भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893637Next >

ಆಕರ

ದಾಹ; ಬಾಯಾರಿಕೆ (ಮಲೆ).
ಕಳ್ಳಂಗಡೀಲಿ ಏನಾದ್ರೂ ಕುಡುಕೊಂಡು ಹೋಗಾನೊ, ಬಾಳ ಆಕರ ಆಗ್ತದೆ

ಆಕರಿಕೆಸೊಪ್ಪು

ಹೊಲಗಳಲ್ಲಿ ಬೆಳೆಯುವ ಕಳೆ ಸಸ್ಯ; ಈ ಸೊಪ್ಪಿನ ಪಲ್ಯವನ್ನು ಮಾಡುತ್ತಾರೆ (ಬಳ್ಳಾಜಿ)

ಆಕರ್ಷಣೆಯಾಗು

ದೇವರು ವ್ಯಕ್ತಿಯ ದೇಹದಲ್ಲಿ ಆವಾಹನೆಯಾಗುವುದು; ಪ್ರವೇಶವಾಗು.
ಅವಳ ಮೇಲೆ ಸಿರಿ ದೈವದ ಆಕರ್ಷಣೆಯಾಗುತ್ತದೆ (ದಕ.ಜಿ)

ಆಕಳ ಸುಳಿಗಳು

ಆಕಳಿನ ಮೈಮೇಲಿರುವ ರೋಮ ವಿನ್ಯಾಸ; ಸುಳಿಗಳಲ್ಲಿ ಅನೇಕ ನಮೂನೆಗಳಿವೆ. ಛತ್ರಸುಳಿ, ಮುಕ್ಕಣ್ಣಸುಳಿ, ತಾಯಿ ಸುಳಿ, ಗೂಬೆಸುಳಿ, ದಂಡೆಸುಳಿ, ನೊಗಬಡಕ, ಪಾತಾಳಸುಳಿ, ರಾಜ ಸುಳಿ, ದಾವಣಿಸುಳಿ, ನಗಾರಿಸುಳಿ, ಪರಕಿಸುಳಿ, ಕಾಡುಸುಳಿ, ಗುಂಡಿಗೆಸುಳಿ, ಬೇಡಿಸುಳಿ, ಸಂಕಾಲೆಸುಳಿ ಇತ್ಯಾದಿ. ಪ್ರಾದೇಶಿಕವಾಗಿ ಈ ಹೆಸರುಗಳಲ್ಲಿ ಭಿನ್ನತೆ ಇದೆ

ಆಕಳಂಥವನು

ಬಹಳ ಒಳ್ಳೆಯವನು; ಸರಳ ಸಾಧು ಸ್ವಭಾವದವನು (ಧಾರ.ಜಿ)

ಆಕಳದಾನ

ಗೋದಾನ, ದೋಷ ಅಥವಾ ಸಾವಿನ ಸೂತಕ ಪರಿಹಾರಾರ್ಥವಾಗಿ ಹಾಲು ಕರೆಯುವ ಹಸುವನ್ನು ಕರುವಿನೊಂದಿಗೆ ಬ್ರಾಹ್ಮಣರಿಗೆ ದಾನ ಮಾಡುವ ಸಂಪ್ರದಾಯ

ಆಕಳಪಂಚಮಿ

ಹೋಲದಲ್ಲಿ ಬೆಳೆ ಕುಯ್ಯುವ ಮೊದಲು ಸಲ್ಲಿಸುವ ಪೂಜೆ

ಆಕಳಪಾದ

ಒಂದು ರಂಗೋಲಿ ಚಿತ್ರ; ಎರಡು ಕೈ ಮುಷ್ಟಿಮಾಡಿ ಊರಿ ಇದನ್ನು ಬಿಡಿಸುತ್ತಾರೆ

ಆಕಳಬೀಳು

(ನಾ)
ದನಕರುಗಳು ಮೇಯುವ ಪ್ರದೇಶ; ಗೋಮಾಳ

ಆಕಳಮಕ

ಸಪ್ಪೆಮುಖ

ಆಕಳಮಕ

ಆಕಳದಂಥ ಮುಖ

ಆಕಳಿ

ಬಡಕಲು; ಕನಿಷ್ಠ

ಆಕಳಿಕೆ ಹರಿ

ದೀರ್ಘವಾದ ಆಕಳಿಕೆ ಉಂಟಾಗುವುದು (ಮೈಸೂ.ಜಿ).
ಯಾಕೊ ಬೆಳಗಿಂದ ಬರೀ ಆಕಳಿಕೆ ಹರೀತಾವೆ

ಆಂಕಾರ

ಅಹಂಕಾರ; ದುರಹಂಕಾರ; ಗರ್ವ

ಆಕಾರ

ಹೊಲ ಗದ್ದೆ ತೋಟ ಮುಂತಾದ ಕೃಷಿ ಕ್ಷೇತ್ರದ ವಿಸ್ತಾರ

ಆಕಾರ

ಹೊಲದ ಸಲುವಾಗಿ ಸರಕಾರಕ್ಕೆ ತುಂಬಬೇಕಾದ ಭೂ ಕಂದಾಯ (ಬೀದ.ಜಿ)

ಆಕಾರ

ಸರ್ವೆ ನಂಬರು ಮತ್ತು ಆ ಜಮೀನಿಗೆ ಗೊತ್ತಾದ ಕಂದಾಯವನ್ನು ತಿಳಿಸುವ ದಾಖಲೆ.
ಆಕಾರಬಂದ್

ಆಕಾರಸೂಟಿ ಬಿಡುವುದು

ಬರಗಾಲ ಬಂದಾಗ ಸರಕಾರ ಭೂ ಕಂದಾಯಕ್ಕೆ ವಿನಾಯಿತಿ ಕೊಡುವುದು

ಆಕಾಶ ಬುಟ್ಟಿ

ದೀಪಾವಳಿಯ ಸಂದರ್ಭದಲ್ಲಿ ಬಿದಿರಿನ ಕಡ್ಡಿಗಳಿಂದ ವಿವಿಧ ವಿನ್ಯಾಸ ಮಾಡಿ ಅದರ ಮೇಲೆ ಬಣ್ಣಬಣ್ಣದ ಕಾಗದಗಳನ್ನು ಅಂಟಿಸಿದ ಬುಟ್ಟಿ: ಆ ಬುಟ್ಟಿಯೊಳಗಡೆ ದೀಪ ಇಟ್ಟು ಮನೆಯ ಮುಂದೆ ನೇತುಹಾಕುವ ಸಂಪ್ರದಾಯ

ಆಕಾಶ ಬುಟ್ಟಿ

ದೇವರ ಮೆರವಣಿಗೆ ಮತ್ತು ರಥಗಳ ಅಂಚುಗಳಿಗೆ ಕಟ್ಟುವ ಅಲಂಕಾರದ ಬುಟ್ಟಿ.
ಆಕಾಸ್ಬುಟ್ಟಿ
< previous1234567893637Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App