Kumbarike Vrutti Padakosha (Kannada-Kannada)(KASAPA)
Kannada Sahitya Parishattu (KASAPA)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
ರಂಜಣಿಗೆ
(ನಾ)
ಕೊಪ್ಪರಿಗೆ, ದೊಡ್ಡ ಪಾತ್ರೆ, ವಾಡೆ, ನೀರು ಮತ್ತು ಕಾಳುಕಡಿ ಹಾಕಿಡಲು ಬಳಸುವ ಸಾಧನ, ರಂಜಣಿಗೆ ಎನ್ನುವ ಪದ ವಾಡೆಗೆ ಬದಲಾಗಿ ವಿಜಾಪುರ ಜಿಲ್ಲೆಯಲ್ಲ ಹೆಚ್ಚು ಬಳಕೆಯಲ್ಲಿದೆ ನೋಡಿ – ವಾಡೆ
ರಜ
(ನಾ)
ಕಸ, ಆವಿಗೆ ಸುಡುವಾಗ ಉಪಯೋಗಿಸುವ ಸೆದೆ.
ರಾಡಿ
(ನಾ)
ಕೌಳಿ, ಕೆಸರು, ಕುಂಬಾರಗಿತ್ತಿ ಕೈಯಿಂದ ಮಡಕೆ ಮಾಡುವಾಗ, ಕುಂಬಾರ ತಿಗುರಿಯಿಂದ ಮಡಕೆ ಗೇಯುವಾಗ ಕೈಗೆ ಅಂಟಿಕೊಳ್ಳುವ ತೆಳುವಾದ ಮಣ್ಣು.
“ಕೈಯಾನ ರಾಡಿ ತೊಕ್ಕೋಳೋ” (ಆಡುಮಾತು. )
ರೊಟ್ಟಿ ಕೈಪಳ
(ನಾ)
ಹಂಚಿನಲ್ಲಿ ಸುಟ್ಟ ರೊಟ್ಟಿಯನ್ನು ತೆಗೆದು ಹಾಕಿಡುವ ಅಗಲಬಾಯಿಯ ಕಿವಿಯುಳ್ಳ ಪಾತ್ರೆ.
ರೊಟ್ಟಿ ಹಂಚು