भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893233Next >

Abnormal Profile

ಅಸಾಮಾನ್ಯ ಪ್ರೊಫೈಲ್.
ಮಣ್ಣಿನ ಮಾದರಿ ಪ್ರೊಫೈಲ್ ನಿಂದ ಕೆಲವು ವಿಷಯಗಳಲ್ಲಿ ಭಿನ್ನವಾಗಿರುವ ಪ್ರೊಫೈಲ್. ಅಸಾಧಾರಣ ಶಿಥಿಲಕ್ರಿಯಾ ಪರಿಸ್ಥಿತಿಗಳಿಂದ ಈ ರೀತಿಯ ಮಣ್ಣಿನ ಪ್ರೊಫೈಲ್ ಉಂಟಾಗುತ್ತದೆ.

Absolute Humidity

ನಿರಪೇಕ್ಷ ಆರ್ದ್ರತೆ; ಕೇವಲ ಆರ್ದ್ರತೆ.
ಎಕಮಾನ ಗಾತ್ರದ ವಾಯುವಿನಲ್ಲಿರುವ ನೀರಿನ ಆವಿಯ ದ್ರವ್ಯ ಪರಿಮಾಣ.

Absorption

ಹೀರುವಿಕೆ.
ಮಣ್ಣಿನಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ನೀರು ಹೀರಲ್ಪಟ್ಟು ಕ್ರಮೇಣ ಸಸ್ಯಗಳಿಗೆ ಸಿಗುತ್ತದೆ.

A Value

‘A’ ಮೌಲ್ಯ.
ಇದು ಒಂದು ಮಣ್ಣಿನಲ್ಲಿರುವ, ದೊರೆಯುವ ರಂಜಕದ ಪರಿಮಾಣವನ್ನು ಸೂಚಿಸುತ್ತದೆ. ದೊರೆಯುವ ರಂಜಕದ ‘A’ ಮೌಲ್ಯವನ್ನು ಕೆಳಗಿನ ಸಮೀಕರಣದಿಂದ ಕಂಡುಹಿಡಿಯಬಹುದು.
A = B (T-Y)/y
A=ದೊರೆಯುವ ರಂಜಕದ ಪರಿಮಾಣ.
B=ರಾಸಾಯನಿಕ ಗೊಬ್ಬರದ ಮೂಲಕ ಮಣ್ಣಿಗೆ ಹಾಕಲ್ಪಟ್ಟ ರಂಜಕದ ಪರಿಮಾಣ.
Y= ರಾಸಾಯನಿಕ ಗೊಬ್ಬರದಿಂದ ಸಸ್ಯಗಳು ಹೀರಿಕೊಂಡ ಪರಿಮಾಣ.

‘ABC’ Soil – ‘ABC’

ಮಣ್ಣು.
‘A’, ‘B’ ಮತ್ತು ‘C’ ವಲಯಗಳನ್ನುಳ್ಳ ಮಣ್ಣಿನ ಪೂರ್ಣ ಪ್ರೊಫೈಲ್.

Acceleration

ವೇಗೋತ್ಕರ್ಷ.
ವೇಗ ಬದಲಾಗುವ ಪ್ರಮಾಣ ಮತ್ತು ದಿಕ್ಕನ್ನು ಸೂಚಿಸುವ ಭೌತ ಪರಿಮಾಣ.

Acceleration Erosion

ವ್ರದ್ಧಿ ಹೊಂದಿದ ಕೊಚ್ಚಣೆ.
ಸ್ವಾಭಾವಿಕವಾಗಿ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳನ್ನು ನಾಶಮಾಡಿ, ಉತ್ತು, ಬಿತ್ತಿ, ಭೂಮಿಯನ್ನು ಬೇಸಾಯಕ್ಕೆ ಉಪಯೋಗಿಸಿಕೊಳ್ಳುವುದರಿಂದ ಆ ಭೂಮಿಯಲ್ಲಿ ಮಣ್ಣಿನ ಕೊಚ್ಚಣೆಯ ಗತಿ ವೃದ್ಧಿಯಾಗುತ್ತಾ ಹೋಗುತ್ತದೆ.

Acetylation

ಅಸಿಟಿಲೇಷನ್.
ಸಾವಯವ ವಸ್ತುವಿಗೆ ಒಂದು ಅಸಿಟೈಲ್ ಮೂಲಘಟಕ ಸೇರುವ ಪ್ರತಿ ಕ್ರಿಯೆಗೆ ಅಸಿಟಿಲೇಷನ್ ಎಂದು ಹೆಸರು.

Acid

ಆಮ್ಲ.
ನೀಲಿ ಬಣ್ಣದ ಲಿಟ್ ಮಸ್ ಕಾಗದವನ್ನು ಕೆಂಪಾಗಿ ಪರಿವರ್ತಿಸಲು ಸಾಕಷ್ಟು ಜಲಜನಕ ಅಯಾನ್ ಗಳನ್ನು ಬಿಟ್ಟುಕೊಡುವ ದ್ರಾವಣದಲ್ಲಿರುವ ವಸ್ತು.

Acidity

ಆಮ್ಲೀಯತೆ; ಆಮ್ಲತೆ.
ಪ್ರತ್ಯಾಮ್ಲ ಹಾಗೂ ಆಮ್ಲಗಳ ನಡುವೆ ಕ್ರಿಯೆ ನಡೆದಾಗ ಪ್ರತ್ಯಾಮ್ಲದ ಆಮ್ಲವು ಪಲ್ಲಟಿಸತಕ್ಕ ಜಲಜನಕದ ಪರಮಾಣುಗಳ ಸಂಖ್ಯೆಗೆ ಆಮ್ಲೀಯತೆ ಎಂದು ಹೆಸರು.

Acidic Oxides.

ಆಮ್ಲೀಯ ಆಕ್ಸೈಡ್ ಗಳು.
ನೀರಿನಲ್ಲಿ ಬೆರೆತು ಆಮ್ಲವನ್ನುಂಟುಮಾಡುವ ಆಕ್ಸೈಡ್ ಗಳಿಗೆ ಆಮ್ಲೀಯ ಆಕ್ಸೈಡ್ ಗಳು ಎನ್ನುವರು.

Acid Salt

ಆಮ್ಲ ಲವಣ.
ಇದರಲ್ಲಿ ಆಮ್ಲದ ಅಪೂರ್ಣ ತಟಸ್ಥೀಕರಣದಿಂದ ಜಲಜನಕದ ಶೇಷವಿರುತ್ತದೆ.
ಉದಾಹರಣೆ : NA₂HPO₄.

Acid Soil

ಆಮ್ಲ ಮಣ್ಣು.
ಮಣ್ಣಿನಲ್ಲಿ, ‘OH’ ಅಯಾನ್ ಗಳಿಗಿಂತ ‘H’ ಅಯಾನ್ ಗಳು ಹೆಚ್ಚಾಗಿದ್ದು, ದೊರಕುವ ಪ್ರತ್ಯಾಮ್ಲ ಕಡಿಮೆ ಇರುವ ಸ್ಥಿತಿ.

Acid Rock

ಆಮ್ಲ ಶಿಲೆ.
ಇದರಲ್ಲಿ ಶೇಕಡ 67 ರಿಂದ 75 ರಷ್ಟು ಸಿಲಿಕಾಂಶವಿರುತ್ತದೆ.
ಉದಾಹರಣೆ : ಗ್ರ್ಯಾನೈಟ್.

Acid Forming Fertilizer .

ಆಮ್ಲಕಾರಕ ರಸಾಯನ ಗೊಬ್ಬರ.
ಮಣ್ಣಿನಲ್ಲಿ ಹುಳಿ ಪ್ರವೃತ್ತಿಯನ್ನುಂಟುಮಾಡುವ ರಸಾಯನ ಗೊಬ್ಬರ. ಅಮೋನಿಯಮ್ ಸಲ್ಫೇಟ್, ಮಾನೋ ಅಮೋನಿಯ, ಯೂರಿಯಾ, ಇತ್ಯಾದಿ.

Acidification

ಆಮ್ಲೀಕರಣ.
ಆಮ್ಲತೆಯನ್ನುಂಟುಮಾಡುವ ಗೊಬ್ಬರಗಳನ್ನು ಕೊಟ್ಟಾಗ ಮಣ್ಣು ಆಮ್ಲಗತಿಗೆ ಸಾಗುತ್ತದೆ.

Active Immunity

ಸ್ವಶಕ್ತಿ ರಕ್ಷಣೆ.
ತನ್ನ ಸ್ವಶಕ್ತಿಯಿಂದಲೇ ಒಂದು ಜೀವಿಯು ರೋಗಕಾರಕ ಜೀವಿಗಳಿಂದ ರಕ್ಷಣೆ ಪಡೆಯುವುದು.

Activity Index

ಚಟುವಟಿಕೆ ಸೂಚಿ.
ಯೂರಿಯಾ ಫಾರ್ಮಾಲ್ಡಿಹೈಡ್ ಸಂಯುಕ್ತವಸ್ತುವಿನ ಚಟುವಟಿಕೆ ಸೂಚಿಯನ್ನು ಈ ಕೆಳಗಿನ ಸಮೀಕರಣದಿಂದ ವ್ಯಕ್ತಪಡಿಸಬಹುದು.
ಚಟುವಟಿಕೆ ಸೂಚಿ = {[(% GWIN)-(%HWIN)] ➗ (% GWIN)} x 100
% GWIN = ತಣ್ಣೀರಿನಲ್ಲಿ ಕರಗದ ಸಾರಜನಕದ ಶೇಕಡ.
% HWIN = ಬಿಸಿ ನೀರಿನಲ್ಲಿ ಕರಗದ ಸಾರಜನಕದ ಶೇಕಡ.

Actomag

ಆಕ್ಟೋಮಾಗ್.
ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಮೆಗ್ನೀಸಿಯಂ ಆಕ್ಸೈಡ್ ಗಳನ್ನೊಳಗೊಂಡ ರಾಸಾಯನಿಕ ವಸ್ತುವಿನ ಮಾರಾಟದ ಹೆಸರು. ಈ ವಸ್ತು, ಶೇಕಡ 67 ರಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್, 27 ರಷ್ಟು ಮೆಗ್ನೀಸಿಯಂ ಆಕ್ಸೈಡ್ ಮತ್ತು 2 ರಷ್ಟು ಕ್ಯಾಲ್ಸಿಯಂ ಆಕ್ಸೈಡ್ ಗಳನ್ನು ಹೊಂದಿರುತ್ತದೆ.

Activated Sludge

ಜಾಗೃತ ರೊಜ್ಜು.
ಚರಂಡಿ ರೊಜ್ಜಿನಲ್ಲಿ ಚದುರಿದ ವಾಯುವಿನ ಪ್ರವಾಹವನ್ನು ಸಾಕಷ್ಟು ಕಾಲ ಪ್ರವಹಿಸಿದಾಗ, ಅದರಲ್ಲಿನ ಸಾವಯವ ವಸ್ತು ತುಂತುಗಟ್ಟುತ್ತದೆ. ವಾಯು ಪ್ರವಾಹ ನಿಂತಾಗ, ಅದು ತಳದಲ್ಲಿ ಕಂದುಬಣ್ಣದ ಗಷ್ಟಾಗಿ ನಿಲ್ಲುತ್ತದೆ; ಮೇಲಿನ ನೀರು ತಿಳಿಯಾಗುತ್ತದೆ. ಈ ನೀರನ್ನು ತೆಗೆದು ಹೊಸ ರೊಜ್ಜನ್ನು ಬಿಟ್ಟು ಹೆಚ್ಚು ಹೆಚ್ಚು ಗಷ್ಟವನ್ನು ಕೂಡಿಸಬಹುದು. ಇಂತಹ ಗಷ್ಟಿಗೆ ಜಾಗೃತ ರೊಜ್ಜು ಎಂದು ಕರೆಯುತ್ತಾರೆ.
< previous1234567893233Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App