भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಐದುತನ

ಹೆಣ್ಣಿನ ಕಡೆ ಇಬ್ಬರು ಗಂಡಿನ ಕಡೆ ಮೂವರು ಮುತ್ತೈದೆಯರು

ಐದುತಾಸು

ಐದುಗಂಟೆ
ಬಂದಿ ಬರೋಕೆ ಇನ್ನೂ ಐದು ತಾಸು ಐತ್ರೀ

ಐದುತಾಸು

ಅರ್ಧರಾತ್ರಿಗೆ ಸ್ವಲ್ಪ ಮುಂಚೆ; ನಡುರಾತ್ರಿ

ಐದುದಿನ್ನಿನ ದಾಣಿಗಳು

ಜೋಳ, ಗೋದಿ, ಭತ್ತ, ಸಜ್ಜೆ ಅಗಸಿ ಮುಂತಾದ ಯಾವುದಾದರೂ ಐದು ತರಹದ ಧಾನ್ಯಗಳನ್ನು ಘಟಸ್ಥಾಪನೆಗಾಗಿ ಕಲಸಿಡುವುದು (ಗುಲ್ಬ.ಜಿ)

ಐದುನೀರು

ಸಮಗಾರರಲ್ಲಿ ಮದುವೆಯಾದ ನಂತರ ವಧುವನ್ನು ಗಂಡಿನ ಮನೆಗೆ ಇಬ್ಬರು ಹಿರಿಯ ಮಹಿಳೆಯರೊಡನೆ ಕಳಿಸಿಕೊಡುತ್ತಾರೆ (ಅಕ್ಕ/ಸೋದರತ್ತೆ). ಅಲ್ಲಿ ಮುಂದಿನ ಐದು ದಿನಗಳು ನವಜೋಡಿಯು ಮನೆಯವರೆಲ್ಲರ ಮುಂದೆ ಪರಸ್ಪರ ಸಿಹಿ ತಿನ್ನಿಸುವಂತೆ ಮಾಡುವ ಶಾಸ್ತ್ರವೇ ಐದುನೀರು

ಐದುಮುಡಿ

ಮೈನೆರೆದ ಹುಡುಗಿಯರಿಗೆ ಕೂದಲನ್ನು ಐದು ಭಾಗವಾಗಿ ಕಟ್ಟುವ ಒಂದು ಆಚರಣೆ (ಕೊಡ.ಜಿ)

ಐದುಶುಕ್ರವಾರದ ಪೂಜೆ

ಶ್ರಾವಣ ಮಾಸದ ಶುಕ್ರವಾರಗಳಲ್ಲಿ ಸಾಯಂಕಾಲ ಮಾಡುವ ಲಕ್ಷ್ಮೀ ಪೂಜೆ

ಐದೂರ

ಒಂದು ಗೊತ್ತಾದ ದೂರ

ಐದೆ

ಮುತ್ತೈದೆ; ಸುವಾಸಿನಿ; ಸುಮಂಗಲೆ

ಐದೆಳೆಸೂತ್ರ

ಐದು ಎಳೆಗಳ ದಾರ. ಲಿಂಗಾಯತರ ವಿವಾಹ ವಿಧಿಗಳಲ್ಲಿ ಪಂಚಕಲಶಗಳಿಗೆ ಇದನ್ನು ವಿಧ್ಯುಕ್ತವಾಗಿ ಸುತ್ತಲಾಗುತ್ತದೆ

ಐದೇಶಿ/ಏದೇಶಿ/ಐದೇಸಿ

ಮಗು ಹುಟ್ಟಿದ ಐದನೆಯ ದಿನ ಮಾಡುವ ಪೂಜೆ.ಇದು ಶಟಗವ್ವನ ಪೂಜೆ. ಗಂಡಾಗಿದ್ದರೆ ಐದು ಜನ ಗಂಡು ಮಕ್ಕಳನ್ನೂ ಹೆಣ್ಣಾಗಿದ್ದರೆ ಐದು ಜನ ಹೆಣ್ಣು ಮಕ್ಕಳನ್ನೂ ಕರೆದು ಮಾಂಸಾಹಾರದ ಅಡುಗೆ ಮಾಡಿ ಬಡಿಸುತ್ತಾರೆ.ಅಂದು ರಾತ್ರಿ ಶೆಟಗವ್ವ ಮಗುವಿನ ಹಣೆಬರಹ ಬರೆಯುತ್ತಾಳೆಂಬ ನಂಬಿಕೆ ಇದೆ. ಅದಕ್ಕಾಗಿ ಜಾಲಿ ಕಂಟಿಯ ಸಣ್ಣ ರೆಂಬೆಯನ್ನು ತಂದು ಅದಕ್ಕೆ ತಾಳಿ ಕಟ್ಟೆ ಅರಿಶಿನ ಕುಂಕುಮ ಹೂಗಳಿ೦ದ ಪರೂಚೆ ಮಾಡುತ್ತಾರೆ. ರಾತ್ರಿ ಒಂದು ಪಾತ್ರೆಯಲ್ಲಿ ಜೋಳ ಅಥವಾ ಗೋಧಿ ಹಿಟ್ಟು ಹಾಕಿ, ಸ್ವಲ್ಪವೂ ಉಬ್ಬುತಗ್ಗಿಲ್ಲದಂತೆ ಸಮತಟ್ಟಾಗಿ ಮಾಡಿ ಮತ್ತೊಂದು ಪಾತ್ರೆ ಮುಚ್ಚಿಟ್ಟಿರುತ್ತಾರೆ. ಬೆಳಗ್ಗೆ ಅದನ್ನು ತೆರೆದಾಗ ಅದರ ಮೇಲೆ ಶೆಟಗವ್ವನ ಹೆಜ್ಜೆ ಗುರುತು ಮೂಡಿರುತ್ತದೆ ಎಂದು ಹೇಳುತ್ತಾರೆ.

ಐದೇಶಿ/ಏದೇಶಿ/ಐದೇಸಿ

ಮಗು ಹುಟ್ಟಿದ ಮನೆಯವರು ಐದನೇ ದಿನದಂದು ಮಾಡುವ ವಿಶೇಷಪೂಜೆ.ಅಂದು ಸೂಲಗಿತ್ತಿಯನ್ನು ಕರೆದು బಟ್ಟೆ, ಬಳೆ, ಹಣ ಇತ್ಯಾದಿ ನೀಡುವುದು ರೂಢಿ (ಉಕ)

ಐಂದ್ರಿ

ಪೂರ್ವದಿಕ್ಕು

ಐಂದ್ರಿ

ಇಂದ್ರನ ಹೆಂಡತಿ, ಶಚಿ

ಐನ

ಊರದೇವರ ಸಾಮೂಹಿಕ ಪೂಜೆ

ಐನ

ಅಯನ

ಐನ

ಸರಿಯಾದ

ಐನ

ಮುಖ್ಯ; ಪ್ರಧಾನ,
ಐನುಬೆಳೆ (ಉಕ.ಜಿ)

ಐನ

ಹಾಲು ಮೊಸರು ಮಜ್ಜಿಗೆ ಹೇರಳವಾಗಿ ಇರುವ ಮನೆ: ಹೈನು (ದಕ)

ಐನ

ಮುಖವಾಡಗಳು (ಉಕ.ಜಿ)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App