भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈರುಳ್ಳಿಶಿಂಗನಾತ

ಈರುಳ್ಳಿ ಹೂವಿನ ನಾಳದಿಂದ ಮಾಡಿಕೊಂಡ ಪೀಪಿ.
ಈರುಳ್ಳಿ ಶಿಂಗನಾತನ ಬೇಕಾದ್ರೆ ಊದ್ತೀನಿ, ಸಾಕಾದ್ರೆ ಕಡಕೊಂಡು ತಿಂತೀನಿ

ಈರುಳ್ಳಿಶಿಂಗನಾತ

ಮಕ್ಕಳು ಈರುಳ್ಳಿಗೆ ಮೂರು ಕಡ್ಡಿ ಚುಚ್ಚಿ ಆಡುವ ಒಂದು ಆಟ (ಮಂಡ್ಯ.ಜಿ/ಮೈಸೂ.ಜಿ).
ಉಳ್ಳಿಊವ (ಬೆಂಗ್ರಾ.ಜಿ)

ಈರುಳ್ಳಿಹಾವು

ಮೈಮೇಲೆಲ್ಲ ಈರುಳ್ಳಿ ಪದರಗಳಂತೆ ಗಂಟುಗಳಿದ್ದು ಈರುಳ್ಳಿ ಬಣ್ಣದಿಂದ ಕೂಡಿರುವ ಹಾವು (ಕೋಲಾ.ಜಿ)

ಈರುಳ್ಳಿಹುಳು

ನುಣುಪಾದ ಕಂದು ಮಿಶ್ರಿತ ಹಸಿರು ಹುಳುಗಳು

ಈರೆ

ಹೀರೆ. ಒಂದು ಬಗೆಯ ಬಳ್ಳಿ ಮತ್ತು ಅದರ ಕಾಯಿ; ಹೀರೆಕಾಯಿ
ಈರೆ ಹೂವಿನಂಗೆ ತುಪ್ಪ ಕಾಯಿಸಿ ಸೋರೆ ಹೂವಿನಂಗೆ ಅನ್ನ ಮಾಡಿವ್ನಿ (ಚಿತ್ರ ನೋಡಿ)
ಈರುದಕಾಯಿ.

ಈರೆಹಕ್ಕಿ

ಬಾವಲಿ ಜಾತಿಗೆ ಸೇರಿದ ಹಕ್ಕಿ.
ತೋಲೆಹಕ್ಕಿ

ಈರೋಬಿ

ವೀರ ಓಬವ್ವ. ಜನಪದ ಕಥನಗೀತೆಯ ನಾಯಕಿ; ಈಕೆ ಕೆಂಡಕೊಂಡವಾಗಿ ಮಹಾಸತಿಯಾದ ಒಬ್ಬ ಸ್ತ್ರೀ. ಚಿತ್ರದುರ್ಗ ತುಮಕೂರು ಬಳ್ಳಾರಿ ಮೊದಲಾದ ಭಾಗಗಳಲ್ಲಿ ಇಂತಹ ಮಾಸ್ತಿಯರನ್ನು ಕುರಿತ ಕಥನಗೀತೆಗಳು ಪ್ರಸಿದ್ಧ

ಈರೋಳು

ತಾಳೆಮರದ ಎಳೆಯ ಕಾಯಿ (ದಕ.ಜಿ)

ಈರ್‌ಗಂಟಪ್ಪಿ

ಬಿತ್ತನೆ ಉಳುಮೆ ಮತ್ತು ಕಟಾವುಗಳಲ್ಲಿ ಪೂಜೆಗೊಳ್ಳುವ ದೇವತೆ (ಬಳ್ಳಾ.ಜಿ)

ಈರ್ಗಲ್ಲು

ವೀರಗಲ್ಲು

ಈರ್ಗಲ್ಲು

ಪಿತೃಪಕ್ಷದಲ್ಲಿ ಪೂಜೆ ಪಡೆಯುವ ಕಲ್ಲು

ಈರ್ಗಲ್ಲು

ರೈತರು ತಮ್ಮ ಹಿಂದಿನ ಎಲ್ಲ ಕೃಷಿಕರಿಗೂ ಗೌರವ ಸಲ್ಲಿಸುವ ಪ್ರತೀಕವಾಗಿ ಪೂಜಿಸುವ ಕೃಷಿಸಂಬಂಧಿ ದೇವತೆ (ಮಂಡ್ಯ.ಜಿ)

ಈರ್‌ಗಾಲಲ್ಲಿ ಕೂಡಾದು

ಮಂಡಿಯೂರಿ ಕುಳಿತು ಕೊಳ್ಳುವುದು (ಬಿಜಾ.ಜಿ)

ಈರ‍್ಗಾಸೆ

ವೀರಗಾಸೆ (ಚಾಮ.ಜಿ)

ಈರ‍್ಗೂಳಿ

ದೊಡ್ಡ ಮೀನು ಹಿಡಿಯಲು ಬಳಸುವ ಸಾಧನ; ದೊಡ್ಡಗಾತ್ರದ ಕೂಳಿ

ಈರ್‌ಬದ್ರ

ರೈತರು ಪೂಜೆ ಮಾಡುವ ಕೃಷಿಸಂಬಂಧೀ ದೇವತೆ; ಇದೊಂದು ಕಲ್ಲಿನ ವಿಗ್ರಹವಾಗಿದ್ದು ಅದರ ಮೇಲೆ ಬೇಟೆಗಾರನ ಚಿತ್ರವಿರುತ್ತದೆ

ಈರ್‌ಬದ್ರ

ವೀರಭದ್ರ; ದಕ್ಷಯಜ್ಞದಲ್ಲಿ ಗಿರಿಜೆಯು ಯಜ್ಞಕುಂಡ ಪ್ರವೇಶಿಸಿ ದಹಿಸಿಹೋದಾಗ ಶಿವನು ತಾಳಿದ ಅವತಾರ

ಈರ್‌ಮಕ್ಕಳ ಕುಣಿತ

ಒಂದು ಜನಪದ ಕಲೆ

ಈರ‍್ಮಂಡಿ

ನೋಡಿ- ಈರಗಾಲ

ಈರ್ಯಮ್ಮ

ಮಾರಮ್ಮ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App