Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಗೈಯಟು
ಅಂಗೈನಷ್ಟು; ಚಿಕ್ಕ ಪ್ರಮಾಣದ; ಸಣ್ಣ ಗಾತ್ರದ (ಬಿಜಾ.ಜಿ)
ಅಂಗೈಯಾಗಾರುತಿ ಬೆಳಗು
ಶಸ್ತ್ರವೊಂದಕ್ಕೆ ಕಕ್ಕಡವನ್ನು ಸುತ್ತಿ, ಅದನ್ನು ಮುಂಗೈ ಮಣಿಕಟ್ಟು ಅಥವಾ ಅಂಗೈಯಲ್ಲಿ ಆರುಪಾರಾಗುವಂತೆ ಚುಚ್ಚಿಕೊಂಡು ಕಕ್ಕಡ ಹೊತ್ತಿಸಿ, ಅದರಿಂದ ದೇವರಿಗೆ ಕಕ್ಕಡಾರತಿ ಬೆಳಗುವುದು (ಬಳ್ಳಾ.ಜಿ) ನೋಡಿ – ಕಕ್ಕಡ
ಅಂಗೈರೇಖು
ಅಂಗೈಯಲ್ಲಿರುವ ಗೆರೆ. ಈ ಗೆರೆಗಳ ವಿನ್ಯಾಸವನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ ನೋಡಿ – ಅಂಗರೇಕೆ
ಅಂಗೈಹಾಂಗ
ಸಮತಟ್ಟಾದ (ಧಾರ.ಜಿ)
ಅಂಗೊಸ್ತ್ರ
ಅಂಗವಸ್ತ್ರ
ಅಂಗೊಸ್ತ್ರ
ವಲ್ಲಿ; ಉತ್ತರೀಯ
ಅಂಗೊಸ್ತ್ರ
ಚಿಕ್ಕಪಂಚೆ;ಪಾಣಿಪಂಚೆ
ಅಂಗ್ತಾರ್ಣ
ಆಕಾಶದ ಕಡೆಗೆ ಮುಖಮಾಡಿ ಮಲಗಿದ ಭಂಗಿ; ಅಂಗಾತ (ಮೈಸೂ.ಜಿ)
ಅಂಗ್ನೂಲು
ನೋಡಿ – ಅಂಗದಾರ
ಅಂಗ್ಮಂಗಿ
ಬೆಡಗಿ; ತಿಳಿದೂ ತಿಳಿಯದವಳಂತೆ ನಟಿಸುವವಳು
ಅಂಗ್ಯಾಳ
ಅಣ್ಣೆಕಲ್ಲು ಆಟಕ್ಕೆ ಬಳಸುವ ಹರಳು
ಅಂಗ್ರಕಡ್ಡಿ
ಹಂಗರುಕಡ್ಡಿ; ಹಂಗರುಸೌದೆ; ಗ್ರಾಮೀಣ ಪ್ರದೇಶದಲ್ಲಿ ಉರುವಲಾಗಿ ಬಳಸುವ ಒಂದು ಜಾತಿಯ ಹಸಿಗಿಡ. ಇದರಲ್ಲಿ ಎಣ್ಣೆಯ ಅಂಶ ಇರುವುದರಿಂದ ಹಸಿಗಿಡಕ್ಕೇ ಬೆಂಕಿ ಹಾಕಿದರೂ ಉರಿಯುತ್ತದೆ (ಹಾಸ.ಜಿ)
ಅಂಗ್ರು
ನೋಡಿ – ಅಂಗರ
ಹಂಗ್ರುಗುತ್ತಿ (ಮೈಸೂ.ಜಿ)
ಅಂಗ್ಲಾಪು
ಅಂಗಲಾಚು; ಹಂಬಲಿಸು
ಅಂಗ್ಳಗುಳ್ಳಿ
ಅಂಗಳ ಗುಳ್ಳಿ; ನಾಲಿಗೆ ಕೆಳಗಿನ ಗುಳ್ಳಿ
ಅಂಗ್ಳಶುಧಿ
ಅಂಗುಳ ಶುದ್ಧಿ; ಗೊರವರಲ್ಲಿ, ಹುಟ್ಟಿದ ಮೂರನೆ ದಿನದಂದು ಮಗುವಿಗೆ ಮಾಡುವ ನಾಲಿಗೆಶುದ್ಧಿಯ ಆಚರಣೆ (ಬೆಂಗ.ಜಿ)
ಅಂಚ
ಹೂವು
ಅಂಚ
ತುದಿ
ಅಂಚ
ಹಂಚು
ಅಂಚಡಿ