯ, ಧ್ವಜ ಮೊದಲಾದುವು ಗಳಿಂದ ಉಂಟಾಗುವ ಕತ್ತಲೆ.
ರನ್ನವೆಸ
ರತ್ನವನ್ನು ಕುಂದಣಿಸುವಿಕೆ.
ರನ್ನೆ
ಶ್ರೇಷ್ಠಳಾದವಳು.
ರಪಣ
1. ಆಸ್ತಿ.
2. ರಕ್ಷಿಸುವ ಸಾಧನ.
ರಪಾಟ
ವೇಗವಾದ ಓಟ.
ರಪ್ಪು
ಬಟ್ಟೆಯಲ್ಲಿ ತೂತುಬಿದ್ದ ಭಾಗವನ್ನು ದಾರದಿಂದ ಹೊಲಿದು ಜೋಡಿಸುವುದು.
ರಫ್ತು
ಒಂದು ದೇಶದಿಂದ ಪರದೇಶಕ್ಕೆ ಸರಕನ್ನು ಕಳುಹಿಸುವುದು.
ರಬಟಿ
ಅನಾವಶ್ಯಕವಾದ ಆಯಾಸ ವಾದ.
ರಬ್ಬಳಿಗೆ
ಜೋಳದ ಹಿಟ್ಟಿನಿಂದ ಮಾಡಿದ ಗಂಜಿ,- ಅಂಬಲಿ.
ರಬ್ಬು
ಆಡಂಬರ.
ರಭಸ
1. ವೇಗ.
2. ಆರ್ಭಟ.
3. ಸಿಟ್ಟು.
ರಮ
1. ಹಿತಕರವಾದುದು.
2. ಇನಿಯ.
ರಮಣ
1. ಹಿತವನ್ನು ಉಂಟುಮಾಡು ವಂತಹುದು.
2. ವಿಲಾಸ.
3. ನಲ್ಲ.
4. ಗಂಡ.
5. ಕಾಮ.
6. ಕತ್ತೆ.
ರಮಣಿ
1. ಸುಂದರಳಾದ ತರುಣಿ.
2. ಹೆಂಡತಿ.
3. ಹೆಂಗಸು.
4. ನಲ್ಲೆ.
ರಮಣೀಯ
ಮನೋಹರವಾದುದು.
ರಮಣೀಯ
1. ಆನಂದವನ್ನುಂಟುಮಾಡುವ.
2. ಚೆಲುವಾದ.
ರಮಾಧವ
ಲಕ್ಷ್ಮಿಯ ಪತಿ.
ರಮಾರಮಣ
ರಮಾಧವ.
ರಮಿಯಿಸು