logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

A, a
ಪದಗುಚ್ಛ ನುಡಿಗಟ್ಟು
(ಬಹುವಚನ As, A’s, Aes).
  • ಇಂಗ್ಲಿಷ್‍ ವರ್ಣಮಾಲೆಯ ಅಕ್ಷರ.
  • (ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
  • ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
  • (ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
  • (ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.

  • a, an
    ಗುಣವಾಚಕ
    (ಅನಿರ್ದೇಶವಾಚಕ)
  • ಒಂದು; ಒಬ್ಬ; ಯಾವುದಾದರೂ.
  • ಒಂದಾನೊಂದು; ಒಬ್ಬಾನೊಬ್ಬ: once upon a time there lived a king ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ದೊರೆ ಇದ್ದ.
  • ಅಂಥ; ಅವನಂಥ; ಅದರಂಥ; ಆ ತರಹದ: a Daniel ಒಬ್ಬ ಡೇನಿಯಲ್‍; ಡೇನಿಯಲ್‍ನಂಥವನು.
  • ಒಂದೇ ಒಂದು; ಒಂದು ಸಹ: could not see a thing ಒಂದೇ ಒಂದು ವಸ್ತುವನ್ನೂ ನೋಡಲಾಗಲಿಲ್ಲ. to reduce unemployment at a stroke ಒಂದೇ ಏಟಿನಲ್ಲಿ ನಿರುದ್ಯೋಗವನ್ನು ತಗ್ಗಿಸಲು.
  • ಜಾತ್ಯೇಕವಚನವನ್ನು ಸೂಚಿಸುವಾಗ: a cow is an animal (= cows are animals) ಹಸು ಒಂದು ಪ್ರಾಣಿ.
  • ಯಾವುದಾದರೂ ಒಂದರ ಅಂಶವನ್ನು ಸೂಚಿಸುವಾಗ: half a rupee ಅರ್ಧ ರೂಪಾಯಿ. half an hour ಅರ್ಧ ಘಂಟೆ.
  • how, so, as, too ಇವುಗಳಲ್ಲಿ ಒಂದರ ಬಳಿಕ ಗುಣವಾಚಕ ಬಂದಾಗ: how good a man ಎಂಥ ಒಳ್ಳೆಯ ಮನುಷ್ಯ. so pretty a girl ಎಂಥ ಚಂದದ ಹುಡುಗಿ. as efficient a secretary as you desire ನೀವು ಬಯಸುವಷ್ಟು ದಕ್ಷನಾದ ಕಾರ್ಯದರ್ಶಿ. it is too difficult a task ಅದು ಅತಿ ಕಷ್ಟದ ಕೆಲಸ.
  • ಒಂದೇ ತರಹದ, ಮಟ್ಟದ: all of a size ಎಲ್ಲ ಒಂದೇ ಗಾತ್ರದ.
  • ಪ್ರತಿಯೊಂದಕ್ಕೂ; ಪ್ರತಿಯೊಂದರಲ್ಲಿಯೂ: at three miles an hour ಗಂಟೆಗೆ ಮೂರು ಮೈಲಿಗಳಂತೆ. Rs.40 a year ವರ್ಷಕ್ಕೆ ೪೦ ರೂ.ಗಳು twice a day ದಿನಕ್ಕೆ ಯಾ ದಿನದಲ್ಲಿ ಎರಡು ಬಾರಿ.
  • ಯಾರೋ ಒಬ್ಬರು: a Mr. Brown ಯಾರೋ ಒಬ್ಬ ಬ್ರೌನ್‍.

  • a
    ಉಪಸರ್ಗ
    (ಸಾಮಾನ್ಯವಾಗಿ ಪೂರ್ವಪ್ರತ್ಯಯವಾಗಿ)
  • ಮೇಲೆ. abed ಹಾಸಿಗೆಯ ಮೇಲೆ. afire ಉರಿ ಹತ್ತಿ. afoot ಕಾಲಮೇಲೆ; ನಡೆದುಕೊಂಡು.
  • -ಕ್ಕೆ: ashore ದಡಕ್ಕೆ
  • -ಅಲ್ಲಿ: nowadays ಇಂದು; ಈಚಿನ ದಿನಗಳಲ್ಲಿ
  • -ಕಡೆಗೆ; -ಅತ್ತ: aback ಹಿಂದುಗಡೆಗೆ. aside ಪಕ್ಕಕ್ಕೆ; ಪಕ್ಕದ ಕಡೆಗೆ.
  • ಆ ಸ್ಥಿತಿಯಲ್ಲಿ: asleep ನಿದ್ದೆಯಲ್ಲಿ. alive ಬದುಕಿರುವ. a-blaze ಉರಿಯುತ್ತ, ಧಗಧಗಿಸುತ್ತ. a-float ತೇಲುತ್ತ. abuzz ಮೊರೆಯುತ್ತ. aflutter ರಪರಪನೆ ಬಡಿಯತ್ತ.
  • -ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.

  • a-
    ಪೂರ್ವಪ್ರತ್ಯಯ
  • ಒತ್ತಿ ಹೇಳುವಾಗ; ಅತಿಶಯಾರ್ಥಕ: arise ಎದ್ದೇಳು.
  • ನಿಷೇಧಾರ್ಥಕ; ಅಭಾವ ಸೂಚಕ: atheist ನಾಸ್ತಿಕ.
  • ಬೇರೆ ಕಡೆಗೆ: avert ಬೇರೆ ಕಡೆಗೆ ತಿರುಗಿಸು; ತಪ್ಪಿಸು.

  • -a
    ಉತ್ತರಪ್ರತ್ಯಯ
  • ಸ್ತ್ರೀವಾಚಕ: donna (ಇಟಲಿ, ಸ್ಪೇನ್‍ ಮತ್ತು ಪೋರ್ಚುಗಲ್‍ ದೇಶಗಳಲ್ಲಿ) ಮಹಿಳೆ.
  • (ಜೀವವಿಜ್ಞಾನ) ಕೆಲವು ನಾಮವಾಚಕಗಳಲ್ಲಿ: hyena, dahlia.
  • ಭೌಗೋಳಿಕ ನಾಮವಾಚಕಗಳಲ್ಲಿ: Africa.
  • ನಪುಂಸಕ ಬಹುವಚನ ಸೂಚಕ: data, phenomena.
  • (ರಸಾಯನವಿಜ್ಞಾನ) ಕೆಲವು ಆಕ್ಸೈಡುಗಳಲ್ಲಿ: alumina
  • (ಪ್ರಾಣಿವಿಜ್ಞಾನ) ಕೆಲವು ವರ್ಗಗಳ ಹೆಸರುಗಳಲ್ಲಿ: Carnivora.
  • ಪ್ರಾಚೀನ ಯಾ ಲ್ಯಾಟಿನ್‍ ಭಾಷೆಯನ್ನು ಅನುಕರಿಸಿದ ಆಧುನಿಕ ಸ್ತ್ರೀನಾಮಗಳಲ್ಲಿ: Lydia, Hilda.
  • (ಆಡುಮಾತು ಯಾ ಅಶಿಷ್ಟ) of ಎನ್ನುವುದಕ್ಕೆ ಬದಲಾಗಿ: kinda, pinta.
  • (ಆಡುಮಾತು ಯಾ ಅಶಿಷ್ಟ) have ಎಂಬುದಕ್ಕೆ ಬದಲಾಗಿ: mighta.

  • A
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
  • ampere(s).
  • angstrom(s).
  • answer.
  • Associate of.
  • atomic (energy ಮೊದಲಾದವು).

  • a.
    ಸಂಕ್ಷಿಪ್ತ
    atto-.

    AA
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Alcoholics Anonymous.
  • anti-aircraft.
  • (ಬ್ರಿಟಿಷ್‍ ಪ್ರಯೋಗ) Automobile Association.
  • (ಬ್ರಿಟಿಷ್‍ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) 14 ವರ್ಷ ಮೀರಿದವರು ಮಾತ್ರ ನೋಡಬೇಕಾದ.

  • AAA
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) Amateur Athletic Association.
  • (ಅಮೆರಿಕನ್‍ ಪ್ರಯೋಗ) Automobile Association of America.

  • A & M
    ಸಂಕ್ಷಿಪ್ತ
    (Hymns) Ancient and Modern.


    logo