Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಕಾಲ್ದಮಳೆ
ಮಳೆ ಬೇಡದಿರುವಾಗ ಬರುವ ಮಳೆ.
ಅಕಾಸ್ಮಾತು
ಅಕಸ್ಮಾತು.
ಅಕ್ಸಾಲಿ
ಅಕ್ಕಸಾಲಿಗ, ಚಿನಿವಾರ, ಚಿನ್ನ ಬೆಳ್ಳಿ ಕೆಲಸ ಮಾಡುವವನು.
ಅಕ್ಕಿ
ಸಿಪ್ಪೆ ತೆಗೆದ ಭತ್ತ, ಭತ್ತದ ಒಳಗಿರುವ ಕಾಳು.
ಅಕ್ಕಿ ಕಾಳು
ಅಕ್ಕಿ
ಅಕ್ಕಿ ಕೇರು
ಮೊರಕ್ಕೆ ಹಾಕಿ ಅಕ್ಕಿಯ ಧೂಳು ತೆಗೆ.
ಅಕ್ಕಿಗೂಡೆ
ಅಕ್ಕಿಯನ್ನು ತುಂಬಿಸಿಡುವ ಬುಟ್ಟಿ.
ಅಕ್ಕಿನುಚ್ಚು
ತುಂಡಾದ ಅಕ್ಕಿ
ಅಕ್ಕಿಭೋಜ
ಅಕ್ಕಿಯಿಂದ ತಯಾರಿಸಿದ ಹೆಂಡ/ಸಾರಾಯಿ, ಮಾದಕ ಪೇಯ.
ಅಕ್ಕಿಮುಡಿ
ಮುಡಿಕಟ್ಟಿದ ಅಕ್ಕಿ
ಅಕ್ಕು
ಅರಗು, ಜೀರ್ಣವಾಗು.
ಅಕ್ಕಸ್ಕಾ
ತಿಂದಿದ್ದು ಅರಗಿಸಿಕೋ. ಜೀರ್ಣಿಸಿಕೋ.
ಅಕ್ರೆ
ಅಕರಾಸ್ತೆ
ಅಖೈರು
ಕೊನೆ, ಕಡೆ, ಅಂತ್ಯ
ಅಗಚು
ಬೇರ್ಪಡು, ಬೇರೆಯಾಗು
ಅಗಚು
ಕೋಳಿ /ಹಕ್ಕಿಮರಿಗಳು ತಾಯಿಯಿಂದ ಬೇರೆಯಾಗುವುದು.
ಅಗಡಿ
ಭತ್ತದ ಮಡಿ, ನಾಟಿಗಾಗಿ ಭತ್ತದ ಸಸಿಗಳನ್ನು ಬೆಳೆಸುವ ಜಾಗ.
ಅಗಣಿ
ಅಗುಳಿ, ತಾಳ, ಚಿಲಕ
ಅಗಲ
ಅಡ್ಡಳತೆ, ಉದ್ದಕ್ಕೆ ವಿರುದ್ಧಪದ.
ಅಗಲು