भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12Next >

ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ.

ಋಕ್ಕು

ಋಗ್ವೇದದ ಮಂತ್ರ.

ಋಕ್ಷ

1. ಕರಡಿ.

2. ನಕ್ಷತ್ರ.

ಋಗ್ವೇದ

ನಾಲ್ಕು ವೇದಗಳಲ್ಲಿ ಮೊದಲನೆಯದು.

ಋಗ್ವೇದಿ

ಋಗ್ವೇದವನ್ನು ಅನುಸರಿಸುವವನು.

ಋಗ್ವೇದಿ

ಋಗ್ವೇದಕ್ಕೆ ಸಂಬಂಧಿಸಿದ.

ಋಚ

1. ಋಕ್ಕು.

2. ಋಗ್ವೇದ.

ಋಚೆ

ಋಕ್ಕು.

ಋಜು

(ಚಿತ್ರಶಾಸ್ತ್ರದಲ್ಲಿ) ಒಂದು ವಸ್ತುವಿನ ಸಮ್ಮುಖದ ಎದುರು ನೋಟ.

ಋಜು

1. ನೇರವಾದ.

2. ಪ್ರಾಮಾಣಿಕವಾದ.

3. ಆಡಂಬರವಿಲ್ಲದ.

ಋಜುತ್ವ

ನೇರವಾಗಿರುವ ಗುಣ.

ಋಜುಮಾರ್ಗ

1. ನೇರವಾದ ದಾರಿ.

2. ಸರಳ ಸ್ವಭಾವ.

ಋಜುರೋಹಿತ

1. ಇಂದ್ರನ ಧನುಸ್ಸು.

2. ಕಾಮನ ಬಿಲ್ಲು.

ಋಣ

1. ಸಾಲ.

2. ಕೋಟೆ.

3. ನೀರು.

4. ಹಂಗು.

5. ಉಪಕಾರ.

ಋಣಚಿಹ್ನೆ

(ಗಣಿತದಲ್ಲಿ) ಕಳೆಯಬೇಕಾದುದನ್ನು ಸೂಚಿಸುವ ಚಿಹ್ನೆ (-).

ಋಣತ್ರಯ

ದೇವಋಣ, ಪಿತೃಋಣ, ಋಷಿಋಣ ಎಂಬ ಮೂರು ಬಗೆಯ ಋಣಗಳು.

ಋಣನಿಧಾನ

ತನಗೆ ಲಭ್ಯವಾಗ ಬೇಕಾಗಿರುವ ನಿಕ್ಷೇಪ.

ಋಣಮುಕ್ತ

ಋಣ ಅಥವಾ ಸಾಲದಿಂದ ಬಿಡುಗಡೆಯಾದವನು.

ಋಣಹರಿ

ಸಾಲ ತೀರಿಹೋಗು.

ಋಣಾನುಬಂಧ

ಪೂರ್ವಜನ್ಮದ ಋಣ ಸಂಬಂಧ,- ಸ್ನೇಹಸಂಬಂಧ.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App