Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಊಕಾಲಿ
ಗರ್ಭಧರಿಸಿದ ಆರು ತಿಂಗಳಲ್ಲಿ ಹೆಂಗಸರಿಗೆ ಹಿಡಿಯುತ್ತದೆಂದು ಹೇಳಲಾಗುವ ಹೆಣ್ಣು ದೇವತೆ
ಊಕ್ಕಾವಂಗ
ಕಾವಲುಗಾರ
ಊಗಲಾಳಿ
ಮುಸುಂಡಿ
ಊಗಲಾಳಿ
ಮಡಕೆ ಹಿಂದೆ ಅಡಗಿ ಕುಳಿತವ
ಊಗಲಾಳಿ
ಋಜುವಲ್ಲದವ; ಸೊಟ್ಟ
ಊಗುನೆಲ್ಲು
ಒಂದು ವಿಧದ ಭತ್ತ (ಕೋಲಾ.ಜಿ)
ಊಗೆಣ್ಸುಸತ್ತೆ
ಒಂದು ಕಳೆಹುಲ್ಲು
ಊಚ
ಉದ್ದ; ಎತ್ತರ (ಬೀದ.ಜಿ)
ಊಚತ್ರಿಕೆ
ದೇವರ ಉತ್ಸವಗಳಲ್ಲಿ ಹಿಡಿದುಕೊಳ್ಳುವ ಬಿಳಿಯ ವರ್ಣದ ದೊಡ್ಡ ಕೊಡೆ; ಛತ್ರಿ
ಊಚಿ
ಹೆಚ್ಚಿನ ಬೆಲೆಯ
ಊಚಿ
ಒಂದು ಬಗೆಯ ಹುಲ್ಲು; ಊಬು ಹುಲ್ಲು
ಊಜಗನಹುಲ್ಲು
ಬೆಳೆಗಳ ನಡುವೆ ಬೆಳೆಯುವ ಕಳೆಹುಲ್ಲು
ಊಜಿ
ಹೂಜಿ; ನೀರು ತುಂಬಿಡುವ ವಿಶಿಷ್ಟಾಕಾರದ ಮಣ್ಣಿನ ಮಡಕೆ (ತುಮ.ಜಿ)
ಊಜಿನೊಣ
ರೇಷ್ಮೆ ಹುಳುವನ್ನು ಬಾಧಿಸುವ ಒಂದು ಕೀಟ.
ವಾಜೆ
ಊಜಿಹೊಡೆಯುವುದು
ರೇಷ್ಮೆಹುಳುವಿಗೆ ತಗಲುವ ಕೀಟಬಾಧೆ; ನೊಣಗಳು ರೇಷ್ಮೆ ಹುಳುವಿನ ಮೆದುವಾದ ಚರ್ಮವನ್ನು ಚುಚ್ಚಿ ತಮ್ಮ ಮೊಟ್ಟೆಯನ್ನು ಅದರೊಳಗೆ ಇಡುತ್ತವೆ. ರೇಷ್ಮೆ ಹುಳು ಬೆಳೆದಂತೆ ಅದರ ದೇಹದೊಳಗೆ ಊಜಿಯೂ ಬೆಳೆಯುತ್ತದೆ. ರೇಷ್ಮೆ ಹುಳು ಹಣ್ಣಾಗುವ ಸಮಯ ಬಂದಾಗ ಊಜಿ ಹೊರಬರುತ್ತದೆ ರೇಶ್ಮೆಹುಳು ಗೂಡು ಕಟ್ಟಲು ಸಾಧ್ಯವಾಗುವುದಿಲ್ಲ (ಮಂಡ್ಯ.ಜಿ)
ಊಜು
ಚೀಪು (ದಕ.ಜಿ)
ಊಜೇಬತ್ತಿ
ಊದುಬತ್ತಿ
ಊಟದ ಪಡಿ
ಗೊಂಡರ ಮದುವೆ ಕಾರ್ಯದಲ್ಲಿ ಮುಖ್ಯವಾಗಿ ಭಾಗವಹಿಸುವ ಮಡಿವಾಳ ಹಾಗೂ ಕ್ಷೌರಿಕರಿಗೆ ಕೊಡುವ ಸಂಭಾವನೆ (ಉಕ.ಜಿ)
ಊಟಿ
ಗಾಡಿ ಎಳೆಯಲು ಒಂದು ಎತ್ತು ದುರ್ಬಲ ಆಗಿದ್ದರೆ ಶಕ್ತಿಯುತ ಎತ್ತಿನ ಕಡೆ ಹೆಚ್ಚು ಭಾರ ಬೀಳುವಂತೆ ಮಾಡುವ ವಿಧಾನ (ಚಿಮ.ಜಿ)
ಊಟಿ