logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರ. 2. ವಿಷ್ಣು.

ಅಂಕ
1. ಕೊಕ್ಕೆ. 2. ಅಂಕುಶ. 3. ಕೊಂಕು. 4. ಅಂಕವಣ. 5. ತೊಡೆ. 6. ಗುರುತು. 7. ಹೆಸರು. 8. ಬಿರುದು. 9. ಯುದ್ಧ. 10. ಸ್ಪರ್ಧೆ ಕಾಳಗ ಹೋರಾಟ ಇತ್ಯಾದಿಗಳು ನಡೆಯುವ ಸ್ಥಳ. 11. ಜಟ್ಟಿ. 12. ನಾಟಕದಲ್ಲಿ ಒಂದು ವಿಭಾಗ. 13. ಕುಂದು. 14. ಅಂಕೆ. 15. ಪ್ರಸಿದ್ಧಿ. 16. ಪರೀಕ್ಷೆಯಲಿ

ಅಂಕಗಣಿತ
ಸಂಖ್ಯೆಗಳ ಮೂಲಕ ಮಾಡುವ ಗಣಿತ.

ಅಂಕಣ
1. ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ. 2. ಸ್ಥಳ. 3. ಸೆಳೆಖಾನೆ. 4. ಪತ್ರಿಕೆಯಲ್ಲಿನ ಉದ್ದ ಸಾಲು. 5. ಪತ್ರಿಕೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಗೊತ್ತುಪಡಿಸಿದ ಜಾಗ.

ಅಂಕಣಬರಹ
ಪತ್ರಿಕೆಗಳಲ್ಲಿ ಬರೆಯುವ ನಿಯತವಾದ ನಿರ್ದಿಷ್ಟ ಲೇಖನ.

ಅಂಕಣಿ
ಕುದುರೆಯ ರಿಕಾಪು.

ಅಂಕನ
1. ಗುರುತು ಮಾಡುವುದು. 2. ಬರೆ ಹಾಕುವುದು - ಎಳೆಯುವುದು.

ಅಂಕಪಟ್ಟಿ
ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ನಮೂದಿಸಿರುವ ಪಟ್ಟಿ.

ಅಂಕಪರದೆ
ನಾಟಕದ ಅಂಕದ ಕೊನೆಯಲ್ಲಿ ಬಿಡುವ ತೆರೆ.

ಅಂಕಮಾಲೆ
ಬಿರುದುಗಳುಳ್ಳ ಮಾಲೆ.


logo