Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಐಕಳಪ
ಆಶ್ಚರ್ಯಸೂಚಕ ಪದ (ಚಿಮ.ಜಿ)
ಐಕ್ಳು/ಐಕಳು
ಹೈಕಳು; ಮಕ್ಕಳು (ದಕ).
ಐಕ್ಳು ಅವ್ರಪ್ಪ ದಾರಿ ಕಾಯ್ತಾ ಕೂತಿದ್ದೋ
ಐಗಂಚಿ
ಬಹುದೂರದ ಊರು: ಬಹಳ ದೂರ.
ಅದೇನು ಐಗಂಚಿಯೇ? ಒಂದು ಗಂಟೆಯಲ್ಲಿ ಊರು ತಲುಪಬಹುದು (ಮಂಡ್ಯ.ಜಿ)
ಐಗಂಚಿಮರ
ಮುಗಿಲೆತ್ತರದ ಮರ (ಮಂಡ್ಯ.ಜಿ)
ಐಗಂಡಗ
ಐದು ಖಂಡಗ (ಗುಲ್ಬ.ಜಿ)
ಐಗಳ
ಐವತ್ತು ಸೇರುಗಳ ಅಳತೆ; ಐದು ಕೊಳಗ; ದವಸ ಧಾನ್ಯಗಳನ್ನು ಅಳೆಯಲು ಈ ಅಳತೆಯನ್ನು ಉಪಯೋಗಿಸಲಾಗುತ್ತದೆ. ಹತ್ತು ಸೇರು ಹಿಡಿಸುವ ಕೊಳಗದಲ್ಲಿ ಐದು ಬಾರಿ ಅಳೆದರೆ ಐಗಳ ಆಗುತ್ತದೆ (ಧಾರ.ಜಿ)
ಐಗಳ
ಕಾಳು ತುಂಬಿದ ಹತ್ತು ಚೀಲಗಳ ಮಾನ; ಐದು ಕೊಳಗಗಳ ಮಾನ (ರಾಯ.ಜಿ).
ಐಗೊಳ
ಐಗಳಮಠ
ಅಯ್ಯಗಳ ಮಠ; ಪಾಠಶಾಲೆ (ಮಲೆ)
ಐಗಳು
ಶ್ರೀಮಂತರ ಮನೆಯಲ್ಲಿ ವಾಸವಿದ್ದ ಸುತ್ತಮುತ್ತಲಿನ ಮಕ್ಕಳಿಗೆ ನಾಲ್ಕಾರು ವರುಷ ಪಾಠ ಹೇಳಿಕೊಡುವವರು (ಮಲೆ)
ಐಗಾರ
ಗುರಿಗಾರ
ಐಗೇಣಿನ ಕುಂಟಿದಿಂದ
ಎರೆಭೂಮಿಯಲ್ಲಿ ಉಪಯೋಗಿಸುವ ಕೃಷಿ ಸಾಧನ (ಗುಲ್ಬ.ಜಿ)
ಐಗೋಳು
ಅಯ್ಯನವರು; ಸ್ವಾಮಿಗಳು; ಗುರುಗಳು: ಜಂಗಮರು (ಗುಲ್ಬ.ಜಿ)
ಐಗೋಳು
ಆಗೇರರ ಗುರುಮಠದ ಮುಖ್ಯಸ್ಥ(ಉಕ.ಜಿ).
ಐನೋರು
ಐಗೋಳ್ತಿ
ಜಂಗಮ ಜಾತಿಯ ಮಹಿಳೆ (ಧಾರ.ಜಿ)
ಐಚೋಜಿಗ
ಬಹಳ ಆಶ್ಚರ್ಯ (ಶಿವ.ಜಿ)
ಐಚೋದ್ಯ
ಆಶ್ಚರ್ಯ
ಐಟಿಗಿ
ದಾರ ಸುತ್ತುವ ವಸ್ತು (ಗುಲ್ಬ.ಜಿ)
ಐಟು
ಯೋಗ್ಯ (ಬಳ್ಳಾ.ಜಿ)
ಐಡಿಸು
(ಕ್ರಿ)
ಬೇರೆ ಪಾತ್ರೆಗೆ ತುಂಬು
ಐತ