भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಚನಾಕಟ್ಟು

ಅಂದಾಜು ಬೆಲೆ ನಿರ್ಧರಿಸು (ಧಾರ.ಜಿ)

ಅಂಚಿ

ಹಂಚಿ; ಬಯಲಿನಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು. ಪೊರಕೆ ಮಾಡಲು ಬಳಸುವ ತೆನೆಯುಳ್ಳ ಹುಲ್ಲಿನ ಗಿಡ

ಅಂಚಿ

ನದಿಯ ಪಾತ್ರಕ್ಕೆ ಹೊಂದಿಕೊಂಡಿರುವ ನೆಲ.
ಬಳಬಂಚಿ

ಅಂಚಿಕ

ಅಕ್ಕಸಾಲೆಯ ಸಂಚಿ (ಶಿವ.ಜಿ)

ಅಂಚಿಕಡ್ಡಿಶಾಸ್ತ್ರ

ಮದುವೆ ನಿರ್ಣಯಿಸುವ ಮುಂಚೆ ಮನೆಯ ಹಿರಿಯರು ಮನೆದೇವರನ್ನು ಸ್ಮರಿಸಿಕೊಂಡು ಒಂದು ಹಿಡಿ ಹಂಚಿಕಡ್ಡಿಯನ್ನು ಜೋಡಿ ಬರುವ ಹಾಗೆ ಎತ್ತಿಡುತ್ತಾ ಬರುವುದು. ಕೊನೆಯಲ್ಲಿ ಜೋಡಿ ಬಂದರೆ ಈ ಸಂಬಂಧ ಮುಂದುವರೆಸಬಹುದು, ಒಂದೇ ಬಂದರೆ ಸಂಬಂಧ ಕುದುರುವುದಿಲ್ಲ ಎಂಬ ನಂಬಿಕೆ (ಬೆಂಗ್ರಾ.ಜಿ)

ಅಂಚಿಕಡ್ಡಿ ಸುಡುವುದು

ಮಕ್ಕಳಿಗೆ ಆದ ದೃಷ್ಟಿ ನಿವಾರಣೆಗಾಗಿ ಹಂಚಿಕಡ್ಡಿಯನ್ನು ಬೆಸಸಂಖ್ಯೆಯಲ್ಲಿ ತೆಗೆದುಕೊಂಡು, ಅದಕ್ಕೆ ಬೆಂಕಿ ಹಚ್ಚಿ, ಮಕ್ಕಳ ಮುಖದ ಮುಂದೆ ನಿವಾಳಿಸಿ ತೆಗೆದು ಸುಡುತ್ತಾರೆ. ಅದರ ಬೂದಿಯನ್ನು ಹಣೆಗೆ ಹಚ್ಚುತ್ತಾರೆ (ಮಂಡ್ಯ.ಜಿ)

ಅಂಚಿಕಾಸಿಹುಲ್ಲು

ಸಿಂಬೊಪೋಗಾನ್ ಸೀಸಿಯಸ್: ಕಾಸಿಹುಲ್ಲಿನ ಒಂದು ಪ್ರಭೇದ.
ಕಾಮಂಚ

ಅಂಚಿಗುಳ್ದಾಳಿ

ಕುಸುರಿ ಕೆಲಸ ಮಾಡಿರುವ ತಾಳಿ

ಅಂಚಿಗೆ

ತಟ್ಟೆಯ ಆಕಾರದ ಹೆಂಚಿನ ಬಕ್ಕರೆ.
ಓಡು, ಬವೋಡು

ಅಂಚಿನ ದಟ್ಟಿ

ಅಂಚಿನಿಂದ ಕೂಡಿದ ನಡುಪಟ್ಟಿ

ಅಂಚಿನ ದಟ್ಟಿ

ಸೊಂಟಕ್ಕೆ ಸುತ್ತುವ ಅಂಚಿನ ಪಂಚೆ

ಅಂಚಿಬಿಲಿ

ಕುಂಟೋಬಿಲ್ಲೆ.
ಅಂಟಿಬಿಲ್ಲಿ

ಅಂಚಿಶಾಣೆ

ಹಂಚಿಶಾಣೆ; ಧಾನ್ಯ ತೂರುವಾಗ ರಾಶಿಯನ್ನು ಹಸನು ಮಾಡಲು ಬಳಸುವ ಪೊರಕೆ

ಅಂಚು

ಕೊನೆ; ತುದಿ

ಅಂಚು

ಸೀರೆ ಅಥವಾ ಪಂಚೆಯ ತುದಿ.
ಮೂಗುತಿ ಮುಂಭಾರ ಎಡಗಂಟು ಹೆಂಭಾರ ಸಣ್ಣಂಚಿನ ಸೀರೆ ನಡುಭಾರ

ಅಂಚು

ಹೊಲದ ಬದುವು

ಅಂಚುಕಟ್ಟುವುದು

ಸೀರೆ, ಪಂಚೆ ಮೊದಲಾದವುಗಳ ಎಳೆಗಳು ಕಳಚಿಕೊಳ್ಳದಂತೆ ತುದಿಯನ್ನು ಮಡಿಸಿ ಹೊಲಿದು ಅಥವಾ ಹೆಣೆದು ಕಟ್ಟುವುದು

ಅಂಚುಕಟ್ಟುವುದು

ಹೆಂಚಿನ ಹೊದಿಕೆ ಮಾಡುವ ಪೂರ್ವದಲ್ಲಿ ಮನೆಯ ಮಾಡಿನ ಅಂಚಿಗೆ ಹಳೆಯ ಸೋಗೆಗಳನ್ನು ಹೊದಿಸುವುದು. ಮಳೆಗಾಲದಲ್ಲಿ ನೀರು ಸರಿಯಾಗಿ ಕೆಳಗೆ ಬೀಳುವಂತೆ ಮಾಡಲು ಈ ಅಂಚು ಅವಶ್ಯಕ (ಉಕ.ಜಿ)

ಅಂಚುಕಟ್ಟುವುದು

ಕೌದಿ, ಕಂಬಳಿ, ಜಮಖಾನೆಗಳಿಗೆ ಗೋಟುಕಟ್ಟುವುದು (ಉಕ.ಜಿ)
ಕರಿಕಟ್ಟು

ಅಂಚು ಮುರೀದಂಗೆ

ಮುಕ್ಕಾಗದ ಹಾಗೆ; ಹಾಳಾಗದ ಹಾಗೆ (ಮೈಸೂ.ಜಿ)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App