Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಕವೋಲಿ
ನೋಡಿ – ಅಂಕೋಲೆ
ಅಂಕಸಂಕ
ಅಂಕೆಶಂಕೆ; ಹತೋಟಿ.
ಅಂಕಸಂಕ ಇಲ್ದೆ ಕುಣೀತಾವೆ ಬೊಡ್ಡೆತ್ತೋವು
ಅಂಕಳ
ನೋಡಿ – ಅಂಕಣ
ಅಂಕಾಯನ
ಕೋಳಿಅಂಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡ ದೇವರುಗಳ ಜಾತ್ರೆ (ದಕ.ಜಿ)
ಅಂಕಾಲೆ
ನೋಡಿ – ಅಂಕೋಲೆ
ಅಂಕಾಳಮ್ಮ
ಒಕ್ಕಲಿಗರ ಒಂದು ಸಮೂಹದ ಮನೆದೇವರು
ಅಂಕಿ
ಅಳಿದುಳಿದ ಕಾಳಿರುವ ತೆನೆ (ಕೋಲಾ.ಜಿ)
ಇರೂ: ಕಂಕಿ
ಸಂಖ್ಯೆ
ಒಂದಂಕಿ, ಎರಡಂಕಿ
ಅಂಕಿಅಟಾಪು
ಕಣ್ಣರಿಕೆ
ಅಂಕಿಅಟಾಪು
ಹತೋಟಿ (ಬಳ್ಳಾ.ಜಿ)
ಅಂಕಿಹಾಕುವುದು
ನೋಡಿ – ಅಂಕೆ ಹಾಕುವುದು (ಬಳ್ಳಾ.ಜಿ)
ಅಂಕು
ತಿನ್ನಲು ಆಸೆ ಪಡು
ಅಂಕುರಾರ್ಪಣ
ಉತ್ಸವಗಳ ಅಂಗವಾಗಿ ಮೊತ್ತಮೊದಲು ಧಾನ್ಯಗಳನ್ನು ಬೆಳೆಯಲು ಹಾಕುವ ಶುಭಾಚರಣೆಗಳಲ್ಲಿ ಒಂದು; ಆಗೆ ಹಾಕುವುದು (ಬೆಂಗ್ರಾ.ಜಿ)
ಅಂಕುರಿಸು
ಮೂಡು; ಮೊಳಕೆ ಒಡೆ
ಅಂಕುಶ
ಆನೆಯನ್ನು ಪಳಗಿಸುವ ಸಾಧನ
ಅಂಕುಶ
ಹಿಡಿತ
ಅಂಕೃತ್ಯ
ದಷ್ಕೃತ್ಯ; ಅಕೃತ್ಯ
ಪರಸ್ತ್ರೀಯನ್ನು ಮಾತನಾಡಿಸುವುದು ಅಂಕೃತ್ಯವೆಂದು ಭಾವಿಸುತ್ತಾರೆ
ಅಂಕೆ
ಅಂಕಿ; ಸಂಖ್ಯೆ
ಅಂಕೆ
ಹತೋಟಿ; ಹಿಡಿತ
ಅಂಕೇಲಿದ್ದ ಹೆಣ್ಣು ಕೆಡೋಲ್ಲ ಮಜ್ಜಿಗೇಲಿದ್ದ ಬೆಣ್ಣೆ ಕೆಡೋಲ್ಲ
ಅಂಕೆ