logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಜಲ್
ಒಂದು ಜಾತಿಯ ಮೀನು. ರುಚಿಕರವಾದ ದುಬಾರಿ ಮೀನು (ಉಡ.ಜಿ)

ಅಂಜಲ್‌ಬಲೆ
ಆಳವಾದ ಸಮುದ್ರದಲ್ಲಿ ಬಳಸುವ, ಐದರಿಂದ ಆರು ಇಂಚು ಅಗಲದ ಕಣ್ಣು ಹೊಂದಿರುವ ಬಲೆ (ಉಡು.ಜಿ).
ಬೀಡಿನ ಬಲೆ

ಅಂಜಾಡು
ಈಜಾಡು

ಅಂಜಾಡೆ
ಒಂದು ಬಗೆಯ ಸಸ್ಯ. ದೀವರು ಭೂಮಣ್ಣಿ ಹಬ್ಬದಲ್ಲಿ ದನಗಳನ್ನು ಅಲಂಕರಿಸಲು ಇದರ ಎಲೆಯನ್ನು ಚೆಂಡುಹೂಗಳ ದಂಡೆಗೆ ಸೇರಿಸುತ್ತಾರೆ

ಅಂಜಿ
ಕಂಬಳಿ ನೇಯ್ಗೆಯಲ್ಲಿ ಹತ್ತಿಯಂತೆ ಮೃದುಗೊಂಡ ಉಣ್ಣೆ

ಅಂಜಿ
ನೂಲು ತೆಗೆಯಲು ಬಳಸುವ ಅರಳೆಯ ಸುರಳಿ.
ಹಂಜಿ

ಅಂಜಿಬುಟ್ಟಿ
ಹಿಂಜಿದ ಹತ್ತಿಯಂತೆ ಕಾಣುವ ನರೆಗೂದಲಿನ ತಲೆ

ಅಂಜಿಹುಲ್ಲು
ಸೋಕಿದರೆ ಅಂಟಿಕೊಳ್ಳುವ ಒಂದು ಜಾತಿಯ ಹುಲ್ಲು (ಮೈಸೂ.ಜಿ)

ಅಂಜಿಹೊಡೆಯುವುದು
ಹತ್ತಿ, ಉಣ್ಣೆ ಮೊದಲಾದವನ್ನು ಬಿಡಿಸಿ ಹಂಜಿ ಮಾಡುವುದು; ತುಪ್ಪಟ ಹಿಂಜುವುದು

ಅಂಜು
(ನಾ)
ಬತ್ತದ ಹುಲ್ಲು (ಮಂಡ್ಯ.ಜಿ)


logo