Kannada Nighantu by Kannada Sahitya Parishattu : Vol-4
೨. ಉಳ್ಳಿಯ ಸಿಪ್ಪೆ ಬೇವಿನೆಲೆ ತಗರ ಕೋಡು ಮೈಯ ತಿಗುರಿದ ತಿಗುರು ಬಿಳಿಯ ಸಾಸವೆ… ಇವಂ ಸಮಂಗೊಂಡು ಧೂಪವಿಕ್ಕುವುದು
ಪಂಕರುಹದಳನೇತ್ರೆಯರು ಕಾಂತೆಯ ಹೊರೆಗೆ ನಡೆ ತಂದೆಸೆವ ಕುಂಕುಮರಜದೊಳವಯವವ ಉರುತರದೆ ತಾಂ ತಿಗುರುತತಿ ವಿಸ್ತರದಿ ಮಜ್ಜನವೆಸಗಿ
ಎನಗೆ ಬಂದೆಡಱೀ ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ
ನವದುಕೂಲವನಲ್ಲದುಡದ ಮೃಗ ಮದಕುಂಕುಮವನಲ್ಲದಂಗದೊಳು ತಿಗುರದ ಸುವಾಸನೆಯೊಳು… ಒಪ್ಪುವ ಲತಾಂಗಿಯರು ನಡೆತಂದರು
ಶ್ರೀಗಂಧ ಚೀನಿಕರ್ಪೂರ ಇವೆಲ್ಲವಂ ಹಸಿ ಹಾಲಲ್ಲಿ ಅರೆದು ಮೈಯ್ಯಂ ತಿಗುರೆ ತದ್ವರ್ತಿ ಕರಕುಮಾಣ್ಗುಂ
ಘಸೃಣಪಂಕವನಾ ಕುವರಿಗೆ ತಿಗುರಿ ದರಾಳಿಯರು
ಪರಿಮಳವನು ತಿಗುರುವ ಹೆಂಗಳೊಡನೈತಂದರರ್ತಿಯಲಿ
೨. `ಉದ್ವರ್ತನಂ, ಉನ್ಮರ್ದನಂ, ಸೋತ್ಪಾದನಂ, ಛುರಿತಂ- ಈ ೪ ತಿಮಿರುವುದು`
ಲಲಿತಾಂಗಕೆ ನವಚಂದನಪಂಕವನೊಲವಿಂ ತಿಮಿರಿ
ಸುಮನಸುಗಂಧಕದಂಬದ ಕಂಪನು ತಿಮಿರಿ ತೆಗೆಯಲಾಗಿ