logo
भारतवाणी
bharatavani  
logo
Knowledge through Indian Languages
Bharatavani

Kannada Nighantu by Kannada Sahitya Parishattu : Vol-1

Please click here to read PDF file Kannada Nighantu by Kannada Sahitya Parishattu : Vol-1

ಅ1
(ನಾ).
ಕನ‍್ನಡ ವರ್ಣಮಾಲೆಯ ಮೊದಲನೆಯ ವರ್ಣ; ಆಕಾರ.

ಅ2
ಆ4
(ಅ).
ಸಂಸ‍್ಕೃತದ ‘ಕಿಲ’ ಎಂಬುದರ (=ಅಂತೆ, ಅಲ‍್ಲವೆ ಇತ‍್ಯಾದಿ) ಅರ್ಥದಲ‍್ಲಿ ಬರುವ ಭಾವಸೂಚಕ ಅವ‍್ಯಯ (‘ಶಬ‍್ದಾನುಶಾಸನ’ದಲ‍್ಲಿ ಉಕ‍್ತವಾಗಿರುವ ಮೇರೆಗೆ), -ಆ4:
“ಅ, ಆ-ಕಿಲಾರ್ಥೌ”
(ಶಬ‍್ದಾನು, 21 ವ‍್ಯಾಖ‍್ಯಾ)

ಅ3
(ಅ).
ವಿಧಿರೂಪದ ಧಾತುವಿನ ಮೇಲೆ ಅನುನಯ ಸೂಚನೆಗಾಗಿ ಸೇರುವ ಅವ‍್ಯಯ:
ಕೃಪಾ ಕೇಳ
(ಪಂಪಭಾ. 7-15)

ಅ3
(ಅ).
ವಿಧಿರೂಪದ ಧಾತುವಿನ ಮೇಲೆ ಅನುನಯ ಸೂಚನೆಗಾಗಿ ಸೇರುವ ಅವ‍್ಯಯ:
ಎನ‍್ನಭಕ‍್ತರ ಸುಖವದೆನ‍್ನಯ ಸುಖಂ ಕೇಳ
(ನಂಬಿರ, 19-169)

ಅ3
(ಅ).
ವಿಧಿರೂಪದ ಧಾತುವಿನ ಮೇಲೆ ಅನುನಯ ಸೂಚನೆಗಾಗಿ ಸೇರುವ ಅವ‍್ಯಯ:
ಬಾರ ಮರಾಳಿಕಾಗಮನೆ
(ಶಮದ, 125 ಪ‍್ರಯೋ)

ಅ3
(ಅ).
ವಿಧಿರೂಪದ ಧಾತುವಿನ ಮೇಲೆ ಅನುನಯ ಸೂಚನೆಗಾಗಿ ಸೇರುವ ಅವ‍್ಯಯ:
ಏತಕವ‍್ವಾ ನಿನ‍್ನೊಡನೆ ಮುನಿದಿರ್ದಹನು ಹೇಳ
(ಬಸಪು. 47-12)

ಅ4
ಆ7
(ಅ).
ಪ‍್ರಶ‍್ನಾರ್ಥದಲ‍್ಲಿ ಕ‍್ರಿಯಾರೂಪದ ಕೊನೆಗೆ ಹತ‍್ತುವ ಅವ‍್ಯಯ:
ನೋಡುವುದೞೊಳೇನೞ್ತಯೊಳಾಡುತ‍್ತಿರಲಾಗ ತಮ‍್ಮುತಿರ್ವರುಂ [ಆಗ = ಆಗದೇ?]
(ಪಂಪಭಾ. 6-70)

ಅ4
ಆ7
(ಅ).
ಪ‍್ರಶ‍್ನಾರ್ಥದಲ‍್ಲಿ ಕ‍್ರಿಯಾರೂಪದ ಕೊನೆಗೆ ಹತ‍್ತುವ ಅವ‍್ಯಯ:
ಇಂದುನೃಸಿಂಹ ಕ‍್ಷಿತಿಪಾಲನಲ‍್ಲಿ ಕಟಕೋಪಾಧ‍್ಯಾಯನಾರೆಂಬ ಸೂಕ‍್ತಿನವೀನೋಜ‍್ವಲ ಬಾಣನಪ‍್ಪ ಸುಮನೋಬಾಣಂ [ಎಂಬ = ಎಂಬೆಯಾ?]
(ಆನಂಪು.1-34)

ಅ4
ಆ7
(ಅ).
ಪ‍್ರಶ‍್ನಾರ್ಥದಲ‍್ಲಿ ಕ‍್ರಿಯಾರೂಪದ ಕೊನೆಗೆ ಹತ‍್ತುವ ಅವ‍್ಯಯ:
ಪುರಂದರವಿಟ‍್ಠಲನ ಚರಣವಂ ಭಜಿಸು ಕಂಡ‍್ಯಮನವೆ [ಕಂಡ್ಯ = ಕಂಡೆಯ?]
(ಪುರಂದ. 5-107-3)

ಅ4
ಆ7
(ಅ).
ಪ‍್ರಶ‍್ನಾರ್ಥದಲ‍್ಲಿ ಕ‍್ರಿಯಾರೂಪದ ಕೊನೆಗೆ ಹತ‍್ತುವ ಅವ‍್ಯಯ:
-ಆ7: ಕೂಸನೋದಿಸಿದಾ ಎಂದೊಡೆ [ಓದಿಸಿದಾ = ಓದಿಸಿದೆಯಾ?]
(ವಡ‍್ಡಾರಾ, 23-18)

logo