भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ದ್ವಿಜ

ಎರಡು ಸಲ ಹುಟ್ಟಿದ.

ದ್ವಿಜಗಮನ

ಪಕ್ಷಿವಾಹನ.

ದ್ವಿಜನ್ಮ

ಬ್ರಾಹ್ಮಣ.

ದ್ವಿಜನ್ಮ

ದ್ವೈಮಾತುರ.

ದ್ವಿಜಿಹ್ವ

1. ಎರಡು ನಾಲಗೆ ಯುಳ್ಳ.

2. ಎರಡು ನುಡಿಯುವ.

ದ್ವಿಜಿಹ್ವ

1. ಎರಡು ನಾಲಗೆಯುಳ್ಳುದು.

2. ಎರಡು ಮಾತನಾಡುವವನು.

3. ಚಾಡಿ ಹೇಳುವವನು.

ದ್ವಿತಯ

1. ಜೋಡಿ.

2. ಎರಡು ಎಂಬ ಸಂಖ್ಯೆ.

ದ್ವಿತೀಯ

ಎರಡನೆಯ.

ದ್ವಿತೀಯ

1. ಜೊತೆಗಾರ.

2. ಎರಡು.

ದ್ವಿತೀಯಾವಿಭಕ್ತಿ

(ವ್ಯಾಕರಣದ) ಏಳು ವಿಭಕ್ತಿಗಳಲ್ಲಿ ಎರಡನೆಯದು.

ದ್ವಿತೀಯೆ

1. ಹೆಂಡತಿ.

2. ಪಕ್ಷದ ಎರಡನೆಯ ದಿನ.

3. ದ್ವಿತೀಯಾ ವಿಭಕ್ತಿ.

ದ್ವಿತ್ವ

1. ಜೋಡಿ.

2. ವ್ಯಂಜನಗಳ ಸಂಯುಕ್ತಾಕ್ಷರ.

ದ್ವಿದಳಧಾನ್ಯ

ಅವರೆ, ತೊಗರಿ, ಉದ್ದು, ಹೆಸರು ಮೊದಲಾದ ಎರಡು ಬೇಳೆಯಾಗುವ ಧಾನ್ಯ,- ಕಾಳು.

ದ್ವಿಪ

ಆನೆ.

ದ್ವಿಪದ

1. ಎರಡು ಕಾಲುಗಳನ್ನುಳ್ಳ ಜೀವ,- ಪ್ರಾಣಿ.

2. ಎರಡು ಪದಗಳು.

3. ಪ್ರತಿಸಾಲಿನಲ್ಲಿ ಮೂರು ವಿಷ್ಣು, ಒಂದು ಬ್ರಹ್ಮಗಣ ಬರುವ ಪದ್ಯಜಾತಿ.

ದ್ವಿಪದಿ

ಎರಡು ಪಾದಗಳನ್ನುಳ್ಳ ಒಂದು ವೃತ್ತ.

ದ್ವಿಪ್ರತಿ

1. ಎರಡು ಪ್ರತಿ.

2. ಮೂಲ ಮತ್ತು ಅದರ ಎರಡನೆಯ ಪ್ರತಿ.

ದ್ವಿಭಾಷಾವಲಯ

ಯಾವುದಾದರೂ ಎರಡು ಭಾಷೆಗಳನ್ನು ಪ್ರಧಾನವಾಗಿ ಆಡುವಮಾತಾಗಿ ಉಪಯೋಗಿಸುತ್ತಿರುವ ಪ್ರದೇಶ,- ಸ್ಥಳ.

ದ್ವಿಭಾಷಿ

1. ಎರಡು ಭಾಷೆಗಳನ್ನು ಬಲ್ಲವನು.

2. ಭಾಷಾಂತರ ಮಾಡಿ ಹೇಳುವವನು.

ದ್ವಿರದ

ಎರಡು ಹಲ್ಲುಗಳನ್ನು ಹೊಂದಿದ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App