logo
भारतवाणी
bharatavani  
logo
Knowledge through Indian Languages
Bharatavani

Kannada Nighantu by Kannada Sahitya Parishattu : Vol-3

Please click here to read PDF file Kannada Nighantu by Kannada Sahitya Parishattu : Vol-3

ಗಾಢಿಸು
(ಕ‍್ರಿ).
೧. ಬಿಗಿಯಾಗು; ಬಲವಾಗು:
ಜಾಡಿಸಲು ಜಾಡಿಸಲು ಬಿಗುಹತಿ ಗಾಢಿ [ಪಾಠಾಂ. ಡಿ]ಸಿತು ಕೊಡಹಿದೊಡೆ ಮಿಗೆ ಮೈಗೂಡಿ ಬಿಗಿದುದು
(ಕಾವ್ಯಾಅ. ೧೩-೩೫)

ಗಾಢಿಸು
(ಕ‍್ರಿ).
೨. ಹರಡು; ವ‍್ಯಾಪಿಸು; ಆವರಿಸು:
ಜಯಧ‍್ವನಿ ಗಗನದಲಿ ಗಾಢಿಸಿತು
(ಕುವ‍್ಯಾಅ. ೬-೧೦೦);

ಗಾಢಿಸು
(ಕ‍್ರಿ).
ಪಾಠಕರುಗಳ ರನ‍್ನದ ದಡಿಯ ಕಂಚುಕಿಗಳ ಘಡಾವಣೆ ಗಾಢಿ [ಪಾಠಾಂ. ಘಾಡಿ] ಸಿತು ನಭವ
(ತೊರೆರಾ. ೬-೨೦-೨೦);

ಗಾಢಿಸು
(ಕ‍್ರಿ).
ಗಾಢಿಸಿತು ಗಜಬಜಂ ಕುರುನೃಪತಿಭಟರು ಕೈಮಾಡಿದರು
(ತುರಂಗ. ೭೨-೫).

ಗಾಢಿಸು
(ಕ‍್ರಿ).
೩. ಮೇಲೆಬೀಳು; ಆಕ‍್ರಮಿಸು:
ತುಡುಕುವಂಕುಶದಿಂದ ಮುನ‍್ನಿಳೆಯೊಡೆಯೆ ಗಜ ಗಾಢಿ [ಪಾಠಾಂ. ಡಿ] ಸಿದವರಸರ ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ
(ಕುವ‍್ಯಾಭೀ. ೨-೨).
[ಗಾಢ + - ಇಸು3]

ಗಾಢೋಕ‍್ತಿ
(ನಾ).
ನಿಷ‍್ಠುರುದ ಮಾತು; ಒರಟುನುಡಿ:
ಗಾಢೋಕ‍್ತಿ ಕುಜಾತ ಮಂಗಳ ಪುಳಿಂದರುಮಿಂತು ಕುಜಾಖ್ಯೆ
(ನಾನಾರ. ೨೧);

ಗಾಢೋಕ‍್ತಿ
(ನಾ).
“ಗಾಢೋಕ‍್ತಿ – ನಿಷ‍್ಠುರದ ಮಾತು”
(ನಾನಾರ. ೨೧ ಟೀಕೆ).
[ಗಾಢ + ಉಕ‍್ತಿ]

ಗಾಣ1
ಘಾಣ1
(ನಾ).
ಎಣ‍್ಣೆಯನ‍್ನು ಅಥವಾ ಕಬ‍್ಬಿನ ರಸವನ‍್ನು ತೆಗೆಯುವ ಯಂತ‍್ರ:
ಒಂದು ಗಾಣದುಳ್ ಒನ‍್ದು ಸೊಂಟಿಗೆ ತೇ (ತೈ)ಲ ಮಾಗೆ
(ಇಆ . VIII. ೨೮೫-೪; 706);

ಗಾಣ1
ಘಾಣ1
(ನಾ).
ಗಾಣದೊಳಿಕ‍್ಕಿದ ಕಬ‍್ಬಿನಂತೆ ನರಕದೊಳ್ ದುಃಖಂಬಟ‍್ಟುಂ
(ಧರ್ಮಾಮ‍್ಯ. ೬-೧೭೫);

ಗಾಣ1
ಘಾಣ1
(ನಾ).
ಎಳ‍್ಳಿಲ‍್ಲದ ಗಾಣವನಾಡಿದ ಎತ‍್ತಿನಂತಾಯಿತ‍್ತೆನ‍್ನ ಭಕ‍್ತಿ
(ಬಸವ. ೩೮೩);


logo