Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಗಸ
ಮಡಿವಾಳ, ದೋಬಿ, ಬಟ್ಟೆ ಶುಚಿ ಮಾಡುವವನು.
ಅಗಸಗಿತ್ತಿ
ಮಡಿವಾಳ್ತಿ, ಬಟ್ಟೆ ತೊಳೆಯುವವಳು.
ಅಗಳಿ
ನೋಡಿ, ಗಮನಿಸಿ
ಅಗಳಿ
ಅಗಣಿ
ಅಗಳು
ಅನ್ನದ ಕಾಳು, ಬೇಯಿಸಿದ ಅಕ್ಕಿಯ ಕಾಳು.
ಅಗಳೇ
ಅಕ್ಕಳೇ
ಅಗ್ಟಪ್ಪಿನ ಬಳ್ಳಿ
ಬಳ್ಳಿಯನ್ನು ಹಿಡಿಕಟ್ಟಲು ಬಳಸುತ್ತಾರೆ, ಎಲೆಗಳನ್ನು ತೆರೆದು ಎಮ್ಮೆಗೆ
ಹಾಕಿದರೆ ಹಾಲು ಜಾಸ್ತಿಯಗುತ್ತದೆ.
ಅಗ್ಟಪ್ಪು
ಕುರುಚಲು ಗಿಡ, ಮೊದಲು ಇದರ ಕೊಂಬೆಗಳಿಂದ ಅಂಗಳ
ಗುಡಿಸುತ್ತಿದ್ದರು.
ಅಗ್ಗ
ರಿಯಾಯ್ತಿ ದರ, ಕಡಿಮೆ ಬೆಲೆ, ಬೆಲೆಯಿಲ್ಲದ
ಅಗ್ರ
ನಾಲಿಗೆ ಮೇಲೆ ಬರುವ ಬಿಳಿಯ ಪದರ.
ಅಗಿ
ಜಗಿ, ಹಲ್ಲಿಂದ ಕಚ್ಚು
ಅಗಿ
ಗುಂಡಿ ತೋಡು, ಮಣ್ಣನ್ನು ಕೆರೆದು ತೆಗೆ
ಅಗ್ಗಷ್ಟಿಕೆ
ಇದ್ದಲಿನ ಬೆಂಕಿ
ಅಗ್ಣಿ
ಅಗ್ನಿ, ಬೆಂಕಿ
ಅಗ್ಣಿಗೂಡ್ಸು
ದೇವರ / ಎಡೆಯ ಮುಂದೆ ಹತ್ತಿಸಿದ ದೀಪದ ಒಂದು ಬತ್ತಿಯನ್ನು
ಒಲೆಯಲ್ಲಿ ಉರಿಯುವ ಬೆಂಕಿಗೆ ಸೇರಿಸುವ ಒಂದು ಕ್ರಮ.
ಅಗ್ನಿಸರ್ಪ
ಸರ್ಪಸುತ್ತು, ಒಂದು ರೀತಿಯ ಸೋಂಕು ರೋಗ
ಅಗ್ರಿ
ಗೊಬ್ಬರ, ಗಿಡಮರಗಳ ಪೋಷಕಾಂಶ.
ಅಗುಣಿ
ಅಗಳಿ.
ಅಗ್ಳು
ಅಗಳು
ಅಗ್ಳು