Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಎಕರೆ
ನಲವತ್ತು ಗುಂಟೆ ವಿಸ್ತಾರದ ಭೂಮಿ
ಎಂಕಲ್ಕ
ದೊಡ್ಡ ಗಾತ್ರದ ಹಂದಿ (ದಕ.ಜಿ)
ಎಕಸರ
ಏಕಸರ; ಹೆಂಗಸರು ಕೊರಳಲ್ಲಿ ಹಾಕಿಕೊಳ್ಳುವ ಒಂದು ಎಳೆಯ ಸರ (ಬಿಜಾ.ಜಿ)
ಎಕ್ಕ/ಎಕ್ಕಿ/ಎಕ್ಕೆ
ಕಲಾಟ್ರಪಿಸ್ ಜೈಗ್ಯಾಂಟಿಯ:
ಎಕ್ಕ/ಎಕ್ಕಿ/ಎಕ್ಕೆ
ಕೆಂಪು ಮತ್ತು ಬಿಳಿ ಹೂ ಬಿಡುವ ಎರಡು ಪ್ರಬೇಧಗಳಿವೆ. ಬಿಳಿ ಎಕ್ಕವನ್ನು ಸೂರ್ಯನ ಪ್ರತೀಕವೆಂದು ನಂಬಿ ಪೂಜೆ ಮತ್ತು ಮಾಟ ಮಂತ್ರಕ್ಕೆ ಬಳಸುತ್ತಾರೆ. ಶಿವರಾತ್ರಿಯಂದು ಶಿವನು ಎಕ್ಕದ ಗಿಡದ ಕೆಳಗೆ ವಾಸಮಾಡುತ್ತಾನೆ, ಎಕ್ಕದ ಗಿಡದ ಬುಡದಲ್ಲಿ ನೀರಿರುತ್ತದೆ ಮುಂತಾದ ನಂಬಿಕೆಗಳಿವೆ. ರಾಶಿಯ ಕಾಲದಲ್ಲಿ ಹೊಲದಲ್ಲಿಟ್ಟು ಪೂಜಿಸುತ್ತಾರೆ. ಮೂರನೇ ಮದುವೆ ಶ್ರೇಯಸ್ಸಲ್ಲ ಎಂಬ ಕಾರಣಕ್ಕೆ ಮೊದಲು ಎಕ್ಕದ
ಗಿಡದೊಂದಿಗೆ ಮದುವೆ ಮಾಡಿಸಿ ನಂತರ ಮದುವೆ ಮಾಡುತ್ತಾರೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಹಲ್ಲುನೋವು, ಜ್ವರ, ಶೀತ, ಕೆಮ್ಮು, ಗೂರಲು, ಅಜೀರ್ಣ, ಆಮಶಂಕೆ, ಕಫ, ಆನೆಕಾಲುರೋಗ, ಕಾಲುಊತ ಮೊದಲಾದವುಗಳ ಚಿಕಿತ್ಸೆಗೆ ಈ ಗಿಡದ ಬೇರೆ ಬೇರೆ ಭಾಗಗಳನ್ನು ಬಳಸುತ್ತಾರೆ. (ಚಿತ್ರ ನೋಡಿ)
ಎಕ್ಕ/ಎಕ್ಕಿ/ಎಕ್ಕೆ
ಭಜನೆಯಲ್ಲಿ ಬಳಸುವ ಕಬ್ಬಿಣದ ತಾಳ
ಎಕ್ಕ/ಎಕ್ಕಿ/ಎಕ್ಕೆ
ಅಕ್ಕ
ಎಕ್ಕ/ಎಕ್ಕಿ/ಎಕ್ಕೆ
ಒಂಟಿ; ಒಂದು ಆಭರಣ ವಿಶೇಷ (ಬೀದ.ಜಿ)
ಎಕ್ಕಟಿಗ
ಒಬ್ಬಂಟಿಗ
ಎಕ್ಕಡ
ಚಪ್ಪಲಿ
ಎಕ್ಕಡ
ಪಾದರಕ್ಷೆ
ಎಕ್ಕಡ
ಚಪ್ಪೋಡು (ಚಿತ್ರ.ಜಿ)
ಎಕ್ಕಡಿ
ಪಗಡೆಯಾಟದಲ್ಲಿ ಒಂದು ವಿಧ (ಮೈಸೂ.ಜಿ)
ಎಕ್ಕಡಿ
ಚೆನ್ನೆ ಆಟದಲ್ಲಿ ಬಳಕೆಯಾಗುವ ಕವಡೆ (ದಕ.ಜಿ)
ಎಕ್ಕತ್ತು
ಹೆಕ್ಕತ್ತು; ಕುತ್ತಿಗೆ; ಕೊರಳು (ಮಂಡ್ಯ.ಜಿ/ಮೈಸೂ.ಜಿ)
ಎಕ್ಕನಕಿವಿಸೊಪ್ಪು
ಒಂದು ಔಷಧಿಸೊಪ್ಪಿನ ಗಿಡ. ತಂಪುಗುಣದಿಂದಾಗಿ ತಲೆಉರಿ, ಕಣ್ಣುರಿ,ಕೂದಲು ಉದುರುವಿಕೆ ಮತ್ತು ಬಾಲನೆರೆ ತೊಂದರೆಯನ್ನು ನಿವಾರಿಸುವ ಗುಣ ಹೊಂದಿದೆ
ಎಕ್ಕಪತ್ತಿ
ಎಕ್ಕದ ಎಲೆ; ಬಿಲ್ವಪತ್ರೆಯಂತೆ ಇದನ್ನೂ ದೇವರಿಗೆ ಹೂವಿನ ಜತೆ ಏರಿಸುವ ರೂಢಿಯಿದೆ (ಬಳ್ಳಾ.ಜಿ)
ಎಕ್ಕಯ್ಯ ಜೋಗಯ್ಯ
ಪತಿಯ ಶಾಪಕ್ಕೆ ತುತ್ತಾಗಿ ತೊನ್ನುರೋಗ ಪೀಡಿತಳಾದ ಎಲ್ಲಮ್ಮನಿಗೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿದರೆ
ರೋಗನಿವಾರಣೆಯಾಗುತ್ತದೆ ಎಂದು ಪರಿಹಾರ ಸೂಚಿಸಿದ ಸತ್ಪುರುಷರು (ಉಕ)
ಎಕ್ಕರಲಾಡು
(ಕ್ರಿ)
ಪ್ರಯತ್ನಿಸು; ಶ್ರಮಪಡು
ಎಕ್ಕರಲಾಡು