logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಂಗಣವಲಯ
ಅಂಗಳದ ಸುತ್ತು, ಆವರಣ

ಅಂಗಣವಾವಿ
ಅಂಗಣದಲ್ಲಿನ ಬಾವಿ

ಅಂಗಣವೆಟ್ಟು
ಅಂಗಳದಲ್ಲಿನ ಆಟದ ಬೆಟ್ಟ

ಅಂಗದ
ಭುಜಕೀರ್ತಿ; ತೋಳುಬಳೆ

ಅಂಗಪತಿ
ಅಂಗರಾಜ್ಯದ ಒಡೆಯ, ಕರ್ಣ

ಅಂಗಯಷ್ಟಿ
ಯಷ್ಟಿ(ಹಾರ)ಯಂತೆ ತೆಳ್ಳಗಿರುವ ದೇಹ

ಅಂಗಯ್ಸು
ಘೋಷಿಸು; ಒಪ್ಪುವಂತೆ ಮಾಡು

ಅಂಗರ
ಕೆಂಡ

ಅಂಗರಕ್ಕೆ
(ಅಂಗರಕ್ಷಾ) ಮೈಗಾವಲ ಭಟ; ಮೈಯ ರಕ್ಷಣೆಯ ವಸ್ತು; ಕವಚ

ಅಂಗರವೋಳಿಗೆ
(ಅಂಗಾರಸ್ಫೋಟಿಕೆ) ಕೆಂಡದ ಮೇಲೆ ಸುಟ್ಟ ರೊಟ್ಟಿ


logo