Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಲಕ್ಕಿಸರ್ಪ
ನಾಗರ ಹಾವಿನಲ್ಲೇ ಸಣ್ಣ ಹಾವು, ತುಂಬಾ ಕೋಪಿಷ್ಟ ಹಾವು ಅತಿವಿಷಕಾರಿ.
ಲಕ್ಷ
ನೂರು ಸಾವಿರ.
ಲಕ್ಷಗಟ್ಲೆ
ನೂರಾರು ಸಾವಿರ.
ಲಕ್ಷಣ
ರೂಪ.
ಲಕ್ಷ್ಮಿಗುಲಾಬಿ
ತಿಳಿಗೆಂಪುಬಣ್ಣದ ಗುಲಾಬಿ, ಅತಿ ಪರಿಮಳಯುಕ್ತವಾದ ಇದರಿಂದ ಗುಲಾಬಿ ಜಲ ತಯಾರಿಸುತ್ತಾರೆ.
ಲಂಗ
ಹೆಣ್ಣು ಮಕ್ಕಳ ಉಡುಪು.
ಲಗತ್ತು
ಹೊಂದಿಕೊಂಡಂತೆ, ಹೊಂದಿಕೊಳ್ಳು, ಲಗ್ತು, ಅನುಕೂಲವಾಗುವಂತೆ.
ಲಗಾಮು
ಮೂಗಿಗೆ ಹಾಕುವ ದಾರ,
ಲಗಾಮು
ಅವಸರ, ಗಡಿಬಿಡಿ.
ಲಂಗುಲಗಾಮು
ಹಡಬಿಟ್ಟಿ, ಹತೋಟಿ.
ಲಂಗೋಟಿ
ತುಂಡುವಸ್ತ್ರ, ಒಂದು ಒಳಉಡುಪು.
ಲಗ್ನ
ಮದುವೆ.
ಲಟಾಪಟಿ
ಜಗಳ, ವಿವಾದ, ವಾಗ್ವಾದ.
ಲಡಾಯ
ಜಗಳ, ಕುಸ್ತಿ.
ಲಡ್ಡು
ಲಾಡು ಉಂಡೆ, ಒಂದು ಸಿಹಿ ತಿನಿಸು.
ಲತ್ತೆ
ಏಟು, ಪೆಟ್ಟು, ಹೊಡೆತ.
ಲದ್ದಿ
ಆನೆ, ಕುದುರೆ ಮುಂತಾದ ಪ್ರಾಣಿಗಳ ಮಲ.
ಲವಂಗ
ಸಾಂಬಾರ ಪದಾರ್ಥ, ಸಣ್ಣ ಮರದಲ್ಲಿ ಬಿಡುವ ಹೂವಿನ ಮೊಗ್ಗು.
ಲವಂಗದ ಕಡ್ಡಿ
ಕಿವಿಯ ಮೇಲಿನ ಆಭರಣ.
ಲವಲೇಶ