Kumbarike Vrutti Padakosha (Kannada-Kannada)(KASAPA)
Kannada Sahitya Parishattu (KASAPA)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
ಘಟ
(ನಾ)
ಘಟಕೆ, ಗಡಿಗೆ, ಮಣ್ಣಿನ ಪಾತ್ರೆ, ಬಾವಿಯಿಂದ ನೀರು ತರಲು ಬಳಸುತ್ತಿದ್ದರೆಂದು ಮಹಾಭಾಷ್ಯದಲ್ಲ ಅನೇಕ ಕಡೆ ಹೇಳಲಾಗಿದೆ. ಘಟ ಪದವನ್ನು ದೇಹಕ್ಕೆ ಹೋಲಿಸುವರು.
“ಘಟವ ಮಾಡಿದವ ಘಟದಲ್ಲಿರದಂತೆ” (ನಗೆಯ ಮಾರಿತಂದೆ)
“ಧಾನ್ಯ ಹೊಯಿದಿದ್ದ ಘಟ ಅಳತೆಗೆ ಬಪ್ಪುದೆ?” (ಮೋಳಿಗೆ ಮಾರಯ್ಯ)
ಘಟಂ
(ನಾ)
ಗಡಿಗೆ, ಇದನ್ನು ವಾದ್ಯವಾಗಿ ಬಳಸುವರು. ಇದರ ಬಾಯಿ ಸ್ವಲ್ಪ ಅಗಲವಾಗಿದ್ದು. ಅದನ್ನು ಬೋರಲಾಗಿ ಇಟ್ಟು ಇಲ್ಲವೆ ಹೊಟ್ಟೆಗೆ ಆನಿಸಿಕೊಂಡು ಎರಡೂ ಕೈ ಬೆರಳುಗಳಿಂದ ಬಡಿಯುತ್ತಾ ಹೋದಂತೆಲ್ಲಾ ಶುಶ್ರಾವ್ಯವಾದ ನಾದ ಹೊರಹೊಮ್ಮುತ್ತದೆ. ದಕ್ಷಿಣ ಭಾರತದ ಸಂಗೀತ ಕಛೇರಿಗಳಲ್ಲಿ “ಘಟಂ ವಾದ್ಯ” ಪ್ರಸಿದ್ದವಾಗಿದೆ. ಪಾಲ್ಘಾಟ್ ಸುಬ್ರಹ್ಮಣ್ಯ ಅಯ್ಯರ್ ಘಟ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ.
ಘಟ ಸ್ಥಾಪನೆ
(ಕ್ರಿ)
ದಸರಾ ಹಬ್ಬದಲ್ಲಿ ಮಣ್ಣಿನ ತಟ್ಟೆಯಲ್ಲಿ ಮಣ್ಣು ತುಂಬಿ ವಿವಿಧ ಧಾನ್ಯಗಳನ್ನು ಹಾಕಿ ಜಗುಲಿಯ ಮೇಲಿಟ್ಟು ಹತ್ತು ದಿನಗಳ ಕಾಲ ಅದಕ್ಕೆ ನೀರು ಹಾಕಿ ಪೂಜಿಸುವ ವಿಧಾನ.
ಘಟಾಗ್ನಿ
(ನಾ)
ಕೊಡದೊಳಗಿನ ಬೆಂಕಿ
ಘಳಿಗೆ ಬಟ್ಟಲು