भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ದಫನ್

ಹೆಣವನ್ನು ಹೂಳುವಿಕೆ,- ಮಣ್ಣು ಮಾಡುವಿಕೆ.

ದಫೇದಾರ

ಒಬ್ಬ ಪೋಲೀಸು ಅಧಿಕಾರಿ.

ದಫ್ತರ(ರು)

1. (ಸರ್ಕಾರದ) ಕಚೇರಿಯ ಕಾಗದ ಪತ್ರ,- ದಾಖಲೆ,- ಲೆಕ್ಕಪತ್ರ.

2. ವ್ಯವಸ್ಥಿತವಾಗಿ ಜೋಡಿಸಿಟ್ಟ ಕಾಗದ ಪತ್ರಗಳ ಕಟ್ಟು.

3. ಕಾರ್ಯಾಲಯ.

ದಫ್ತರಖಾನೆ

(ಸರ್ಕಾರದ) ಕಾಗದ ಪತ್ರಗಳನ್ನು ಇಟ್ಟಿರುವ ಕಚೇರಿ.

ದಫ್ತರಬಂದಿ

ಕಚೇರಿಯ ಕಾಗದ ಪತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವವನು.

ದಂಬ

ಮೋಸ.

ದಬದಬೆ

ಜಲಪಾತ.

ದಬಾಯಿಸು

1. ನೂಕು.

2. ಗದರಿಸು.

ದಂಬೆ

ಗದ್ದೆ, ತೋಟಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರು ಹಾಯಿಸಲು ಮಾಡಿರುವ ಅರ್ಧಕ್ಕೆ ಸೀಳಿದ ತಾಳೆ, ತೆಂಗು, ಬಿದಿರು ಮೊದಲಾದ ಮರಗಳ ದೋಣಿ,- ಕಾಲುವೆ.

ದಬ್ಬಣ(ಳ)

ಗೋಣಿಚೀಲ ಮುಂತಾದುವನ್ನು ಹೊಲಿಯಲು ಉಪಯೋಗಿಸುವ, ಸೂಜಿ ಯಂತಹ ದಪ್ಪ ಸಾಧನ.

ದಬ್ಬಾಳಿಕೆ

ಬಲಾತ್ಕಾರದ ಆಡಳಿತ.

ದಬ್ಬು

1. ನೂಕು.

2. ಮುಂದೂಡು.

ದಬ್ಬುಕ

ಕಲ್ಲನ್ನು ಸೀಳುವ ಒಂದು ಬಗೆಯ ಉಪಕರಣ.

ದಬ್ಬುದಲೆ

1. ತಬ್ಬಿಬ್ಬು.

2. ಒದರಾಟ.

ದಬ್ಬುಹಾಕು

ಮಗುಚಿಡು.

ದಬ್ಬೆ

ಬಿದಿರು, ಅಡಕೆಮರ ಮೊದಲಾದುವು ಗಳ ಸೀಳು,- ಗೀಳು.

ದಂಭ

1. ಮೋಸ.

2. ಆಡಂಬರ.

3. ಜಂಬ.

ದಂಭಾಚಾರ

ಬೂಟಾಟಿಕೆಯ ನಡವಳಿಕೆ.

ದಂಭೋಲಿ

ಇಂದ್ರನ ವಜ್ರಾಯುಧ.

ದಂಭೋಳಿ

1. ದಂಭೋಲಿ.

2. ಸಿಡಿಲು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App