ಮುಚ್ಚಳ, ಮಡಕೆಗಳ ಬಾಯಿಗೆ ಅನುಕೂಲವಾಗುವಂತೆ ಚಿಕ್ಕ, ದೊಡ್ಡ ಮುಚ್ಚಳ ತಯಾರಿಸುವರು.
ಬೈಹುಲ್ಲು
(ನಾ)
ಆವಿಗೆಯಲ್ಲಿಟ್ಟು ಮಡಕೆಗಳನ್ನು ಸುಡುವಾಗ ಒಂದಕ್ಕೊಂದು ತಾಗಿ ಒಡೆದು ಹೋಗದಿರಲು ಎಡೆಗಳಿಗೆ ಬೈಹಲ್ಲು ಜೋಡಿಸುವರು.
ರೊಟ್ಟಿದ ಓಡು
(ನಾ)
ರೊಟ್ಟಿಹಂಚು, ಗ್ರಾಮಗಳಲ್ಲಿ ರೊಟ್ಟಿ ಮಾಡಲು ಬಳಸುವರು.
ಸೇಡಿಮಣ್ಣು
(ನಾ)
ಒಂದು ತರದ ಬಿಳಿಮಣ್ಣು ಮರಳಿಗೆ ಬದಲಾಗಿ ಸೇಡಿ ಮಣ್ಣನ್ನು ಮಡಕೆ ಮಾಡುವ ಮಣ್ಣಿಗೆ ಬೆರೆಸುವ ರೂಢಿ ಇದೆ. ಮಳಲಿ, ಸುರತ್ಕಲ್ ಬಾಳ, ತೋಕೂರು, ಕುಳಾಯಿ ಮುಂತಾದ ಕಡೆ ಗದ್ದೆ ಹೊಳೆಬದಿಯಲ್ಲಿ ಸಿಗುವ ಬಿಳಿ ಮಣ್ಣನ್ನು ಬಳಸುವರು.
ಹೊಯ್ಗೆ
(ನಾ)
ಮರಳು, ಕನ್ನಡದಲ್ಲು ಹೊಯ್ಗೆ ಎನ್ನುವ ಶಬ್ದ ಬಳಕೆಯಲ್ಲಿದೆ, ಮಡಕೆ ಬಿರುಕು ಬಿಡದಿರಲು ಮಣ್ಣಿಗೆ ಹಾಕಿ ಕಲಸುವರು.