Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಗಗದ್ರ ಸರ
ಗಗ್ರವನ್ನು ದಪ್ಪ ಕಪ್ಪುದಾರಕ್ಕೆ ಪೋಣಿಸಿದ ಸರ.
ಗಗನಾಂತ್ರ
ಭಾರಿ ಎತ್ತರ (ಎಂಥಾಮರ ಗಗನಾಂತ್ರ).
ಗಂಗಳ
ಊಟದ ತಟ್ಟೆ, ತಣಿಗೆ.
ಗಂಗೆ
ಪವಿತ್ರ ನೀರು.
ಗಂಗೆ ಮಗೆಯಾದು
ನೀರನ್ನು ಪೂಜಿಸುವುದು.
ಗಂಗೆದೊಗಲು
ಪ್ರಾಣಿಗಳ ಕೊರಳ ಕೆಳಗೆ ಇಳಿಬಿದ್ದಿರುವ ಚರ್ಮ.
ಗಗ್ಗರದನಿ
ಒಡಕು ಧ್ವನಿ.
ಗಗ್ರ
ಎತ್ತಿನ ಕೊರಳಿಗೆ ಕಟ್ಟುವ ಸಣ್ಣ ಗಂಟೆಗಳು.
ಗಂಗ್ರಬಳಿ
ಮಲೆನಾಡು ಒಕ್ಕಲಿಗರ ಒಂದು ಸಮುದಾಯ/ಗೋತ್ರ.
ಗಚ್ಚು
ನೆಲ, ಗೋಡೆಗಳಿಗೆ ಹಾಕುವ ಲೇಪ,
ಗಚ್ಚು
ಗಟ್ಟಿ ಪದಾರ್ಥವನ್ನ ಕುಟ್ಟಿದಾಗ ಬೀಳುವ ಗುರುತು.
ಗಜ
ಒಂದು ಅಳತೆ, ಮೂರಡಿ ಉದ್ದ
ಗಜ
ಪೆಟ್ಲು ಹೊಡೆಯಲು ಉಪಯೋಗಿಸುವ ಒಂದು ಕಡ್ಡಿ.
ಗಜಕಡ್ಡಿ
ಅಳತೆಗಾಗಿ ಮಾಡಿದ ಒಂದು ಗಜದ ಕೋಲು, ಮೂರಡಿಯ ಕೋಲು.
ಗಜನಿಂಬೆ
ದೊಡ್ಡ ನಿಂಬೆಕಾಯಿ.
ಗಂಜಳ
ಗೋಮೂತ್ರ.
ಗಂಜಿ
ಅಕ್ಕಿ ಬೇಯಿಸಿ ತೆಗೆದ ಸಾರ,
ಗಂಜಿ
ಹೆಚ್ಚು ನೀರು ಹಾಕಿ ಮೆತ್ತಗೆ ಬೇಯಿಸಿದ ಅಕ್ಕಿ,
ಗಂಜಿ
ಹತ್ತಿ ಬಟ್ಟೆ ಗರಿಯಾಗಲು ಬಳಸುವ ಮೈದಾಹಿಟ್ಟಿನ ತಿಳಿ
ಗಂಜಿ