Sankshipta Kannada Nighantu (Kannada Sahitya Parishattu)
Kannada Sahitya Parishattu
ಟ
1. ಕನ್ನಡ ವರ್ಣಮಾಲೆಯ ಇಪ್ಪತ್ತೈದನೆಯ ಅಕ್ಷರ.
2. ಒಂದು ಎಂಬ ಸಂಖ್ಯೆಯ ಸಂಕೇತ.
ಟಂಕ
1. ಕಲ್ಲುಕುಟಿಗನ ಒಂದು ಉಪಕರಣ.
2. ನಾಣ್ಯವನ್ನು ಅಚ್ಚು ಮಾಡುವ ಸಾಧನ.
3. ನಾಣ್ಯವನ್ನು ಮುದ್ರಿಸುವುದು,- ಅಚ್ಚಿಗೆ ಹಾಕುವುದು.
4. ಮುದ್ರೆಯೊತ್ತಿದ ನಾಣ್ಯ.
5. ನಾಣ್ಯವನ್ನು ಮುದ್ರಿಸುವ ಸ್ಥಳ.
6. ಪಾತ್ರೆ ಮೊದಲಾದುವುಗಳ ಬಿರುಕನ್ನು ಸುತ್ತಿಗೆಯಿಂದ ಬಡಿದು ಕೂಡಿಸುವಿಕೆ.
7. ಬೆ
ಟಂಕಕ್ಷತ್ರ
ಕಲ್ಲುಳಿಯ ಪೆಟ್ಟು.
ಟಂಕಕ್ಷತ್ರ
ಕಲ್ಲುಳಿಯಿಂದ ಕೊರೆದ.
ಟಂಕಣ
ಲೋಹವನ್ನು ಶುದ್ಧಿಗೊಳಿಸಲು ಬಳಸುವ ಒಂದು ಬಗೆಯ ಖನಿಜ ಲವಣ.
ಟಕಮಕ
ಎವೆ ಬಡಿಯದೆ.
ಟಕಮಕ
ಆಶ್ಚರ್ಯ.
ಟಂಕಸಾಲೆ
ನಾಣ್ಯವನ್ನು ಮುದ್ರಿಸುವ ಸ್ಥಳ.
ಟಂಕಾರ
ಬಿಲ್ಲಿನ ಠೇಂಕಾರ.
ಟಂಕಾಹತಿ
ಉಳಿಯ ಏಟು,- ಪೆಟ್ಟು.
ಟಂಕೃತಿ
ಟಂಕಾರ.
ಟಂಕೆ
1. ದೊಣ್ಣೆ.
2. ಕಲ್ಲುಳಿ.
3. ಮೊಳಕಾಲು.
ಟಂಕೋತ್ಕೀರ್ಣ
ಉಳಿಯಿಂದ ಕೊರೆದುದು,- ಕೆತ್ತಿದುದು.
ಟಕ್ಕ
ಮೋಸಗಾರ.
ಟಕ್ಕಿಸು
ವಂಚಿಸು.
ಟಕ್ಕು
1. ಮೋಸ.
2. ತೋರಿಕೆ.
3. ಆತಂಕ.
4. ಮಡಿಕೆ ಹಾಕಿ ಹೊಲಿದ ಹೊಲಿಗೆ.
ಟಕ್ಕುಟವಳಿ
ಮೋಸ.
ಟಕ್ಕೆ
ಒರಗುದಿಂಬು.
ಟಕ್ಕೆಯ
ಬಾವುಟ.
ಟಗರು