logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗು
ಅವುಗು;

ಅಂಗು
ಕಂಠದ ಸುತ್ತ ರಂಧ್ರವಿರುವ ವಿಶಿಷ್ಟ ಮಡಿಕೆ

ಅಂಗು
ಅಕ್ಕಿಹಿಟ್ಟು, ಬೆಲ್ಲದಿಂದ ಮಾಡಿದ ಸಿಹಿ ತಿಂಡಿ

ಅಂಗುದಾರ
ನೋಡಿ - ಅಂಗದಾರ

ಅಂಗುದೋಸೆ
ಅಕ್ಕಿಹಿಟ್ಟು ಮತ್ತು ಬೆಲ್ಲದ ಪಾಕವನ್ನು ಬೆರೆಸಿ, ಒಲೆಯ ಮೇಲೆ ಕವುಚಿ ಹಾಕಿದ ಅಂಗು ಎಂಬ ವಿಶಿಷ್ಟ ಮಡಿಕೆಯ ಮೇಲೆ ಬಟ್ಟೆಯಲ್ಲಿ ಅದ್ದಿ ಎಳೆದಾಗ ಶಾಖಕ್ಕೆ ತೆಳುವಾದ ಪದರಗಳು ಏಳುತ್ತವೆ. ಅವನ್ನು ಬಿಸಿಹಾಲಿನಲ್ಲಿ ಅದ್ದಿ ತಿನ್ನುತ್ತಾರೆ

ಅಂಗುಲ
ಬೆರಳಿನ ಒಂದು ಗೆಣ್ಣಿನ ಅಳತೆ. ಎರಡು ಬೆರೆಳುಗಳ ಅಡ್ಡಗಲದ ಅಳತೆ

ಅಂಗುಸ್ಥಾನ
ಕೈಹೊಲಿಗೆ ಹಾಕುವಾಗ ಬೆರಳಿಗೆ ಸೂಜಿ ಚುಚ್ಚದಂತೆ ಹಾಕಿಕೊಳ್ಳುವ ಸಣ್ಣ ಟೊಪ್ಪಿಗೆ (ಬೆಳ.ಜಿ)

ಅಂಗೈ
ಹಸ್ತದ ಒಳಭಾಗ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಅಂಗೈಪಣಿ
ಅಂಗೈಯಲ್ಲಿ ಏಳುವ ಹುಣ್ಣು (ಮಂಡ್ಯ.ಜಿ)

ಅಂಗೈ ಮುಂಗೈ ಮಾಡು
ಸುಳ್ಳನ್ನು ನಿಜ ಮಾಡು; ಯಾಮಾರಿಸು; ಮೋಡಿ ಮಾಡು (ಬೊಂಗ್ರಾ.ಜಿ)


logo