भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567898182Next >

ಉಕರಿ

ನೆಲದಲ್ಲಿರುವ ಶೇಂಗಾಕಾಯಿಗಳನ್ನು ಕೆದಕಿ ತೆಗೆಯುವ ಕಬ್ಬಿಣದ ಸಾಧನ (ಗುಲ್ಬ.ಜಿ)

ಉಕಾರ

ನೇಯ್ಗೆಯ ಸಂದರ್ಭದಲ್ಲಿ ಬಣ್ಣ ಮಾಡುವ ಮೊದಲು ರೇಶ್ಮೆಯಲ್ಲಿರುವ ಅಂಟನ್ನು ತೆಗೆಯಲು ಬಳಸುವ ಸೋಪಿನ ಅಥವಾ ಸೋಡಾದ ದ್ರಾವಣ

ಉಕಾರ

ಭೂಮಿಯ ಆಕಾರ

ಉಕಾರ

ಏಕಮಾನ್ಯ ಇತ್ಯಾದಿಗಳನ್ನು ತಿಳಿಸುವ ಕಾಗದ ಪತ್ರ
ಎಂಟ್ರಿ ಉಕಾರು

ಉಕಾರಒಲೆ

ಉಕಾರದ ಒಲೆ. ನೇಕಾರಿಕೆಯಲ್ಲಿ ರೇಷ್ಮೆಯ ಅಂಟನ್ನು ತೆಗೆಯಲು ಬಳಸುವ ಸೋಪಿನ ದ್ರಾವಣವನ್ನು ಕುದಿಸುವ ಒಲೆ. (ಚಿತ್ರ.ಜಿ)

ಉಕಾರರೇಶ್ಮೆ

ಉಕಾರದೊಳಗೆ ಅದ್ದಿ ತೆಗೆದ ರೇಷ್ಮೆ

ಉಕಾರಸಾಬೂನು

ಉಕಾರವನ್ನು ತಯಾರಿಸಲು ಬಳಸುವ ಸಾಬೂನು

ಉಂಕಿ

ಮಗ್ಗದ ಉದ್ದ ಹಾಸು (ಧಾರ.ಜಿ); ಹತ್ತಿ ನೂಲಿನ ಹಾಸು (ಬೆಳ.ಜಿ)

ಉಂಕಿ

ನೂಲುವ ಲಾಳಿ

ಉಕೇರಿ

ಬಸವನ ಕಲ್ಲು (ಬಳ್ಳಾ.ಜಿ)

ಉಕ್ಕ

(ಕ್ರಿ)
ಹುಲ್ಲಿನಿಂದ ಧಾನ್ಯವನ್ನು ಬೇರ್ಪಡಿಸುವಿಕೆ (ಉಕ)

ಉಕ್ಕಡ

ಸುಂಕದಕಟ್ಟೆ (ದಕ)

ಉಕ್ಕಡ

ಕಾವಲುಮನೆ (ಉಕ)

ಉಕ್ಕಡ

ಅತಿಶಯ

ಉಕ್ಕಡ

ಕೊಡಕ್ಕೆ ಬಿಗಿದ ಹಗ್ಗದ ಕುಣಿಕೆ (ಚಿತ್ರ.ಜಿ)

ಉಕ್ಕಡ

ಊರಿನ ಅಥವಾ ನಗರದ ಗಡಿ (ಕೊಪ್ಪ.ಜಿ)

ಉಕ್ಕಡ

ಹರಿಗೋಲು (ಹಾಸ.ಜಿ)

ಉಕ್ಕಡ

ಒಂದು ಹಳ್ಳಿ

ಉಕ್ಕಡ

ನೀರನ್ನು ಹೊರಬಿಡಲು ಇರುವ ಜಾಗ; ತೂಬು

ಉಕ್ಕಡ

ಆರತಿಉಕ್ಕಡ ಎಂಬ ಪವಿತ್ರಕ್ಷೇತ್ರ (ಮಂಡ್ಯ.ಜಿ)
< previous1234567898182Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App