भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಐಬೋಗ

ಶ್ರೀಮಂತಿಕೆ; ಐಶ್ವರ‍್ಯ (ಚಾಮ.ಜಿ)

ಐಭೂತ

ಅದ್ಭುತ

ಐಭೂತ

ರಾಕ್ಷಸವೇಷ (ಚಿತ್ರ.ಜಿ)

ಐಮೂಲಿಜಾಗ

ಐದು ಮೂಲೆಯ ನಿವೇಶನ. ಇದು ಅಷ್ಟು ಶುಭಕರವಲ್ಲ ಎಂಬನಂಬಿಕೆ
ಅಯ್ಯೋ, ಐಮೂಲಿ ಜಾಗ ಅದನ್ಯಾಕ ತಗೊಂತಿ ಅಂತ ಕೆಲವು ಮಂದಿರಾಗ ಎಳದ್ರು (ದಾವ.ಜಿ)

ಐಮೂಲೆ

ದೂರವಿರುವ ಸ್ಥಳ
ಅಯ್ಯೊ ಆ ಊರಾ ಐಮೂಲೇಲೈತೆ

ಐಮೂಲೆ

ಐದು ಮೂಲೆ
ಆಯದಲ್ಲಿ ಐಮೂಲೆ ಶ್ರೇಯಸ್ಸಲ್ಲ

ಐಮೂಲೆ

ಅಯ್ಯನ ಮೂಲೆ; ದೇವರ ನೆಲೆ.
‍ಪೂಜೆ ಮಾಡಿ ಐಮೂಲೆಗೆ ಕೈಮುಗಿದರು

ಐಮ್ತೊ

ಒಂದು ಹೆಣ್ಣುಮಕ್ಕಳ ಆಟ (ಗುಲ್ಬ.ಜಿ)

ಐಯಾರಿ

ಮದುವೆ ಮುಂತಾದ ವಿಶೇಷ ಸಂದರ್ಭದಲ್ಲಿ ಕೊಡುವ ಉಡುಗೊರೆ (ಗುಲ್ಬ.ಜಿ).
ಆಹೇರು, ಮುಯ್ಯಿ

ಐಯ್ನ್‌ಗಂದಾಯ

ವಸೂಲಿ ಮಾಡಿದ ಕಂದಾಯದಲ್ಲಿ ಇತರ ಸುಂಕಗಳನ್ನು ಕಳೆದ ನೇರ ನೆಲಗಂದಾಯ

ಐಯ್ಯಪ್ಪ

ನೋಡಿ- ಅಯ್ಯಪ್ಪ

ಐಯ್ಯಾಚಾರ

ಜಂಗಮ ಯುವಕರಿಗೆ ನೀಡುವ ದೀಕ್ಷಾಕ್ರಿಯೆ (ಗುಲ್ಬ.ಜಿ)

ಐಯ್ವಾದ

ಆಯವಾದ; ಅನುಕೂಲಕರವಾದ (ಶಿವ.ಜಿ)

ಐರಗಡಗ

ಮುತ್ತೈದೆತನದ ಸಂಕೇತವಾಗಿ ತೊಡುವ ಬೆಳ್ಳಿಯ ಕಡಗ (ಮಂಡ್ಯ.ಜಿ).
ತೋಳಿಗೆ ತೋಳಬಾಪುರಿ, ಹಸ್ತಕೆ ಐರಗಡಗ ನೀವು ಮೊದಲಾಗಿ ಕೊಡಬೇಕು

ಐರಣಿ

ಮದುವೆಗಳಲ್ಲಿ ಪೂಜಿಸುವ ಪಂಚಕಲಶ: ಅರಣೆ ಶಾಸ್ತ್ರದ ಮಡಕೆ

ಐರಣಿ

ಮದುವೆಯ ದಿನ ಕುಂಬಾರನ ಮನೆಯಿಂದ ತರುವ ಗಡಿಗೆ: ಕೊಡ.
ಐರ್‍ನಗಡಿಗೆ

ಐರಣಿಊಟ

ಮದುವೆಯಲ್ಲಿ ಐರಣೆ ಗಡಿಗೆಗಳನ್ನು ಪೂಜಿಸಿದಾಗ ನೀಡುವ ಊಟ (ಶಿವ.ಜಿ)

ಐರಣಿದೀಪ

ಐರಣೆ ಗಡಿಗೆಗಳ ಮುಂದೆ ಹಚ್ಚುವ ದೀಪ (ಚಿತ್ರ.ಜಿ)

ಐರಣಿಶಾಸ್ತ್ರ

ಮದುವೆಗೆ ಬೇಕಾದ ಮಣ್ಣಿನ ಕುಡಿಕೆಗಳನ್ನು ಕುಂಬಾರನ ಕೈಯಿಂದ ಪೂಜೆ ಮಾಡಿಸಿಕೊಂಡು ತರುವ ಶಾಸ್ತ್ರ (ಬಳ್ಳಾ.ಜಿ)

ಐರಣೆ

ಮದುವೆಯಲ್ಲಿ ಹಣತೆ ದೀಪಗಳನ್ನಿಟ್ಟು ಪೂಜಿಸುವ ಮಣ್ಣಿನ ಮಡಕೆ, ಈ ಮಡಿಕೆಗಳ ಮೇಲೆ ಸುಣ್ಣ ಬಳಿದು ಕೆಮ್ಮಣ್ಣಿನ ಚಿತ್ತಾರ ರಚಿಸಲಾಗಿರುತ್ತದೆ. ಮದುವೆಯಲ್ಲಿ ಕುಂಬಾರನ ಮನೆಯಿಂದ ವಿಧ್ಯುಕ್ತವಾಗಿ ಈ ಗಡಿಗೆಗಳನ್ನು ಮದುವೆಮನೆಗೆ ತರಲಾಗುತ್ತದೆ. ಗಡಿಗೆಗಳ ಸಂಖ್ಯೆಯು ಆಯಾ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗುತ್ತದೆ (ದಕ).
ಅರ್‍ನೆ,ಅರನೆ, ಏರಾಣಿ, ಐರಣಿ, ಅರಣೆಗಡಿಗೆ ಐರ್‍ನಗಡಿಗೆ (ಮೈಸೂ.ಜಿ)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App