भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

< previous1234567894344Next >

J

ನಾಮವಾಚಕ

 • ಇಂಗ್ಲಿಷ್‍ ವರ್ಣಮಾಲೆಯ ಹತ್ತನೆಯ ಅಕ್ಷರ.
 • (ವೈದ್ಯರು ನೀಡುವ ಔಷಧ ಸೂಚಿ ಮೊದಲಾದವುಗಳಲ್ಲಿ ಕೊನೆಯಲ್ಲಿ ಬಳಸುವ) ರೋಮನ್‍ ಸಂಖ್ಯೆಯ i ಯನ್ನು ಸೂಚಿಸುವ ಅಕ್ಷರ, ಉದಾಹರಣೆಗೆ ij, uj.

J

ಸಂಕ್ಷಿಪ್ತ

 • jack.
 • joule(s).
 • Judge.
 • justice.

j’adoube

ಭಾವಸೂಚಕ ಅವ್ಯಯ

(ಚದುರಂಗದ ಆಟಗಾರ ತಾನು ಕಾಯನ್ನು ಮುಟ್ಟುತ್ತಿರುವುದು ನಡೆಸುವುದಕ್ಕಾಗಿ ಅಲ್ಲವೆಂದೂ, ಅದನ್ನು ಸರಿಯಾಗಿ ಕೂರಿಸುವುದಕ್ಕಗಿ ಮಾತ್ರ ಮುಟ್ಟುತ್ತಿದ್ದೇನೆಂದೂ ಹೇಳುವ ಮಾತು) ಸರಿಯಾಗಿ ಕೂರಿಸುತ್ತಿದ್ದೇನೆ, ಅಷ್ಟೆ.

Jaal-goat

ನಾಮವಾಚಕ

ಯಾಲ್‍ ಮೇಕೆ; ಇತಿಯೋಪಿಯಾ, ಉತ್ತರ ಈಜಿಪ್ಟ್‍ನ ಸೀನಾಯ್‍ ಪ್ರದೇಶ, ಅರೇಬಿಯಗಳಲ್ಲಿಯ ಐಬೆಕ್ಸ್‍ ಅಥವಾ ಕಾಡುಮೇಕೆ, ಕಾಡಾಡು.

jab

ಸಕರ್ಮಕ ಕ್ರಿಯಾಪದ

 • ಒರಟೊರಟಾಗಿ – ತಿವಿ, ಚುಚ್ಚು.
 • ಇರಿ.
 • (ಯಾವುದನ್ನೇ ಮೈಯೊಳಕ್ಕೆ) ದಿಢೀರನೆ ಹೆಟ್ಟು, ಚುಚ್ಚು, ನಾಟು.

jab

ನಾಮವಾಚಕ

 • (ಚೂಪಾದ ವಸ್ತುವಿನಿಂದ ಅಥವಾ ಮುಷ್ಟಿಯಿಂದ ಮಾಡುವ) ತಿವಿತ; ಇರಿತ; ಹೊಡೆತ; ಗುದ್ದು.
 • (ಆಡುಮಾತು) (ಒಳಚರ್ಮದಲ್ಲಿ) ಚುಚ್ಚುಮದ್ದು ಹಾಕುವುದು; ಚುಚ್ಚುಮದ್ದು ಸೂಜಿಯ ಚುಚ್ಚು.

jabber

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಗೊಜಗುಟ್ಟು; ಮಾತನ್ನು ಬೇಗ ಬೇಗ, ಅಸ್ಪಷ್ಟವಾಗಿ ಉಚ್ಚರಿಸು.

 • ಅರ್ಥವಿಲ್ಲದೆ ಬಡಬಡಿಸು; ಬಡಬಡನೆ ಮಾತನಾಡು.
 • (ಕೋತಿ ಮೊದಲಾದವುಗಳಂತೆ) ಕಿಚಕಿಚಗುಟ್ಟು.

jabber

ನಾಮವಾಚಕ

 • ಬಡಬಡಿಕೆ; ಬಡಬಡ ಮಾತು; ಗೊಜಗುಟ್ಟುವುದು; ಬಡಬಡ ಮಾತನಾಡುವುದು.
 • ಅರ್ಥವಾಗದ ಮಾತು.

jabberwocky

ನಾಮವಾಚಕ

ಅನರ್ಥ ಬರಹ ಅಥವಾ ಮಾತು; ಮುಖ್ಯವಾಗಿ ಹಾಸ್ಯ ಪರಿಣಾಮ ಉಂಟುಮಾಡುವ ಅಥವಾ ಹಾಸ್ಯಕರವಾಗಿರುವ, ಅರ್ಥಹೀನ ಬರವಣಿಗೆ ಅಥವಾ ಮಾತುಗಾರಿಕೆ.

jabiru

ನಾಮವಾಚಕ

ಜ್ಯಾಬಿರೂ:

 • ಮಧ್ಯ ಹಾಗೂ ದಕ್ಷಿಣ ಅಮೆರಿಕದ ಉಷ್ಣವಲಯ ಪ್ರದೇಶದಲ್ಲಿರುವ ಬಕಪಕ್ಷಿಯ ಬಳಗದ ಒಂದು ಪಕ್ಷಿ.
 • ಯೂರೋಪ್‍, ಏಷ್ಯಾ ಮತ್ತು ಆಹ್ರಿಕಗಳಲ್ಲಿನ ಕಪ್ಪು ಕತ್ತಿನ ಅಂಥದೇ ಹಕ್ಕಿ.

jaborandi

ನಾಮವಾಚಕ

ಜ್ಯಾಬರ್ಯಾಂಡಿ:

 • ದಕ್ಷಿಣ ಅಮೆರಿಕದಲ್ಲಿ ದೊರೆಯುವ ರುಟೇಸಿ ವಂಶದ, ಪಿಲಕಾರ್ಪಸ್‍ ಕುಲದ ಯಾವುದೇ ಗಿಡ, ಪೊದೆ.
 • ಈ ಗಿಡದ ಎಲೆಗಳನ್ನು ಒಣಗಿಸಿ ತಯಾರಿಸಿದ (ಮೂತ್ರ ಮತ್ತು ಸ್ವೇದಗಳನ್ನು ಉತ್ತೇಜಿಸುವ) ಪುಡಿ.

jabot

ನಾಮವಾಚಕ

 • (ಹೆಂಗಸರ) ಕುಪ್ಪಸದ ಅಥವಾ ಸ್ಕಾಟ್ಲೆಂಡಿನ ಹೈಲಂಡ್‍ ಪ್ರದೇಶದ ಜನರ ಉಡುಪಿನ ಎದೆಭಾಗದ ಮೇಲಿನ ಅಲಂಕಾರದ – ನೆರಿಗೆ, ನೆರಿ, ಕುಚ್ಚು, ಪಟ್ಟಿ.
 • (ಚರಿತ್ರೆ) (ಗಂಡಸರ) ಷರ್ಟಿನ ಮುಂಭಾಗದ ಅಲಂಕಾರದ ನೆರಿಗೆ, ನೆರಿ.

jacana

ನಾಮವಾಚಕ

ಜ್ಯಾಕನ; ತೇಲಾಡುವ ಎಲೆಗಳ ಮೇಲೆ ನಡೆಯಲು ಅನುಕೂಲವಾಗಿರುವಂತೆ ಉದ್ದವಾದ ಕಾಲು ಮತ್ತು ಬೆರಳುಗಳುಳ್ಳ, ಜ್ಯಾಕನಿಡೇ ವಂಶಕ್ಕೆ ಸೇರಿದ, ನೀರನ್ನು ತಳ್ಳಿಕೊಂಡು ನಡೆಯುವ ಉಷ್ಣವಲಯದ ಒಂದು ಹಕ್ಕಿ.

jacaranda

ನಾಮವಾಚಕ

ಜ್ಯಾಕರ್ಯಾಂಡ:

 • ತುತ್ತೂರಿ ಆಕಾರದ ನೀಲಿ ಹೂಗಳನ್ನು ಬಿಡುವ, ಅಮೆರಿಕದ ಉಷ್ಣವಲಯದ ಮರಗಳ ಕುಲ.
 • ಡಲ್‍ಬರ್ಜಿಯ ಕುಲಕ್ಕೆ ಸೇರಿದ, ಬೀಟೆಯಂತೆ ಸುವಾಸನೆಯ ದಾರುವುಳ್ಳ, ಅಮೆರಿಕದ ಉಷ್ಣವಲಯ ಪ್ರದೇಶದ ಮರ.

jacinth

ನಾಮವಾಚಕ

ಜೇಸಿಂತ್‍; ರತ್ನವಾಗಿ ಉಪಯೋಗಿಸುವ, ಕೆಂಗಿತ್ತಳೆ ಬಣ್ಣದ ಒಂದು ಬಗೆಯ ನೈಸರ್ಗಿಕ ಜಿರ್ಕಾನ್‍ (ಜಿರ್ಕೋನಿಯಮ್‍ ಸಿಲಿಕೇಟ್‍).

jack

ನಾಮವಾಚಕ

ಪದಗುಚ್ಛ

ನುಡಿಗಟ್ಟು

ಜ್ಯಾಕು:

 • ಎತ್ತುಗ; ಭಾರ ಎತ್ತುವ ಯಂತ್ರ.
 • ಊರೆ ಎತ್ತುಗ; ವಾಹನದ ಚಕ್ರವನ್ನು ಚೊಕ್ಕಟ ಮಾಡಲು ಯಾ ಬದಲಾಯಿಸಲು ಅಚ್ಚನ್ನು ಮೇಲೆತ್ತಿ ಹಿಡಿಯುವ ಸಲಕರಣೆ, ಎತ್ತುವ ಸಾಧನ. Figure: jack
 • ಗಡಿಯಾರದಲ್ಲಿ ಗಂಟೆಯನ್ನು ಬಾರಿಸುವ, ಮಾನವಾಕಾರದ ಬೊಂಬೆ.
 • ಮೇಟುಕಡ್ಡಿ; ಹಾರ್ಪ್‍ಸಿಕಾರ್ಡ್‍ ಮೊದಲಾದ ವಾದ್ಯಗಳಲ್ಲಿ ತಂತಿಯನ್ನು ಮಿಡಿಯಲು ಅಳವಡಿಸಿರುವ ಸಲಕರಣೆ.
 • = $^1$cheapjack.
 • = lumberjack.
 • = steeplejack.
 • ಹಲವು ಯಂತ್ರ ಮೊದಲಾದವುಗಳ ಭಾಗಗಳ ಹೆಸರು.
 • = bootjack.
 • (ಮುಂತಾದ ಚಿಕ್ಕ ಅಥವಾ ಪುಟ್ಟ) ಪೈಕ್‍ ಮೀನು.
 • (ಬೋಲ್ಸ್‍ ಆಟ) (ಆಟಗಾರರು ಗುರಿಯಿಡಬೇಕಾದ) ಪುಟ್ಟ ಬಿಳಿ ಚೆಂಡು.
 • (ಬಹುವಚನದಲ್ಲಿ, ಏಕವಚನವಾಗಿ ಪ್ರಯೋಗ) ಕಲ್ಲಿನ ಅಥವಾ ಲೋಹದ ಸಣ್ಣ ಗೋಲಿಗಳಿಂದ ಆಡುವ ಒಂದು ಆಟ.
 • (ಕೆಲವು ಜಾತಿ ಪ್ರಾಣಿಗಳಲ್ಲಿ) ಗಂಡುಪ್ರಾಣಿ.
 • (ಅಶಿಷ್ಟ) ಪತ್ತೇದಾರ; ಪೊಲೀಸಿನವನು.
 • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಣ.
 • ಗುಲಾಮ; ಮನುಷ್ಯನ, ಮುಖ್ಯವಾಗಿ ಸೈನಿಕನ, ಪೋಷಾಕು ತೊಟ್ಟಿರುವ ಸೇವಕ, ಮೊದಲಾದವರ ಚಿತ್ರವಿರುವ ಇಸ್ಪೀಟೆಲೆ.
 • ವಿದ್ಯುನ್ಮಂಡಲವನ್ನು ಸಂಪರ್ಕಿಸುವ ಸಾಧನ.
 • (Jack) (John ಎಂಬುದರ ಬದಲು ಬಳಸುವ ರೂಪಕವಾಗಿ) ಶ್ರೀಸಾಮಾನ್ಯ ಅಥವಾ ಯಾವುದೇ ಜಾತಿಯ ಪ್ರಾಣಿಯ ಗಂಡು.

jack

ಸಕರ್ಮಕ ಕ್ರಿಯಾಪದ

ಪದಗುಚ್ಛ

 • ಎತ್ತುಗದಿಂದ, ಜ್ಯಾಕಿನಿಂದ ಮೇಲೆತ್ತು.
 • ಜ್ಯಾಕಿನಿಂದಲೋ ಎಂಬಂತೆ ಮೇಲೆತ್ತು.
 • (ಉದಾಹರಣೆಗೆ ಬೆಲೆಗಳನ್ನು) ಏರಿಸು.

jack

ನಾಮವಾಚಕ

 • ಹಡಗು ಪತಾಕೆ; ನೌಕೆ ನಿಶಾನೆ; ಹಡಗಿನ ಬಾವುಟ; ನೌಕಾಧ್ವಜ (ಮುಖ್ಯವಾಗಿ ರಾಷ್ಟ್ರವನ್ನು ಸೂಚಿಸುವ, ಹಡಗಿನ ಮೂತಿಯ ಭಾಗದ ಧ್ವಜಸ್ತಂಭದ ಮೇಲೆ ಹಾರಿಸುವ) ಹಡಗಿನ ಪತಾಕೆ, ಸಣ್ಣ ಬಾವುಟ; British jack ಬ್ರಿಟಿಷ್‍ ನೌಕಾ ಧ್ವಜ.
 • ಸೂಚನಾಧ್ವಜ; ಹಡಗು ನಡೆಸುವವನ ಸೂಚನೆಗಾಗಿ ಮುಂಗೂವೆಯಲ್ಲಿ ಹಾರಿ ಬಿಟ್ಟಿರುವ ಒಂದೇ ಬಾವುಟ.
 • ‘ಯೂನಿಯನ್‍ ಜಾಕ್‍’ ಬಾವುಟ.

jack

ನಾಮವಾಚಕ

 • (ಪ್ರಾಚೀನ ಪ್ರಯೋಗ ಅಥವಾ ಚರಿತ್ರೆ) ಪದಾತಿ ಅಂಗಿ; ಸೈನ್ಯದ ಕಾಲಾಳು ಧರಿಸುವ, ತೋಳಿಲ್ಲದ ಅಂಗಿ.
 • = blackjack.

jack

ನಾಮವಾಚಕ

ಹಲಸಿನ ಹಣ್ಣು.

< previous1234567894344Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App