logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-6

Please click here to read PDF file Kannada Nighantu by Kannada Sahitya Parishattu : Vol-6

ಪಾಉಗ್ಗಮಣ
(ನಾ).
[ಜೈನ] ಉಪವಾಸದಿಂದ ಮರಣ ಹೊಂದುವಿಕೆ; ಪ್ರಾಯೋಪಗಮನ:
ಬಲದೇವಾಚಾರ್ಯ್ಯರ ಪಾಉಗ್ಗಮಣ
(ಎಕ. II, ೮೨; ಸು. 750).
[<ಸಂ. ಪ್ರಾಯೋಪಗಮನ]

ಪಾಂಕ್ತ
(ಗು).
೧. ಕ್ರಮಬದ್ಧವಾದ; ಸಮಗ್ರವಾದ.

ಪಾಂಕ್ತ
(ನಾ).
೨. ಕ್ರಮಬದ್ಧವಾದುದು; ಸಮಗ್ರವಾದುದು:
ಹೊಸಮಾರ್ಗದ ಗ್ರಂಥಗರ್ತನು… ಜನಾಂಗಗಳ ಚರಿತ್ರೆಗಳನ್ನೂ ಮನುಷ್ಯಜಾತಿಯ ಪಾಂಕ್ತವಾದ ಅಭ್ಯುದಯವನ್ನೂ ವಿವರಿಸುವನು
(ಕಸಿಸಾ. ೪೯);

ಪಾಂಕ್ತ
(ನಾ).
ಎಲ್ಲಾನೂ ಪಾಂಕ್ತ ಆಗಿ ಆಗಬೇಕು. ಚಾಚೂ ಏನೂ ತಪ್ಪೂ ಹಾಂಗಿಲ್ಲಾ
(ದೀಪನಿ. ೨೮);

ಪಾಂಕ್ತ
(ನಾ).
ಇಂಥ ಪೂರ್ವಸಂಬಂಧಕಲ್ಪನೆಯಿಂದ ಕವಿಯ ಬಹುಶ್ರುತತ್ವ ಪಾಂಕ್ತವಾಗಿ ಪ್ರಕಾಶವಾಗುತ್ತದೆ
(ನಂಜುಂಡ. ೧೭೦).
[ಸಂ.]

ಪಾಂಕ್ತೇಯ
(ಗು).
೧. (ಭೋಜನಕ್ಕೆ) ಜೊತೆಗೆ ಕುಳಿತುಕೊಳ್ಳಲು ಯೋಗ್ಯವಾದ.

ಪಾಂಕ್ತೇಯ
(ನಾ).
೨. ಜೊತೆಯಲ್ಲಿರಲು ಯೋಗ್ಯವಾದುದು; ಸಹವಾಸಯೋಗ್ಯವಾದುದು:
ಛಂದಸ್ಸೇ ಸಾಧುಕಾವ್ಯಭಾಷೆಯ ಏಕಮಾತ್ರ ಪಾಂಕ್ತೇಯವೆಂದು ಗಣ್ಯವಾಗಿತ್ತು
(ನಿಬಂಧ. II, ೩೧೯).
[ಸಂ.]

ಪಾಂಗ
(ನಾ).
`ಪಂಗ1' ನೋ.

ಪಾಂಗತ
ಪಾಂಗಿತ
(ನಾ).
ಕ್ರಮಬದ್ಧವಾದುದು:
ತೊಟ್ಟಿಲಲ್ಲಿರುವುದು; ಅಂಬೆಗಾಲಿಕ್ಕುವುದು… ಎಲ್ಲಾ ಅಟ್ಟದ ಮೆಟ್ಟಲಿನಂತೆ ಪಾಂಗತವಾಗಿದೆ
(ನಾಡಿಗೇ. ೧೬೯).

ಪಾಂಗತ
ಪಾಂಗಿತ:
(ನಾ).
ಆಯುವು ತೀರಿಯಿಲ್ಲವತರಿಸಿದಿರಿ ಪಾಂಗಿತ ದೊಳಲನಿಪ ಪಾಂಡುರಾಜನಿಗೆ
(ಜಿನಭಾ. ೮೩-೨೫).
[<ಸಂ. ಪಾಂಕ್ತ. / ಮರಾ. ಪಂಗತ್]


logo