Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಕೆಹಾಕುವುದು/ಅಂಕೆಗೆ ಹಾಕುವುದು
ಶಿರಸಿಯ ಮಾರಿಕಾಂಬ ದೇವಸ್ಥಾನದ ಜಾತ್ರೆಗೆ ಸಂಬಂಧಿಸಿದ ಒಂದು ಆಚರಣೆ. ಜಾತ್ರೆಗೆ ಮುಂಚೆ ದೇವಿಯ ಮದುವೆ ನಿಶ್ಚಿತಾರ್ಥದ ಶಾಸ್ತ್ರಮಾಡಿ, ಅಣಿಮಾಡಿದ ವೇಇಕೆಯ ಬಳಿ ಸಣ್ಣ ಸಣ್ಣ ಗಡಿಗೆಗಳನ್ನು ಜೋಡಿಸಿಟ್ಟು, ಮಧ್ಯದಲ್ಲಿ ದೀಪ ಹಚ್ಚುತ್ತಾರೆ. ನಂತರ ಪಟ್ಟದ ಕೋಣದ (ನೋಡಿ – ಪಟ್ಟದ ಕೋಣ) ಕುಂಭಕ್ಕೂ ಉತ್ಸವದ ಪ್ರಮುಖರಿಗೂ ಕಂಕಣ ಕಟ್ಟುತ್ತಾರೆ
ಅಂಕೆಹಾಕುವುದು/ಅಂಕೆಗೆ ಹಾಕುವುದು
ಗ್ರಾಮದೇವತೆಗಳ ಜಾತ್ರೆಯಲ್ಲಿ ಕಂಡುಬರುವ ಒಂದು ಆಚರಣೆ
ಅಂಕೆಹಾಕುವುದು/ಅಂಕೆಗೆ ಹಾಕುವುದು
ನಂಬುಗೆ ಸ್ವೀಕರಿಸುವುದು
ಅಂಕೆಹಾಕುವುದು/ಅಂಕೆಗೆ ಹಾಕುವುದು
ಮದುವೆಯ ಕೂಸು ನಿಶ್ಚಯಿಸಿ ಕಂಕಣಕಟ್ಟಿ ವ್ರತಬದ್ಧರಾಗುವುದು
ಅಂಕೆಹಾಕುವುದು/ಅಂಕೆಗೆ ಹಾಕುವುದು
ಬಲಿಕೊಡಲು ಕಟ್ಟಿಹಾಕಿದ ಕೋಣನಿಗೆ ಐದು ಅಥವಾ ಒಂಬತ್ತು ದಿನ ಸುಣ್ಣದ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿಸುವುದು (ಚಿತ್ರ.ಜಿ)
ಅಂಕೊಂಡಿ
ಕೂರಿಗೆಯ ದಿಂಡಿಗೆ ಕಟ್ಟಲು ಬಳಸುವ ಚರ್ಮದ ಪಟ್ಟಿಗೆ ಜೋಡಿಸಿರುವ ಚಿಕ್ಕ ಮೊಳೆ (ರಾಯ.ಜಿ)
ಅಂಕೊಜಿ
ನೋಡಿ – ಅಂಕೊಣಿ
ಅಂಕೊಡಿ
ನೋಡಿ – ಅಂಕೊಣಿ
ಅಂಕೊಣಿ/ಅಂಕೊಜಿ/ಅಂಕೊಡಿ
ಕತ್ತಿ ತೂಗುಹಾಕುವ ಮರದ ಅಥವಾ ಬಿದಿರಿನ ರಚನೆ
ಅಂಕೊಣಿ/ಅಂಕೊಜಿ/ಅಂಕೊಡಿ
ಸೊಂಟಪಟ್ಟಿ ಅಥವಾ ಕೊಕ್ಕೆ (ದಕ.ಜಿ)
ಅಂಕೋಲಧಾರೆ
ಶೇರುದಾರ ಜನಾಂಗದವರಲ್ಲಿ ವಿಧುರತ್ವ ಪ್ರಾಪ್ತವಾಗದಿರಲೆಂದು ಮಾಡುವ ಅನಿಷ್ಟ ನಿವಾರಣೆಯ ಆಚರಣೆ (ಉಕ.ಜಿ)
ಅಂಕೋಲೆ/ಅಂಕಾಲೆ
ಆಲ್ಯಾಂಜಿಯಮ್ ಲಮಾರ್ಕಿಐ: ಉದ್ದವಾದ ಮುಳ್ಳಿರುವ ಒಂದು ಬಗೆಯ ಮರ. ಸಂಕ್ರಾಂತಿ ಹಬ್ಬದ ಹಿಂದಿನ ದಿವಸ ಇದರ ಕಡ್ಡಿಯನ್ನು ಮನೆಗಳಲ್ಲಿ, ಹುಲ್ಲಿನ ಮೆದೆಗಳಲ್ಲಿ ಸಿಕ್ಕಿಸುತ್ತಾರೆ. ಮಾಟಮಂತ್ರ, ಭೂತಪಿಶಾಚಿಗಳ ಕಾಟವನ್ನು ನಿವಾರಿಸುತ್ತದೆಂಬ ನಂಬಿಕೆಯಿಂದ ಮಕ್ಕಳ ತೊಟ್ಟಿಲಿಗೆ ಕಟ್ಟುತ್ತಾರೆ. ಮೈನೆರೆದ ಹೆಣ್ಣುಮಕ್ಕಳ ಕೋಣೆಯಲ್ಲಿ ಇಡುತ್ತಾರೆ. ಈ ಮರದಿಂದ ವಾಸ್ತುಪುರುಷನನ್ನು ಮಾಡಿ ಗೃಹಪ್ರವೇಶ ಸಂದರ್ಭದಲ್ಲಿ ಮನೆಯ ಈಶಾನ್ಯದಿಕ್ಕಿನಲ್ಲಿ ನವರತ್ನಗಳೊಂದಿಗೆ ಹೂಳುವ ಸಂಪ್ರದಾಯವಿದೆ.
ಹೊಡ್ಗೆಗಡ (ತುಮ.ಜಿ), ಊಡುಗಮರ (ಕೋಲಾ.ಜಿ) (ಚಿತ್ರ ನೋಡಿ)
ಅಂಕ್ಪಂಕ್ಲರೋಗ
ಸಣ್ಣಪುಟ್ಟ ಕಾಯಿಲೆ; ಇಂತಹುದೇ ಎಂದು ಹೆಸರಿಸಲಾಗದ ಒಂದು ಸಣ್ಣ ಅನಾರೋಗ್ಯ ಸ್ಥಿತಿ
ಕಸಗಲು (ಮಂಡ್ಯ.ಜಿ/ಬೆಂಗ್ರಾ.ಜಿ)
ಅಂಕ್ಲ
ನೋಡಿ – ಅಂಕಣ
ಅಂಕ್ಲು
ಮಳೆ ಆಶ್ರಯದ ಜಮೀನು (ಶಿವ.ಜಿ).
ಬೆದ್ಲು
ಅಂಗ
ದೇಹದ ಒಂದು ಭಾಗ
ಅಂಗ
ಹಂಗ; ಶುಭ ಅಶುಭಗಳನ್ನು ಸೂಚಿಸುವುದೆಂದು ನಂಬಲಾದ ನೀಲಬಣ್ಣದ ಪಕ್ಷಿ; ಶಕುನದಹಕ್ಕಿ (ಬಳ್ಳಾ.ಜಿ)
ಅಂಗ
ದೋಣಿ ನಡೆಸುವ ಜನಾಂಗ; ಅಂಬಿಗ (ಉಕ.ಜಿ)
ಅಂಗಾಡಕ/ಅಂಗಾಡ್ಕ
ಓರಣ; ಲಕ್ಷಣ; ಅಚ್ಚುಕಟ್ಟು (ಮೈಸೂ.ಜಿ)
೧. ಮಾಡೋ ಕೆಲಸ್ದಾಗೆ ಒಂದು ಅಂಗ ಅಡ್ಕಇರ್ಬೇಕು
ಅಂಗಾಡಕ/ಅಂಗಾಡ್ಕ