भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892930Next >

ಬಕ

ಕೊಕ್ಕರೆ.

ಬಕಾಸುರ

ದೊಡ್ಡ ದೊಡ್ಡ ತುತ್ತು ತಿನ್ನುವವನು, ಹೊಟ್ಟೆ ಬಾಕ (ಅಲಂ) ಮಹಾಭಾರತದಲ್ಲಿ ಬರುವ ಒಂದು ರಾಕ್ಷಸ ಪಾತ್ರ.

ಬಕ್ ಲಕ್ಕಿ

ಮಡ್ಲಕ್ಕಿ, ಅಕ್ಕಿ, ಹಣ್ಣು, ಕಾಯಿ, ಎಲೆ, ಆಡಿಕೆ, ಬಳೆ ಮುಂತಾದುವನ್ನು ಮಡಿಲಿಗೆ ತುಂಬುವುದು.

ಬಕ್ಕೆ

ಗುಳ್ಳೆ, ಕುರ.

ಬಕ್ಕೆ

ಹಲಸಿನ ಹಣ್ಣಿನಲ್ಲಿ ಗಟ್ಟಿಯಾದ ಸೋಳೆಯಿರುವ ಒಂದು ಜಾತಿ.

ಬಕ್ಸೆ

ಬೊಗಸೆ, ಹಿಡಿ.

ಬಂಗ

ಕಷ್ಟ, ತೊಂದರೆ.

ಬಂಗಡೆ

ಒಂದು ಜಾತಿಯ ಸಮುದ್ರದ ಮೀನು.

ಬಂಗದ ಕೂಳು

ಹಂಗಿನ ಊಟ, ಬೇರೆಯವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ. (ಅಲಂ)

ಬಗನಿ

ಬೈನೆ, ತೆಂಗಿನ ಜಾತಿಗೆ ಸೇರಿದ ಕಾಡು ಮರ, ಬೈನೆ.

ಬಗನಿಕಳ್ಳು

ಬಗನಿಮರದ ಕಾಯಿಯ ಗೊಂಚಲು ಎಳೆಯದಾಗಿದ್ದಾಗ ಅದಕ್ಕೆ ಮಡಿಕೆ ಕಟ್ಟಿ ಒಂದು ರೀತಿಯಲ್ಲಿ ಸಂಗ್ರಹಿಸಿದ ರಸ.

ಬಗನಿಮರ

ಬಗನಿ, ಬೈನೆ ಮರ, ಇದರ ಕಾಯಿ ಕಾಡು ಬೆಕ್ಕುಗಳ ಆಹಾರ, ಕಾಯಾಗುವ ಮೊದಲು ಕಳ್ಳು ತೆಗೆಯುತ್ತಾರೆ.

ಬಗಬಗ್ನೆ

ಬೇಗ ಬೇಗನೆ, ತರಾತುರಿಯಲ್ಲಿ.

ಬಗರ್ ಹುಕಂ

ಸರ್ಕಾರಿ ಜಮೀನನ್ನು ಸಾಗುವಳಿ ಮಾಡಿಕೊಳ್ಳುವುದು.

ಬಂಗಾರ

ಚಿನ್ನ, ಕನಕ, ಹೊನ್ನು.

ಬಂಗಿ

ಮಾದಕ ವಸ್ತು, ಮತ್ತು ಬರಿಸುವ ಗಿಡದ ಸೊಪ್ಪು.

ಬಗಿ

ಸೀಳು, ಒಡೆಯುವುದು.

ಬಂಗಿಸೇದು

ಮಾದಕ ವಸ್ತು ಸೇವನೆ.

ಬಗುಳು

ಬೊಗಳು, ನಾಯಿಯ ಕೂಗು.

ಬಗೆಹರಿ

ತೀರ್ಮಾನ, ಇತ್ಯರ್ಥ.
< previous1234567892930Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App