logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Abnormal Profile
ಅಸಾಮಾನ್ಯ ಪ್ರೊಫೈಲ್. ಮಣ್ಣಿನ ಮಾದರಿ ಪ್ರೊಫೈಲ್ ನಿಂದ ಕೆಲವು ವಿಷಯಗಳಲ್ಲಿ ಭಿನ್ನವಾಗಿರುವ ಪ್ರೊಫೈಲ್. ಅಸಾಧಾರಣ ಶಿಥಿಲಕ್ರಿಯಾ ಪರಿಸ್ಥಿತಿಗಳಿಂದ ಈ ರೀತಿಯ ಮಣ್ಣಿನ ಪ್ರೊಫೈಲ್ ಉಂಟಾಗುತ್ತದೆ.

Absolute Humidity
ನಿರಪೇಕ್ಷ ಆರ್ದ್ರತೆ; ಕೇವಲ ಆರ್ದ್ರತೆ. ಎಕಮಾನ ಗಾತ್ರದ ವಾಯುವಿನಲ್ಲಿರುವ ನೀರಿನ ಆವಿಯ ದ್ರವ್ಯ ಪರಿಮಾಣ.

Absorption
ಹೀರುವಿಕೆ. ಮಣ್ಣಿನಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ನೀರು ಹೀರಲ್ಪಟ್ಟು ಕ್ರಮೇಣ ಸಸ್ಯಗಳಿಗೆ ಸಿಗುತ್ತದೆ.

A Value
‘A’ ಮೌಲ್ಯ. ಇದು ಒಂದು ಮಣ್ಣಿನಲ್ಲಿರುವ, ದೊರೆಯುವ ರಂಜಕದ ಪರಿಮಾಣವನ್ನು ಸೂಚಿಸುತ್ತದೆ. ದೊರೆಯುವ ರಂಜಕದ ‘A’ ಮೌಲ್ಯವನ್ನು ಕೆಳಗಿನ ಸಮೀಕರಣದಿಂದ ಕಂಡುಹಿಡಿಯಬಹುದು. A = B (T-Y)/y A=ದೊರೆಯುವ ರಂಜಕದ ಪರಿಮಾಣ. B=ರಾಸಾಯನಿಕ ಗೊಬ್ಬರದ ಮೂಲಕ ಮಣ್ಣಿಗೆ ಹಾಕಲ್ಪಟ್ಟ ರಂಜಕದ ಪರಿಮಾಣ. Y= ರಾಸಾಯನಿಕ ಗೊಬ್ಬರದಿಂದ ಸಸ್ಯಗಳು ಹೀರಿಕೊಂಡ ಪರಿಮಾಣ.

‘ABC’ Soil - ‘ABC’
ಮಣ್ಣು. ‘A’, ‘B’ ಮತ್ತು ‘C’ ವಲಯಗಳನ್ನುಳ್ಳ ಮಣ್ಣಿನ ಪೂರ್ಣ ಪ್ರೊಫೈಲ್.

Acceleration
ವೇಗೋತ್ಕರ್ಷ. ವೇಗ ಬದಲಾಗುವ ಪ್ರಮಾಣ ಮತ್ತು ದಿಕ್ಕನ್ನು ಸೂಚಿಸುವ ಭೌತ ಪರಿಮಾಣ.

Acceleration Erosion
ವ್ರದ್ಧಿ ಹೊಂದಿದ ಕೊಚ್ಚಣೆ. ಸ್ವಾಭಾವಿಕವಾಗಿ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳನ್ನು ನಾಶಮಾಡಿ, ಉತ್ತು, ಬಿತ್ತಿ, ಭೂಮಿಯನ್ನು ಬೇಸಾಯಕ್ಕೆ ಉಪಯೋಗಿಸಿಕೊಳ್ಳುವುದರಿಂದ ಆ ಭೂಮಿಯಲ್ಲಿ ಮಣ್ಣಿನ ಕೊಚ್ಚಣೆಯ ಗತಿ ವೃದ್ಧಿಯಾಗುತ್ತಾ ಹೋಗುತ್ತದೆ.

Acetylation
ಅಸಿಟಿಲೇಷನ್. ಸಾವಯವ ವಸ್ತುವಿಗೆ ಒಂದು ಅಸಿಟೈಲ್ ಮೂಲಘಟಕ ಸೇರುವ ಪ್ರತಿ ಕ್ರಿಯೆಗೆ ಅಸಿಟಿಲೇಷನ್ ಎಂದು ಹೆಸರು.

Acid
ಆಮ್ಲ. ನೀಲಿ ಬಣ್ಣದ ಲಿಟ್ ಮಸ್ ಕಾಗದವನ್ನು ಕೆಂಪಾಗಿ ಪರಿವರ್ತಿಸಲು ಸಾಕಷ್ಟು ಜಲಜನಕ ಅಯಾನ್ ಗಳನ್ನು ಬಿಟ್ಟುಕೊಡುವ ದ್ರಾವಣದಲ್ಲಿರುವ ವಸ್ತು.

Acidity
ಆಮ್ಲೀಯತೆ; ಆಮ್ಲತೆ. ಪ್ರತ್ಯಾಮ್ಲ ಹಾಗೂ ಆಮ್ಲಗಳ ನಡುವೆ ಕ್ರಿಯೆ ನಡೆದಾಗ ಪ್ರತ್ಯಾಮ್ಲದ ಆಮ್ಲವು ಪಲ್ಲಟಿಸತಕ್ಕ ಜಲಜನಕದ ಪರಮಾಣುಗಳ ಸಂಖ್ಯೆಗೆ ಆಮ್ಲೀಯತೆ ಎಂದು ಹೆಸರು.


logo