Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಔಗಿನಮಡಕೆ
ಅಕ್ಕಿಬೆಲ್ಲ ರುಬ್ಬಿ ಸಿಹಿತಿಂಡಿಯನ್ನು ತಯಾರಿಸಲು ಬಳಸುವ ವಿಶಿಷ್ಟ ಆಕಾರದ ಮಡಕೆ (ಚಿಮ.ಜಿ/ಶಿವ.ಜಿ)
ಔಚು
ಅವುಚು; ಮೇಲೆ ಬೀಳು; ತಬ್ಬು (ಮೈಸೂ.ಜಿ)
ಔಜು
ನೀರಿನ ತೊಟ್ಟಿ (ಗುಲ್ಬ.ಜಿ)
ಔಟು
ಸುಳ್ಳು ಸುದ್ದಿ (ಬಳಾ.ಜಿ)
ಔಟುಬರು
ಡೊಂಕಾಗು (ಬಳ್ಳಾ.ಜಿ)
ಔಟುಬಿಡು
ಬೆದರಿಕೆಯ ಸುಳ್ಳ ಸುದ್ದಿ ಹಬ್ಬಿಸು
ಔಟುಬಿಡು
ಸ್ವಕಲ್ಪಿತ ಸಂಗತಿ ಹರಡು (ಬಳ್ಳಾ.ಜಿ)
ಔಟುಹಾರಿಸು
ವಿಜಯೋತ್ಸವದ ಆಚರಣೆ
ಔಟುಹಾರಿಸು
ಅಬ್ಬರದ ಶಬ್ದವನ್ನುಂಟು ಮಾಡುವ ಮದ್ದನ್ನು ಹಾರಿಸು
ಔಟೆ
ಚಕ್ಕಡಿಯ ತೊಟ್ಟಿಲದ ಮಧ್ಯದಲ್ಲಿ ಅಡ್ಡಲಾಗಿ ಇರುವ ಭಾಗ
ಔಟ್ಲುಗಿಡ
ಕಳ್ಳಿಗಿಡ (ಹಾಸ.ಜಿ)
ಔಡ್
ವಾಕರಿಕೆ.
ಮಗು ಆಗಳಿಂದ ಔಡ್ತಿತ್ತ್ (ದಕ.ಜಿ)
ಔಡಲ/ಔಡ್ಲ
ಹರಳುಗಿಡ; ಎಣ್ಣೆ ಕಾಳಿನ ಗಿಡ. ಇದರ ಎಲೆ ಕಾಮಾಲೆ ರೋಗಕ್ಕೆ ಔಷಧಿ. ಕಾಮದಹನ ಮಾಡುವಾಗ ಔಡಲ ಗಿಡವನ್ನು ಕಾಮನ ಸಂಕೇತವಾದ ಕುಳ್ಳಬಾನದಲ್ಲಿಟ್ಟು ಸುಡುತ್ತಾರೆ (ಬಿಜಾ.ಜಿ/ಮಂಡ್ಯ.ಜಿ).
ಅವುಡ್ಲು (ಚಿತ್ರ ನೋಡಿ)
ಔಡಲಪಕರು ಬಳ್ಳಿ
ಒಂದು ಗಿಡಮೂಲಿಕೆ
ಔಡಾಸು
ಇಷ್ಟವಾಗು (ಗುಲ್ಬ.ಜಿ)
ಔಡು
ವಸಡು; ದವಡೆ
ಔಡ್ಲುಹಣ್ಣು
ಪರಂಗಿಹಣ್ಣು (ಚಿಮ.ಜಿ)
ಔತಣ
ಭೋಜನ
ಔತಣ
ವಿಶೇಷ ಊಟ.
ಬಲ್ಲಿದರ ಮನೇಲಿ ಔತಣವಾದರೆ ಬಡವನಿಗೆ ಬಂದ ಸಿರಿ ಏನು
ಔತಾರ