भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

(ಕ್ರಿ)
ಕರುಹಾಕು

ಕೊಡು

ಈಕರಿಸಿಕೊಳ್ಳು

ಭಯಪಟ್ಟು ಕೂಗು (ಮಂಡ್ಯ.ಜಿ)

ಈಂಕರಿಸು

ಧಿಕ್ಕರಿಸು

ಈಂಕರಿಸು

ಹ್ಞೂಂಕರಿಸು

ಈಂಕಾರ

ಹೀನ ರೀತಿ

ಈಂಕಾರ

ಅಹಂಕಾರ (ಶಿವ.ಜಿ)

ಈಚಲ/ಈಚಲು

ಫೀನಿಕ್ಸ್ ಎಕಾಲಿಸ್ ಸಿಲ್ವೆಸ್ಟ್ರಿಸ್‌: ತಾಳೆ ಜಾತಿಗೆ ಸೇರಿದ ಬಹೂಪಯೋಗಿ ಮರೆ. ಇದರ ಹಾಲಿನಂತಹ ದ್ರವವನ್ನು ಸೇಂದಿ, ಈಚಲಹೆಂಡ ಎನ್ನುತ್ತಾರೆ. ಇದರ ರಸದಿಂದ ಬೆಲ್ಲ ಮತ್ತು ಕಲ್ಲುಸಕ್ಕರೆ ತಯಾರಿಸುತ್ತಾರೆ. ಈಚಲುಗರಿಗಳಿಂದ ಚಾಪೆ, ತಡಿಕೆ ನೇಯುತ್ತಾರೆ. ಗರಿಯ ಕಡ್ಡಿಗಳಿಂದ ಪೊರಕೆಯನ್ನು ಮಾಡುತ್ತಾರೆ. ಈಡಿಗರಿಗೆ ಪೂಜನೀಯ ವೃಕ್ಷ. ಇರೂ: ಕದಂಬವೃಕ್ಷ; ಸೇಂದಿಗಿಡ (ಚಿತ್ರನೋಡಿ)

ಈಚಲ/ಈಚಲು

ಮಳೆಗಾಲದಲ್ಲಿ ಹುತ್ತದ ಬಳಿ ಅಥವಾ ಸಡಿಲವಾದ ಭೂಮಿಯಿಂದ ಹೊರ ಬೀಳುವ ರೆಕ್ಕೆಹುಳು; ಈಚಲುಳು (ದಕ).

ಈಚಲಕಸಬರ‍್ಗಿ

ಈಚಲು ಗರಿಯಿಂದ ಮಾಡಿರುವಂತಹ ಪೊರಕೆ. ಅಡುಗೆಮನೆ ಹಾಗೂ ದೇವರಕೋಣೆ ಕಸವನ್ನು ಈ ಕಸಬರಿಗಿಯಿಂದ ಗುಡಿಸುವುದಿಲ್ಲ (ಬಳ್ಳಾ.ಜಿ)

ಈಚಲಗರಚಿ

ಧೂಳನ್ನು ಹೊಡೆಯಲು ಈಚಲುಗರಿಯಿಂದ ಮಾಡಿದ ಸಾಧನ

ಈಚಲಪಟ

ಈಚಲುಮರಗಳು ಹೆಚ್ಚಾಗಿರುವ ಕಾಡಿನ ಪ್ರದೇಶ

ಈಚಲಬರ್ಲು

ಈಚಲುಗರಿಯಿಂದ ಮಾಡಿದ ಪೊರಕೆ (ಮೈಸೂ.ಜಿ) ನೋಡಿ- ಈಚಲ ಕಸಬರ‍್ಗಿ.

ಈಚಲಮರದ ಮಜ್ಜಿಗೆ

ಈಚಲು ಮರದಿಂದ ಇಳಿಸಿದ ರಸ; ಮಜ್ಜಿಗೆಯ ಹಾಗೆ ಬೆಳ್ಳಗೆ ಇರುವ ಹೆಂಡ (ಚಿತ್ರ.ಜಿ).
ಸೇಂದಿ; ನೀರಾ; ಸೆರೆ; ಕಳ್ಳು

ಈಚಲಸಬ್ಬೆ

ಈಚಲಕೋಲು. ನೋಡಿ- ಚಬ್ಬೆ

ಈಚಲಹರ

ಈಚಲು ಪೊದೆಗಳಿಂದ ತುಂಬಿದ ಪ್ರದೇಶ; ಕಾಡಿನ ಒಂದು ಪ್ರದೇಶದ ಹೆಸರು

ಈಚಲುಕಟ್ಟು

ಈಚಲು ಮರದ ಗರಿಗಳನ್ನು ಸವರಿ ಆ ಕಡ್ಡಿಯನ್ನು ಸೀಳಿ ತುದಿಗೆ ಗಂಟು ಹಾಕುವುದು (ಚಿಮ.ಜಿ)

ಈಚಲುಗಿ

ಈಚಲುಮರದ ತುದಿಯ ಒಳಭಾಗದಲ್ಲಿ ಇರುವ ಸುಳಿ ಎಲೆ; ಈಚಲು ದಿಂಡು (ಚಿಮ.ಜಿ.)

ಈಚಲುಗಿಣ್ಣು

ಈಚಲು ಮರ ಕಡಿದಾಗ ಕಾಂಡದ ತುದಿಯಲ್ಲಿರುವ ಎಳೆಯ ಚಿಗುರು ಮತ್ತು ಕಾಂಡ. ಇದು ತಿನ್ನಲು ತುಂಬಾ ರುಚಿ; ಇದನ್ನು ಕೊರೆದು ಹೆಂಡ ಇಳಿಸುವರು (ಶಿವ.ಜಿ)

ಈಚಲುತಟ್ಟಿ

ಈಚಲು ಕಡ್ಡಿಗಳನ್ನು ಹೆಣೆದು ತಯಾರಿಸಿದ ಪುಟ್ಟಿ. ಇವುಗಳನ್ನು ಮರಳು ತುಂಬಲು, ತೆಂಗಿನಕಾಯಿ ಸಾಗಿಸಲು ಬಳಸುತ್ತಾರೆ (ಚಿಮ.ಜಿ)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App