logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Qualitative Analysis
ಗುಣವಿಶ್ಲೇಷಣೆ. ಒಂದು ವಸ್ತುವನ್ನು ರಾಸಾಯನಿಕ ಕ್ರಿಯೆಗಳಿಂದ ವಿಶ್ಲೇಷಿಸಿ, ಅದರಲ್ಲಿ ಯಾವ ಯಾವ ಆಮ್ಲ, ಪ್ರತ್ಯಾಮ್ಲಗುಣ ಗುಂಪುಗಳಿವೆ ಎಂಬುದನ್ನು ಕಂಡುಹಿಡಿಯುವ ಕ್ರಮ.

Quantitative Analysis
ಪರಿಮಾಣ ವಿಶ್ಲೇಷಣೆ. ನಿಖರವಾದ ರಾಸಾಯನಿಕ ಪ್ರಯೋಗಗಳಿಂದ ಒಂದು ವಸ್ತುವನ್ನು ವಿಶ್ಲೇಷಿಸಿ ಅದರಲ್ಲಿರುವ ವಿವಿಧ ವಸ್ತುಗಳ ಪ್ರಮಾಣವನ್ನು ಕಂಡುಹಿಡಿಯುವ ಕ್ರಮ.

Quartz
ಬೆಣಚುಕಲ್ಲು. ಇದು ರಾಸಾಯನಿಕವಾಗಿ ಸಿಲಿಕಾನ್ ಡೈಆಕ್ಸೈಡ್. ಮರಳಿನ ಬಹುಭಾಗ ಬೆಣಚುಕಲ್ಲಿನ ಹರಳುಗಳನ್ನೊಳಗೊಂಡಿದೆ.

Quick Lime
ಸುಟ್ಟ ಸುಣ್ಣ. ಸುಣ್ಣ ಕಲ್ಲನ್ನು ಸುಟ್ಟಾಗ, ಅದರಲ್ಲಿ ಕ್ಯಾಲ್ಸಿಯಂನೊಡನೆ ಸಂಯೋಗವಾಗಿದ್ದ ಇಂಗಾಲಾಮ್ಲ ಕಳೆದುಹೋಗಿ ಉಳಿಯುವ ಕ್ಯಾಲ್ಸಿಯಂ ಆಕ್ಸೈಡ್. ಇದು ನೀರಿನೊಡನೆ ಬೆರೆತಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಪ್ರತ್ಯಾಮ್ಲ ಉಂಟಾಗುತ್ತದೆ. ಇದಕ್ಕೆ ಕ್ಷಾರೀಯ ಗುಣಗಳಿವೆ.


logo