Krishi Rasayana Shastra Shabdartha Nirupanavali (English-Kannada)
ಗಟ್ಟಿ ಪದರ; ಮಣ್ಣಿನ ಗಟ್ಟಿಸ್ತರ.
ಗಟ್ಟಿ ಅಥವಾ ಜಿಗಟು ಮಣ್ಣಿನ ಪದರ. ಈ ಮಣ್ಣು ಮರಳು, ಜೇಡಿ ಕಬ್ಬಿಣದ ಆಕ್ಸೈಡ್, ಸಿಲಿಕಾ ಅಥವಾ ಕ್ಯಾಲ್ಸಿಯಂ ಕಾರ್ಬೊನೇಟ್ ಗಳಿಂದ ಕೂಡಿರುತ್ತದೆ.
ಅರೆಬಾಗ್ ಮಣ್ಣುಗಳು
ಇಂಟ್ರಾಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಮೇಲ್ಭಾಗದಲ್ಲಿ ಎಲೆಕಸ ಅಥವಾ ದರಗಿನಿಂದ ಕೂಡಿರುತ್ತದೆ.
ದಹನಶಾಖ; ದಹನೋಷ್ಣ.
ಒಂದು ಗ್ರಾಂ ಅಣುಮೊತ್ತದ ಮೂಲ ವಸ್ತು ಇಲ್ಲವೆ ಸಂಯುಕ್ತ ವಸ್ತುವು ಸಂಪೂರ್ಣವಾಗಿ ದಹಿಸಿದಾಗ ಉತ್ಪತ್ತಿಯಾಗುವ, ಉಷ್ಣತೆಯ ಮೊತ್ತ.
ಪ್ರತಿಕ್ರಿಯಾ ಶಾಖ; ಪ್ರತಿ ಕ್ರಿಯೋಷ್ಣ.
ಒಂದು ರಾಸಾಯನಿಕ ಕ್ರಿಯೆಯು ಒಂದು ಗ್ರಾಂ ಅಣು ಮೊತ್ತದ ವರ್ತಿಸುವ ವಸ್ತುಗಳಲ್ಲಿ ಉತ್ಪತ್ತಿಯಾಗುವ ಉಷ್ಣತೆ.
ದ್ರಾವಣಶಾಖ; ದ್ರಾವಣೋಷ್ಣ.
ಒಂದು ಗ್ರಾಂ ಅಣುವಿಲೀನಕ ವಸ್ತು ಸಾಕಷ್ಟು ಪ್ರಮಾಣದ ದ್ರಾವಕದಲ್ಲಿ ವಿಲೀನವಾದಾಗ, ಆ ವಸ್ತುವಿನಿಂದ ಉತ್ಪತ್ತಿಯಾಗುವ ಅಥವಾ ಹೀರಲ್ಪಡುವ ಉಷ್ಣತೆಯ ಮೊತ್ತ.
ಹೆನ್ರಿಯ ನಿಯಮ.
ಉಷ್ಣತೆ ಸ್ಥಿರವಿದ್ದಾಗ ಕ್ಲುಪ್ತ ಗಾತ್ರದ ದ್ರವದಲ್ಲಿ ಕರಗುವ ಅನಿಲದ ತೂಕವು ಆ ಅನಿಲದ ಒತ್ತಡಕ್ಕೆ ಸಮನಾಗಿರುತ್ತದೆ.
ಪರಪೋಷಕೀಯ ಜೀವಿಗಳು.
ಸಾವಯವ ವಸ್ತುವನ್ನು ಆಹಾರವಾಗಿ ಬಳಸಿ ಜೀವಿಸುವ ಜೀವಿಗಳು.
ಸಸ್ಯನಾಶಕಗಳು
ಬೇಡವಾದ ಸಸ್ಯಗಳನ್ನು ನಾಶಮಾಡಲು ಬಳಸುವ ರಾಸಾಯನಿಕ ವಸ್ತುಗಳು.
ಸಮಾನ ಸ್ಥಾನ ಶ್ರೇಣಿ.
ಒಂದು ಸೂತ್ರಕ್ಕೆ ಹೊಂದಿಕೊಂಡಿರುವ ಒಂದೇ ವಿಧವಾದ ಇಂಗಾಲ ವಸ್ತುಗಳ ಶ್ರೇಣಿ.
ಹುಕ್ ನ ನಿಯಮ.
ಸ್ಥಿರಸ್ಥಾಪಕತ್ವದ ಮಿತಿಯಲ್ಲಿ ಒಂದು ವಸ್ತುವಿನ ಒತ್ತಡ, ಅದರ ಎಳೆತಕ್ಕೆ ಅನು ಲೋಮವಾಗಿರುತ್ತದೆ.