भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345678910Next >

ಓಂಕ

ತೋಳಿಗೆ ತೊಡುವ ಆಭರಣ ವಿಶೇಷ.
ಓಕು; ಒಂಕಿ; ವಂಕಿ

ಓಕ

ಕೈಬಳೆ (ದಕ.ಜಿ)

ಓಂಕರಿಕೆ

ವಾಕರಿಕೆ (ಕೊಡ.ಜಿ)

ಓಂಕರಿಸು

ಹೂ೦ಕರಿಸು; ಘರ್ಜಿಸು

ಓಕಳಿಯಾಡುವುದು

ಮದುವೆಯ ಒಂದು ಶಾಸ್ತ್ರ. ವಧು ವರರು ಪರಸ್ಪರ ಕೆಂಪು ನೀರು ಎರಚಿಕೊಳ್ಳುವುದು. ಬೇರೆ ಬೇರೆ ದೇವರುಗಳ ಜಾತ್ರೆಗಳ ಸಂಬಂಧದಲ್ಲೂ ಈ ಆಚರಣೆಯಿರುತ್ತದೆ (ಚಿಬ.ಜಿ)

ಓಂಕಾರ

ಕಷ್ಟ; ತೊಂದರೆ (ಮೈಸೂ.ಜಿ)

ಓಕಾಳಿ

ಕೊರಮ ಸಮುದಾಯದಲ್ಲಿ ನ್ಯಾಯಾಧೀಶನಿಗೆ ಬಳಸುವ ಪದ (ಬಳ್ಳಾ.ಜಿ)

ಓಕುಹೇಳು

ಪಾಲಕಿ (ಪಲ್ಲಕ್ಕಿ) ಹೊರುವಾಗ ಓಕ್ ಓಕ್ ಎನ್ನುವುದು; ಪರಾಕು ಹೇಳುವುದು (ಮೈಸೂ.ಜಿ)

ಓಕುಳಿಶಾಸ್ತ್ರ

ಪ್ರಸ್ತವಾದ ಬೆಳಿಗ್ಗೆ ಎರಡು ಹಂಡೆಗಳಲ್ಲಿ ಅರಿಶಿನದ ನೀರನ್ನು ತುಂಬಿ ಗಂಡು ಹೆಣ್ಣಿನ ಕೈಯಲ್ಲಿ ಪರಸ್ಪರ ಅರಿಶಿನದ ನೀರನ್ನು ಎರಚಿಸುವ ಶಾಸ್ತ್ರ(ತುಮ.ಜಿ/ ಶಿವ.ಜಿ). ನೋಡಿ- ಓಕಳಿಯಾಡುವುದು

ಓಕುಳಿಸ್ನಾನ

ತೂಟೆದಾರ ಆಟದಲ್ಲಿ ಭಾಗವಹಿಸುವ ಆಟಗಾರರು ದೇವಸ್ಥಾನದಲ್ಲಿ ಮಾಡುವ ಕುಂಕುಮ ಮಿಶ್ರಿತ ಕೆಂಪು ನೀರಿನ ಸ್ನಾನ (ದಕ.ಜಿ)

ಓಕೊಳ್ಳ/ಓಗೊಳ್ಳು

ಓಗೊಡು; ಓ ಎನ್ನು; ಕರೆಯುವ ಧ್ವನಿಗೆ ಪ್ರತಿಕ್ರಿಯಿಸು (ಮಲೆ).
ನಿಮ್ಮ ಗಂಟ್ಲೆಲ್ಲಾ ಕಟ್ಟಿ ಹೋಗಾ ಓ ಕೊಳ್ಳಾಕೆ ಏನಾಗಿದ್ರೋ (ಮಲೆ)

ಓಕ್ ಬೆಳೆದದ

ಬೆಳೆ ಅತಿ ಎತ್ತರಕ್ಕೆ ಬೆಳೆದು ನಿಷ್ಫ್ರಯೋಜಕವಾಗುವ ರೋಗ (ರಾಯ.ಜಿ)

ಓಗರ

ಸಾರು; ಮೇಲೋಗರ

ಓಗರ

ಬೇಯಿಸಿದ ಆಹಾರ; ಪರಿಮಳಭರಿತ ಅನ್ನ.
ಸಣ್ಣಕ್ಕಿ ಓಗರ ಸರಳೆಮ್ಮೆ ತುಪ್ಪ ಊಟಕ್ಕೆ ನೀಡಿ ಸಾಗ್ಹಾಕಿದರು

ಓಚಯ್ಯ

ಉಪಾಧ್ಯಾಯ; ಶಿಕ್ಷಕ (ಬೆಂಗ್ರಾ.ಜಿ)

ಓಚಯ್ಯ

ವಾಜ; ಆಚಾರಿ; ಶಿಲ್ಪಿ (ಹಾಸನ).
ಓಚ, ಓಜ

ಓಚಿಮರ

ಅಚ್ಚಿನ ಮೇಲೆ ಗಾಡಿಯ ಭಾರವನ್ನು ಹೊರುವಂತೆ ಜೋಡಿಸಿರುವ ದಪ್ಪನೆಯ ಮರ (ಬಳ್ಳಾ.ಜಿ)

ಓಜ

ಮರಗೆಲಸದವ

ಓಜ

ಉಪಾಧ್ಯಾಯ

ಓಜ

ಕಾಂತಿ; ಹೊಳಪು
< previous12345678910Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App