Sankshipta Kannada Nighantu (Kannada Sahitya Parishattu)
Kannada Sahitya Parishattu
ಘ
ಕನ್ನಡ ವರ್ಣಮಾಲೆಯ ಹದಿನೆಂಟನೆಯ ಅಕ್ಷರ.
ಘಟ
1. ಮಣ್ಣಿನ ದೊಡ್ಡ ಪಾತ್ರೆ,- ಕೊಡ.
2. ತಾಳವಾದ್ಯಗಳಲ್ಲಿ ಒಂದು.
3. ದೇಹ.
4. ಸೇರಿಕೆ.
5. ನಾಲ್ಕು ಕೊಳಗದಷ್ಟು ಅಳತೆ.
6. ಅಂಚು.
ಘಟಕ
1. (ಸಮಗ್ರವಾದ ಒಂದು ದೇಶ, ವಸ್ತು, ಸಂಸ್ಥೆ ಮೊದಲಾದುವುಗಳ) ಅಂಗ,- ವಿಭಾಗ,- ಪೂರಕಭಾಗ.
2. (ಸಂಘ, ಸಂಸ್ಥೆ ಮೊದಲಾದುವುಗಳ) ವ್ಯವಸ್ಥಾಪಕ.
3. (ಮದುವೆ, ವ್ಯಾಪಾರ ಮೊದಲಾದ ಕಾರ್ಯಗಳಲ್ಲಿ) ಎರಡು ಪಕ್ಷಗಳ ನಡುವೆ ವ್ಯವಹಾರವನ್ನು ಕುದುರಿಸುವವನು.
4.
ಘಟಕ
ಸೇರಿರುವ.
ಘಟಚಕ್ರ
ಬಾವಿಯಿಂದ ನೀರನ್ನು ಮೇಲೆತ್ತುವ ಒಂದು ಬಗೆಯ ಸಾಧನ.
ಘಟಚೇಟಿ
1. ನೀರು ಹೊರುವ ಸೇವಕಿ.
2. ಕುಂಟಣಿ.
ಘಟಚೇಟಿಕೆ
ಘಟಚೇಟಿ.
ಘಟನ(ನೆ)
1. ಸೇರಿಸುವಿಕೆ.
2. ಆಗುವಿಕೆ.
ಘಟಶ್ರಾದ್ಧ
ಬದುಕಿದವರೊಡನೆ ಸಂಬಂಧವನ್ನು ತ್ಯಜಿಸುವುದಕ್ಕಾಗಿ ಮಾಡುವ ಒಂದು ಬಗೆಯ ಶ್ರಾದ್ಧ.
ಘಟಸರ್ಪ
1. ಮಡಕೆಯ ಒಳಗಿರುವ ಸರ್ಪ,- ಹಾವು.
2. ಭಯಂಕರವಾದ ಹಾವು.
ಘಟಸ್ಫೋಟ
1. ಘಟಶ್ರಾದ್ಧದ ಪೂರ್ವಾಂಗ ವಾಗಿ ಗಡಿಗೆಯನ್ನು ಒಡೆಯುವುದು.
2. ವಿವಾಹವಿಚ್ಛೇದ.
ಘಟಾನುಘಟಿ
ಬಹಳ ಗಟ್ಟಿಗ.
ಘಟಾನುಘಟಿ
ಬಹಳ ಗಟ್ಟಿಯಾದ.
ಘಟಿ
1. ಸಣ್ಣ ಗಡಿಗೆ.
2. ಇಪ್ಪತ್ತುನಾಲ್ಕು ನಿಮಿಷಗಳ ಅವಧಿ.
ಘಟಿಕಾಯಂತ್ರ
ಕಾಲವನ್ನು ತಿಳಿಸುವ ಯಂತ್ರ.
ಘಟಿಕಾಸ್ಥಾನ
1. ಧರ್ಮಶ್ರದ್ಧೆಯುಳ್ಳ ವಿದ್ವಾಂಸರು ಅಧಿಕೃತವಾಗಿ ಸಭೆಸೇರುವ ಸ್ಥಳ.
2. ಧಾರ್ಮಿಕವಿಷಯಗಳನ್ನು ಬೋಧಿಸುವ ಮಹಾವಿದ್ಯಾಪೀಠ.
3. ದೇವರು ನೆಲಸಿರುವ ಸಿದ್ಧಿಕ್ಷೇತ್ರ.
ಘಂಟಿಕೆ
1. ಸಣ್ಣಗಂಟೆ.
2. ದಶವಾದ್ಯಗಳಲ್ಲಿ ಒಂದು.
ಘಟಿಕೆ
1. ಘಟಿ.
2. ಧಾರ್ಮಿಕ ವಿದ್ಯಾಪೀಠ.
ಘಟಿಕೋತ್ಸವ
ವಿಶ್ವವಿದ್ಯಾಲಯದ ಪದವೀಪ್ರದಾನ ಸಮಾರಂಭ.
ಘಟಿತ
1. ಉಂಟಾದುದು.
2. ಆದುದು.