भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous12Next >

ಮಂಕರಿ

(ನಾ)
ಬಂಕ್ರಿ, ದೋಸೆಬೇಯಿಸುವ ಹಂಚಿಗೆ ಮುಚ್ಚುವ ಮುಚ್ಚಳ

ಮಂಡೆ

(ನಾ)
ವತ್ತಲ, ನೀರು ಕಾಯಿಸಲು ಬಳಸುವ ಗಡಗಿ, ಪಚೇಲಿ, ಈ ಪದ ದಕ್ಷಿಣ ಕನ್ನಡದಲ್ಲಿ ಪ್ರಯೋಗದಲ್ಲಿದೆ.

ಮಗ್ಗಲು ತಟ್ಟು

(ಕ್ರಿ)
ಮಡಿಕೆಗಳನ್ನು ದರಗದಲ್ಲಿಟ್ಟು ಕಲ್ಲು ಮತ್ತು ಸೊಳದಿಂದ – ಕೆಳಭಾಗದಿಂದ ತಟ್ಟುತ್ತ ಹೆಚ್ಚಿನ ಮಣ್ಣನ್ನು ಮಧ್ಯಭಾಗಕ್ಕೆ ತಂದು, ಮಡಕೆ ಹಿಗ್ಗಿಸುವ ಕ್ರಿಯೆ.

ಮಗಿ

(ನಾ)
ಮಗೆ, ಮೊಗೆ, ಮಣ್ಣಿನ ತಂಬಿಗೆ, ಚೆಂಬು, ನೀರು ಹಾಕುವ ಮಗೆ, ನೀರು ತುಂಬುವ ಮಗೆ, ಐರಾಣಿ ಗಡಿಗೆಗಳಲ್ಲಿ ಐದು ಮಗಿ ಇಡುವ ಪದ್ಧತಿ ಇದೆ. ಕುರುಬರು ಕುರಿಹಾಲನ್ನು ಮಗೆಯಲ್ಲಿ ಹಾಕಿಡುವರು. ರೈತರು ಹೊಲ-ಗದ್ದೆಗಳಲ್ಲಿ ನೀರು ಕುಡಿಯಲು ಮಗಿಗಳನ್ನು ಬಳಸುವರು.
ಗಡಿಗೆ ಹೋಗಿದ್ದಕ್ಕೆ ಮಗಿ ಕೊಟ್ಟು ಶಾಸ್ತ್ರ ಕೇಳಿದರಂತೆ (ಗಾದೆ)
ಮಗೆ ಮಾಡದ ಕುಂಬಾರ ಗುಡಾಣ ಮಾಡ್ಯಾನೇನು (ಗಾದೆ)

ಮಜ್ಜಿಗೆ ಗಡಿಗೆ

(ನಾ)
ಮೊಸರು ಕಡೆದು ಮಜ್ಜಿಗೆ ಮಾಡುವ ಗಡಿಗೆ ಹಳ್ಳಿಗಳಲ್ಲಿ ರೈತರ ಮನೆಗಳಲ್ಲಿ ಮಜ್ಜಿಗೆ ಕಂಬದ ಪಕ್ಕದಲ್ಲಿ ಒಂದು ಸಿಂಬೆ ಇಟ್ಟು ಅದರ ಮೇಲೆ ಮಜ್ಜಿಗೆ ಗಡಿಗೆಯನ್ನು ಇಟ್ಟು ಕಡಗೋಲಿಂದ ಮೊಸರನ್ನು ಕಡೆದು, ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುವರು.

ಮಡಕೆ

(ನಾ)
ಗಡಿಗೆ, ಸ್ವಾರಿ, ಮೃಣ್ಮಯ ಪಾತ್ರೆ, ನೋಡಿ – ಗಡಿಗೆ

ಮಡಕೆಕೊಯ್ಯೋಮುಳ್ಳು

(ನಾ)
ತಿಗರಿಯ ಮೇಲೆ ಗಡಿಗೆಗಳನ್ನು ತಯಾರಿಸಿದನಂತರ ಅದನ್ನು ಬೇರ್ಪಡಿಸಲು ಉಪಯೋಗಿಸುವ ತಂತಿ ನೋಡಿ – ಚಟೆದಾರ.

ಮಣ್ಣಾವಿಗೆ

(ನಾ)
ಬರಿಮಣ್ಣಿನಿಂದಲೆ ನಿರ್ಮಿಸಿದ ಆವಿಗೆ, ಕುಂಬಾರ ಭಟ್ಟಿ

ಮಣ್ಣಿನ ಕುರ್ಕಿ

(ನಾ)
ಮಣ್ಣಿನ ಪಾತ್ರೆ, ಕಾಡು ಕುರುಬರು ಹೆಚ್ಚಾಗಿ ಬಳಸುವರು.

ಮಣ್ಣಿನ ಕೊರಳಸರ

(ನಾ)
ಹೆಣ್ಣುಮಕ್ಕಳು ಕೊರಳಲ್ಲಿ ಹಾಕಿಕೊಳ್ಳಲು ಮಣ್ಣಿನಿಂದ ಮಾಡಿದ ಮಣಿಗಳ ಸರ, ಬೆಂಗಳೂರಿನಲ್ಲಿ ಈಗಲೂ ಮಣ್ಣಿನಿಂದ ಸುಂದರವಾದ ಸರಗಳನ್ನು ತಯಾರಿಸುವರು. ಮೊಹಂಜೋದಾರು ಹರಪ್ಪ ನಗರಗಳ ಉತ್ಖನದಲ್ಲಿ ಸುಂದರವಾದ ಮಣ್ಣಿನ ಕಂಠಸರಗಳು ದೊರೆತಿವೆ. ಕೇರಳದಲ್ಲಿ ಟೆರ್ರಾಕೂಟಾ ವಸ್ತುಗಳ ಜೊತೆಯಲ್ಲಿ ಮಣಿ ಸರಗಳನ್ನು ತಯಾರಿಸುವರು. ಈಗಲೂ ಕೂಡ ಎನಾಮಲ್ ಮಾಡಿದ ಮಣ್ಣಿನ ಸರಗಳಿಗೆ ಬೇಡಿಕೆ ಇದೆ.

ಮಣ್ಣಿನ ಬಂಡಿ

(ನಾ)
ಸಿಂಧೂ ಸಂಸ್ಕೃತಿಯ ಉತ್ಖನನದಲ್ಲಿ ದೊರೆತ ಮಣ್ಣಿನ ಆಟಿಕೆ ಸಾಮಾನುಗಳಲ್ಲಿ ಮಣ್ಣಿನ ಬಂಡಿ ಮುಖ್ಯವಾದುದು
(ಕಾಲಮಾನ ಕ್ರಿ.ಪೂ. 2000) ಗ್ರಾಮಗಳಲ್ಲಿ ಮಕ್ಕಳು ಮಣ್ಣಿನ ಬಂಡಿ ಮಾಡಿಕೊಂಡು ಆಡುವುದನ್ನು ಈಗಲೂ ಕಾಣಬಹುದು. ಇದು ಬಡ ಮಕ್ಕಳ ಆಟಿಕೆ ಸಾಮಾನು.

ಮಣ್ಣು

(ನಾ)
ಗಡಿಗೆಯನ್ನು ಮಾಡುವ ಯೋಗ್ಯವಾದ ಮಣ್ಣು (ಕುಂಬಾರಮಣ್ಣು) ಕೆರೆ, ಹಳ್ಳ, ಹೊಳೆಗಳ ದಂಡೆಗಳಲ್ಲಿ ದೊರೆಯುವುದು. ಬೇರೆ-ಬೇರೆ ಪ್ರದೇಶದಲ್ಲಿ ದೊರೆಯುವ ಈ ಮಣ್ಣು ಅಲ್ಲಿಯ ಭೂಗುಣಕ್ಕನುಗುಣವಾಗಿ ಬಣ್ಣದಲ್ಲಿ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸವಾಗಿರುವುದು.
ಕುಂಭವಸ್ತುಗಳ ತಯಾರಿಕೆಯಲ್ಲಿ ಜೇಡಿಮಣ್ಣನ್ನು ಬಳಸುವರು ಇದು ಅಂಟಾಗಿದ್ದು ಬೇಕಾದ ಆಕೃತಿ ಮಾಡಲು ಸುಲಭ. ಮಣ್ಣು ಆಲ್ಯೂಮಿನಿಯಮ್ ಮತ್ತು ಸಿಲಿಕಾನ್ ಆಕ್ಸೈಡುಗಳನ್ನು ಒಳಗೊಂಡಿರುತ್ತದೆ. ಮಣ್ಣಿಗಿರುವ ಅತ್ಯಂತ ಮುಖ್ಯವಾದ ಗುಣವೆಂದರೆ ಮಿದುಣತ್ವ, ಇತಿಹಾಸ ಪೂರ್ವದಿಂದಲೂ ಮಣ್ಣಿನ ಮಡಕೆ ತಯಾರಿಕೆ ನಡೆದು ಬಂದಿದೆ.
“ಹದಮಣ್ಣಲ್ಲದೆ. ಮಡಕೆಯ ಮಾಡಲಾಗದು” (ಕೇತಲದೇವಿ)
“ದೇವರು ಗುಡಿ ಮನೆ ಮಠವೆಲ್ಲ ಮಣ್ಣು ಆವಾಗ ಆಡುವ ಮಡಕೆ ತಾಮಣ್ಣು” (ಶ್ರೀನಿವಾಸ ದಾಸರು)
“ಕಾಲಲ್ಲಿ ತುಳಿದ ಮಣ್ಣು ಗಡಿಗೆಯಾಗಿ ಏರುತ್ತದೆ ತಲೆಯನ್ನು” (ಜರಗನಹಳ್ಳಿ ಶಿವಶಂಕರ)
ಮಣ್ಣು ಬಿಟ್ಟು ಮಡಕೆ ಇಲ್ಲ ತನ್ನ ಬಿಟ್ಟು ದೇವರಿಲ್ಲ (ಗಾದೆ)
ಮಣ್ಣಿನ ಬೆಕ್ಕಾದರೇನು ಇಲಿ ಹಿಡಿದರೆ ಸರಿ (ಗಾದೆ)

ಮಣ್ಣು ಮಾಡುವುದು

(ಕ್ರಿ)
ಕುಂಬಾರಗಿತ್ತಿಯರು ಮಡಕೆ ಮಾಡಲು ತೊಡಗುವುದನ್ನು ಮಣ್ಣು ಮಾಡುವುದು ಎನ್ನುವರು. ಉದಾ: “ಗಂಗಮ್ಮ ಮಣ್ಣು ಮಾಡಾಕಹತ್ಯಾಳಾ” “ಮಣ್ಣು ಮಾಡಕ ಕುಂದ್ರಬೇಕ್ರಿ” ಈ ಪದ ದಾವಣಗೆರೆ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ.

ಮಣ್ಣೆತ್ತು

(ನಾ)
ಮಣ್ಣಿನಿಂದ ಮಾಡಿದ ಎತ್ತು, ಮಣ್ಣೆತ್ತಿನ ಅಮವಾಸೆಯಲ್ಲಿ ರೈತರು, ಕುಂಬಾರರ ಮನೆಯಿಂದ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ತಂದು ಜಗಲಿಯ ಮೇಲಿಟ್ಟು ಪೂಜಿಸುವರು, ‘ಶೃಂಗೇರಿ’ ಭಾಗದಲ್ಲಿ ಕಾರ್ತೀಕ ಶುದ್ಧ ಅಷ್ಟಮಿಯನ್ನು ‘ಬಸವನ ಅಷ್ಟಮಿ’ ಎಂಬ ಹೆಸರಿನಲ್ಲಿ ಮಣ್ಣೆತ್ತುಗಳನ್ನು ಪೂಜಿಸುವರು.

ಮರಗಲು ಗಡಿಗೆ

(ನಾ)
ಆನಿಕೆ ಗಡಿಗೆ, ಹಸಿ ಮಡಿಕೆಗಳನ್ನು ಆವಿಗೆಯಲ್ಲಿ ಕ್ರಮವಾಗಿ ಇಟ್ಟು ಸುಡಲು ಸಿದ್ಧಗೊಳಿಸುವಾಗ ಮೊದಲಿಗೆ ದೊಡ್ಡ – ದೊಡ್ಡ ಗುಡಾಣ, ಪಚೇಲಿ, ಕೊಡ ಮುಂತಾದ ಹಳೆಯ ಸುಟ್ಟ ಗಡಿಗೆಗಳನ್ನು ಹಸಿ ಮಡಕೆಗಳ ಆನಿಕೆಗಾಗಿ ಸಾಲಾಗಿ ಇಟ್ಟು ಜೋಡಿಸುವರು. ಆನಿಕೆಯಾಗಿ ಇಟ್ಟ ಹಳೆಯ ಸುಟ್ಟ ಮಡಿಕೆಗಳನ್ನು ಮರಗಲು ಗಡಿಗೆ ಎನ್ನುವರು. ಹಾವೇರಿ, ಬಳ್ಳಾರಿ ಜಿಲ್ಲೆ ಪ್ರದೇಶದಲ್ಲಿ ಈ ಪದ ಪ್ರಯೋಗದಲ್ಲಿದೆ. ಮರಗಲು ಗಡಿಗೆಯಾಗಿ ಕುಂಬಾರರು ಸಾಮಾನ್ಯವಾಗಿ ಒಡೆದ ಅರೆಒಡೆದ, ಮುಕ್ಕಾದ ಗಡಿಗೆಗಳನ್ನು ಉಪಯೋಗಿಸುವರು.

ಮರದಬ್ಬೆ

(ನಾ)
ತಿಗುರಿಯಿಂದ ಗೇಯುವಾಗ ಆಕೃತಿಗಳನ್ನು ನುಣ್ಣಗೆ ಮಾಡಲು ಉಪಯೋಗಿಸುವ ಮರದ ದಬ್ಬೆ.

ಮರಳು

(ನಾ)
ಉಸುಕು, ಹೊಯಿಗೆ, ಮರಳನ್ನು ಮಡಿಕೆ ಮಾಡುವ ಮಣ್ಣಿಗೆ ಬೆರೆಸುವರು ಇದರಿಂದ ಮಣ್ಣಿಗೆ ಬಿಗಿ ಬರುತ್ತದೆ. ಹಸಿ ಮಡಕೆಗಳು ಬೀಳುವದಿಲ್ಲ.

ಮರಿಗೆ

(ನಾ)
ಚಿಕ್ಕ ಮಣ್ಣಿನ ಪಾತ್ರೆ, ಆಹಾರ ಬೇಯಿಸಲು ಬಳಸುವರು. ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಕಟ್ಟಿಗೆಯಲ್ಲಿ ಕೂಡ ಮರಿಗೆ ಮಾಡುವರು.
ಎಲ್ಲರೂ ಹೆಣ್ಣು ಹೆತ್ತರೆ ಮಾರೆಮ್ಮ ಮರಿಗೆ ಹೆತ್ತಳು (ಗಾದೆ)

ಮಸಿ

(ನಾ)
ಆವಿಗೆಯ ಬೂದಿಯನ್ನು ಸೋಸಿದಾಗ ಹಿಟ್ಟಿನಂತೆ ಬೀಳುವ ಬೂದಿಗೆ ಮಸಿ ಎನ್ನುವರು. ಮಡಿಕೆ ತಟ್ಟುವಾಗ ಮಣ್ಣು ದರಗ ಇಲ್ಲವೆ ನೆಲಕ್ಕೆ ಮಡಿಕೆಗೆ ಅಂಟಿಕೊಳ್ಳದಿರಲೆಂದು ಅದನ್ನು ಕೆಳಗೆ ಹರಡುವರು.
ಗಾಣಗೇರ ಗಸಿ ಕುಂಬಾರಮಸಿ (ಗಾದೆ)

ಮಸಿಬಟ್ಟೆ

(ನಾ)
ಆವಿಗೆಯಿಂದ ಮಡಕೆಗಳನ್ನು ಹೊರತೆಗೆಯುವಾಗ ಅವು ಬಿಸಿ ಇರುವುದರಿಂದ ಕೈಯಲ್ಲಿ ಬಟ್ಟೆ ಹಿಡಿದುಕೊಂಡು ಮಡಿಕೆಗಳನ್ನು ಹೊರತೆಯುವರು ಆಗ ಕೈಯಲ್ಲಿ ಹಿಡಿದ ಬಟ್ಟೆಗಳಲಿ ಮಸಿ ತಾಗುವದು ಅದನ್ನೇ ಮಸಿ ಬಟ್ಟೆ ಎಂದು ಕರೆಯುವರು.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App